Home Entertainment ಕ್ರಿಯೇಟಿವ್ ನಿರ್ದೇಶಕ ರಾಜ್ ಬಿ ಶೆಟ್ಟಿ ಮತ್ತು ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಬಗ್ಗೆ ಕೇಳಿಬರುತ್ತಿದೆ...

ಕ್ರಿಯೇಟಿವ್ ನಿರ್ದೇಶಕ ರಾಜ್ ಬಿ ಶೆಟ್ಟಿ ಮತ್ತು ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಬಗ್ಗೆ ಕೇಳಿಬರುತ್ತಿದೆ ಗುಸುಗುಸು ಸುದ್ದಿ !!!

Hindu neighbor gifts plot of land

Hindu neighbour gifts land to Muslim journalist

ಸ್ಯಾಂಡಲ್ ವುಡ್ ಎವರ್ ಗ್ರೀನ್ ಬ್ಯೂಟಿ, ಮೋಹಕ ತಾರೆ ರಮ್ಯಾ ಮತ್ತು ಕ್ರಿಯೇಟಿವ್ ನಿರ್ದೇಶಕ, ನಟ ರಾಜ್ ಬಿ ಶೆಟ್ಟಿ ಬಗ್ಗೆ ಗಾಂಧಿನಗರದಲ್ಲಿ ಹೊಸ ಸುದ್ದಿಯೊಂದು ಕೇಳಿ ಬರುತ್ತಿದೆ.

ನಟಿ ರಮ್ಯಾ ಅಭಿಮಾನಿಗಳು ಬಹಳ ಸಮಯದ ಬಳಿಕ ಸ್ಯಾಂಡಲ್ ವುಡ್ ಗೆ ಕಮ್ ಬ್ಯಾಕ್ ಮಾಡಲಿದ್ದಾರೆ ಎಂಬ ಆಸೆಯಿಂದ ಇದ್ದಾರೆ. ಇದರ ಬಗ್ಗೆ ಕೆಲವು ದಿನಗಳಿಂದ ಸುದ್ದಿ ಕೇಳಿಬರುತ್ತಲೇ ಇದೆ. ಆದರೆ ಇದುವರೆಗೆ ಯಾವುದೇ ಸಿನಿಮಾ ಘೋಷಣೆಯಾಗಿಲ್ಲ. ಆದರೆ ಈಗ ರಮ್ಯಾ ಕತೆಯೊಂದನ್ನು ಒಪ್ಪಿಕೊಂಡಿದ್ದಾರೆ, ಜೊತೆಗೆ ಇದನ್ನು ತಾವೇ ನಿರ್ಮಾಣ ಮಾಡಲು ಮುಂದಾಗಿದ್ದಾರಂತೆ.

ಈ ಸಿನಿಮಾವನ್ನು ರಾಜ್ ಬಿ ಶೆಟ್ಟಿ ನಿರ್ದೇಶಿಸಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ರಾಜ್ ಬಿ ಶೆಟ್ಟಿ ನಿರ್ದೇಶನದ ಗರುಡಗಮನ ವೃಷಭ ವಾಹನ ಸಿನಿಮಾವನ್ನು ರಮ್ಯಾ ಕೂಡಾ ಮೆಚ್ಚಿಕೊಂಡಿದ್ದರು. ಹೀಗಾಗಿ ಈಗ ರಾಜ್ ಬಿ ಶೆಟ್ಟಿ ನಿರ್ದೇಶನದಲ್ಲೇ ರಮ್ಯಾ ಕಮ್ ಬ್ಯಾಕ್ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ. ಆದರೂ ಇವರಿಬ್ಬರ ಕಾಂಬಿನೇಷನ್ ಮೂಲಕ ಚಿತ್ರ ಬಂದರಂತೂ ಸೂಪರ್ ಡೂಪರ್ ಹಿಟ್ ಆಗುವ ನಿರೀಕ್ಷೆ ಖಂಡಿತ ಇದೆ.

ಇತ್ತ ಕಡೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ತಮ್ಮ 777 ಚಾರ್ಲಿ ಸಿನಿಮಾದ ಸಕ್ಸಸ್ ನಲ್ಲಿದ್ದಾರೆ. ಈಗ ತಮ್ಮ ಪರಂವಾ ಸ್ಟುಡಿಯೋ ಬ್ಯಾನರ್ ನಲ್ಲಿ ಇಂದು ಹೊಸ ಸಿನಿಮಾ ಘೋಷಣೆ ಮಾಡುತ್ತಿರುವುದಾಗಿ ಹೇಳಿದ್ದಾರೆ. ಇದು ಅಭಿಮಾನಿಗಳಿಗೆ ನಿಜಕ್ಕೂ ಕಾತುರಕ್ಕೆ ಕಾರಣವಾದ ವಿಷಯವಾಗಿದೆ.

ರಕ್ಷಿತ್ ಘೋಷಿಸುತ್ತಿರುವ ಹೊಸ ಸಿನಿಮಾ ಯಾವುದು ಎಂಬ ಬಗ್ಗೆ ಅಭಿಮಾನಿಗಳಲ್ಲಿ ಈಗಲೇ ಚರ್ಚೆ ಶುರುವಾಗಿದೆ. ಚಾರ್ಲಿ ಸಿನಿಮಾ ಪ್ರಚಾರದ ವೇಳೆ ರಕ್ಷಿತ್ ಇನ್ನು ಸಪ್ತಸಾಗರದಾಚೆ ಎಲ್ಲೊ ಸಿನಿಮಾ ಮುಗಿಸಿ ಕಿರಿಕ್ ಪಾರ್ಟಿ 2, ಉಳಿದವರು ಕಂಡಂತೆ ಪಾರ್ಟ್ 2 ಮುಗಿಸಿ ಬೇರೆ ಸಿನಿಮಾ ಮಾಡುವುದಾಗಿ ಹೇಳಿದ್ದರು.

ಹಾಗಿದ್ದರೆ ರಕ್ಷಿತ್ ಈಗ ಘೋಷಿಸಲಿರುವ ಹೊಸ ಸಿನಿಮಾಗೆ ಬೇರೆಯವರು ನಾಯಕರು ಎಂಬುದು ಪಕ್ಕಾ ಆಗಿದೆ. ಇತ್ತೀಚೆಗೆ ಪಂಚತಂತ್ರ ಖ್ಯಾತಿಯ ವಿಹಾನ್, ಕಿರುತೆರೆ ನಟಿ ಅಂಕಿತಾ ಅಮರ್ ಪ್ರಮುಖ ಪಾತ್ರದಲ್ಲಿರುವ ಸಿನಿಮಾ ಮಾಡುವುದಾಗಿ ರಕ್ಷಿತ್ ಘೋಷಿಸಿದ್ದರು. ಬಹುಶಃ ಇದು ಅದೇ ಸಿನಿಮಾ ವಿಚಾರವಿರಬಹುದು ಎಂದು ಊಹಿಸಲಾಗುತ್ತಿದೆ.