Home Entertainment Vinod Raj: ಪುನೀತ್-ಶಿವರಾಜ್ ಕುಮಾರ್ ಬಗ್ಗೆ ಯಾರೂ ತಿಳಿಯದ ಸೀಕ್ರೆಟ್ ರಿವೀಲ್ ಮಾಡಿದ ನಟ ವಿನೋದ್...

Vinod Raj: ಪುನೀತ್-ಶಿವರಾಜ್ ಕುಮಾರ್ ಬಗ್ಗೆ ಯಾರೂ ತಿಳಿಯದ ಸೀಕ್ರೆಟ್ ರಿವೀಲ್ ಮಾಡಿದ ನಟ ವಿನೋದ್ ರಾಜ್ !!

Vinod Raj

Hindu neighbor gifts plot of land

Hindu neighbour gifts land to Muslim journalist

Vinod Raj: ಹಿರಿಯ ನಟ ವಿನೋದ್ ರಾಜ್(Vinod Raj) ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ದೊಡ್ಮನೆ ಕುಡಿಗಳಾದ ಪುನೀತ್ ರಾಜ್ ಕುಮಾರ್(Punith Rajkumar) ಹಾಗೂ ಶಿವರಾಜ್ ಕುಮಾರ್(Shivraj Kumar) ಬಗ್ಗೆ ಕೆಲವು ಸೀಕ್ರೇಟ್ ಗಳನ್ನು ರಿವೀಲ್ ಮಾಡಿದ್ದಾರೆ. ನಟನ ಈ ಮಾತುಗಳಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಹಾಗಿದ್ರೆ ವಿನೋದ್ ರಾಜ್ ಹೇಳಿದ್ದೇನು?

ಪುನೀತ್ ಬಗ್ಗೆ ವಿನೋದ್ ರಾಜ್ ಮಾತು:
‘ಪುನೀತ್ ರಾಜ್ ಕುಮಾರ್ ವಿದ್ಯಾವಂತರು ಅಲ್ದೇ ಇರ್ಬಹುದು. ಆದರೆ ಅವರು ತನ್ನದೇ ಆದ ಸ್ಥಾನವನ್ನು ಸೃಷ್ಟಿ ಮಾಡಿಕೊಂಡು, ಒಬ್ಬ ಉದ್ಯಮಿಯಾಗಲು ಪ್ರಯತ್ನಪಟ್ಟವರು. ಚಿತ್ರರಂಗಕ್ಕೆ ಏನು ಮಾಡ್ಬಹುದು ಅಂತ ಯೋಚ್ನೆ ಮಾಡಿದವ್ರು. PRK ಪ್ರೊಡಕ್ಷನ್ಸ್‌ ಅಂತ ಮಾಡಿ, ಬಹುಶಃ ಅದರ ಮೆಂಟೇನೆನ್ಸ್‌ ಆತನಿಗೆ ಬರ್ಡನ್ ಆಯ್ತು. ತುಂಬಾ ದುಡಿದಾಗ ಹೊಟ್ಟೆ ಹಸಿಯಲ್ಲ, ತುಂಬಾ ಯೋಚ್ನೆ ಮಾಡಿದಾಗ ಹೊಟ್ಟೆ ಹಸಿತದೆ.. ಆತನಿಗೆ ದುಡಿದು ಹೊಟ್ಟೆ ಹಸಿಯಲಿಲ್ಲ, ಯೋಚ್ನೆ ಮಾಡಿ ಹೊಟ್ಟೆ ಹಸಿತು. ಅವ್ರ ಲೈಫಲ್ಲಿ ಅಮ್ಮನ ಕಳ್ಕೊಂಡಿದ್ದು ದೊಡ್ಡ ನಷ್ಟ..’ಎಂದಿದ್ದಾರೆ ನಟ ವಿನೋದ್ ರಾಜ್.

ಶಿವಣ್ಣನ ಬಗ್ಗೆ ವಿನೋದ್ ರಾಜ್ ಮಾತು:
ಶಿವಣ್ಣನ ಬಗ್ಗೆ ಕೂಡ ನಟ ವಿನೋದ್ ರಾಜ್ ಅವರು ‘ನಟ ಶಿವಣ್ಣ ಅವರು ಶ್ರಮ ಜೀವಿ. ಏನೇ ಆಗ್ಲಿ, ಯಾವುದೇ ಕಷ್ಟ ಬರ್ಲಿ ಕೆಲಸ ಮಾಡ್ತಾನೇ ಇರ್ತಾರೆ. ಇವತ್ತಿನವರೆಗೂ ಅವರು ಕೆಲಸ ನಿಲ್ಸಿಲ್ಲ. ಅದೇನೇ ಆಗ್ಲಿ, ನಾನು ಹೋಗ್ತಾನೇ ಇರ್ತೀನಿ ಅನ್ನೋ ತರ ಅವರ ಸ್ವಭಾವ. ಅದು ಅವ್ರ ಹತ್ರ ಕಲಿಬೇಕಾಗಿರೋ ವಿಷ್ಯ, ದೊಡ್ಡ ವಿಷ್ಯ ಅದು. ಅಲ್ಲದೆ ಈ ಕಡೆ ನಿಂದನೆ ಆದ್ರೂ ಇನ್ನೊಂದು ಕಡೆ ಅವಮಾನ ಆದ್ರೂ ನಾನ್ ರೆಡಿ ರೆಡಿ ಅನ್ನೋದು ಇದ್ಯಲ್ಲ ಅದು ತುಂಬಾ ದೊಡ್ಡ ಗುಣ..’ ಎಂದಿದ್ದಾರೆ ನಟ ವಿನೋದ್ ರಾಜ್.

ಹೀಗೆ ಕನ್ನಡದ ‘ಡಾನ್ಸ್ ರಾಜಾ ಡಾನ್ಸ್’ ಖ್ಯಾತಿಯ ನಟ ವಿನೋದ್ ರಾಜ್ ಅವರು ದೊಡ್ಮನೆ ಕುಡಿಗಳಾದ ಶಿವಣ್ಣ ಹಾಗು ಪುನೀತ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.