Home Entertainment Puneeth Rajkumar ಇಷ್ಟದ ಲ್ಯಾಂಬೋರ್ಗಿನಿ ಕಾರನ್ನು ದುಬೈಗೆ ಕಳುಹಿಸಿದ ಪತ್ನಿ ಅಶ್ವಿನಿ

Puneeth Rajkumar ಇಷ್ಟದ ಲ್ಯಾಂಬೋರ್ಗಿನಿ ಕಾರನ್ನು ದುಬೈಗೆ ಕಳುಹಿಸಿದ ಪತ್ನಿ ಅಶ್ವಿನಿ

Hindu neighbor gifts plot of land

Hindu neighbour gifts land to Muslim journalist

ಕನ್ನಡ ಸಿನಿರಂಗದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮ ಜೊತೆ ಇರದಿದ್ದರೂ, ಅವರ ನೆನಪು ಇಂದಿಗೂ ಎಲ್ಲಾ ಅಪ್ಪು ಅಭಿಮಾನಿಗಳು ಮಾತ್ರವಲ್ಲದೆ, ಚಿತ್ರರಂಗದಲ್ಲೇ ಅಚ್ಚಳಿಯದೇ ಉಳಿದಿದೆ. ಆದರೆ ಎಲ್ಲೋ ಒಂದು ಕಡೆ ಅಪ್ಪು ನಿಧನವನ್ನು ಇಂದಿಗೂ ಯಾರಿಗೂ ಅರಗಿಸಿಕೊಳ್ಳಲು ಸಾಧ್ಯವಾಗದೆ ನೋವನ್ನು ಅನುಭವಿಸುತ್ತಿರುವಂತಹುದು ನಿಜ. ಕನ್ನಡ ಸಿನಿಮಾರಂಗದ ಪವರ್ ಸ್ಟಾರ್ ಇಲ್ಲವಾಗಿ 10 ತಿಂಗಳುಗಳೇ ಕಳೆದಿವೆ ಎಂದರೆ ನಿಜಕ್ಕೂ ನಂಬೋಕೆ ಆಗ್ತಿಲ್ಲ.

ದೊಡ್ಡ ಸೆಲೆಬ್ರಿಟಿಯಾಗಿದ್ದರೂ ಸಹ ಅವರ ನಡವಳಿಕೆ, ಪ್ರೀತಿ, ಅಭಿಮಾನ, ವಿನಯವಂತಿಕೆ ಎಂಥವರನ್ನೂ ಬೆರಗು ಮೂಡಿಸುತ್ತದೆ. ಅಪ್ಪುಗೆ ನಾನ್ ವೆಜ್ ಊಟವೆಂದರೆ ಪಂಚಪ್ರಾಣ. ಆದರೂ ಅವರು ಎಂತಹದ್ದೇ ಆಹಾರವನ್ನಾದರೂ ಅಚ್ಚುಮೆಚ್ಚಾಗಿ ತಿನ್ನುತ್ತಾರೆ. ಇನ್ನು ಆಹಾರ ಬಿಟ್ಟರೆ ಅವರಿಗೆ ಕಾರು-ಬೈಕ್ ಗಳ ಮೇಲೆ ಹೆಚ್ಚು ಪ್ರೀತಿ ಎಂದೇ ಹೇಳಬಹುದು. ಕಾರುಗಳ ಪೈಕಿ ಪುನೀತ್ ಗೆ ಇಷ್ಟವಾದ ಕಾರು ಎಂದರೆ ಲ್ಯಾಂಬೊರ್ಗಿನಿ.

ಅಂದ ಹಾಗೆ ಈ ನೀಲಿ ಬಣ್ಣದ ಲ್ಯಾಂಬೋರ್ಗಿನಿ ಕಾರನ್ನು ಪತ್ನಿ ಅಶ್ವಿನಿಗೆ 2019ರಲ್ಲಿ ಗಿಫ್ಟ್ ನೀಡಿದ್ದರು ಪುನೀತ್. ಮಹಿಳಾ ದಿನಾಚರಣೆಯ ಅಂಗವಾಗಿ ಪತ್ನಿಗೆ ಈ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಬರೋಬ್ಬರಿ 4 ಕೋಟಿ ಬೆಲೆಯ ಈ ಕಾರು ನೀಲಿ ಬಣ್ಣದ್ದಾಗಿದೆ. ಆದರೆ ಆ ಕಾರನ್ನು ಹೆಚ್ಚಾಗಿ ಅವರೇ ಉಪಯೋಗಿಸುತ್ತಿದ್ದರು. ಇದೀಗ ಆ ಕಾರನ್ನು ಪುನೀತ್ ನಿಧನದ ಬಳಿಕ ಯಾರೂ ಬಳಕೆ ಮಾಡಿರಲಿಲ್ಲವಂತೆ. ಹೀಗಾಗಿ ಅದನ್ನು ಅಶ್ವಿನಿ ತಮ್ಮ ಸಹೋದರ ದುಬೈನಲ್ಲಿ ನೆಲೆಸಿದ್ದು, ಅವರಿಗೆ ನೀಡಿದ್ದಾರೆ. ಎನ್ನಲಾಗುತ್ತಿದೆ.

ನಟ ಪುನೀತ್ ಬಳಿ ಸಾಕಷ್ಟು ಐಷಾರಾಮಿ ಕಾರುಗಳಿದ್ದವು. ಆಡಿ, ರೇಂಜ್ ರೋವರ್ ಸೇರಿದಂತೆ ಅನೇಕ ಕಾರುಗಳ ಜೊತೆ, ಬೈಕ್ ಗಳೂ ಸಹ ಇದ್ದವು.
ಸಿನಿಮಾ ಹೊರತಾಗಿ ತಮ್ಮ ವೈಯಕ್ತಿಕ ಬದುಕಿನಲ್ಲಿ ಹಲವು ಆಸಕ್ತಿಗಳನ್ನು ಬೆಳೆಸಿಕೊಂಡಿದ್ದ ಅಪ್ಪು, ಕಾರುಗಳ ಬಗ್ಗೆ ಹೆಚ್ಚು ಒಲವು ಹೊಂದಿದ್ದರು.