Home Entertainment “777 ಚಾರ್ಲಿ” ಸಿನಿಮಾ ನೋಡಿ ಕಣ್ಣೀರು ಹಾಕಿದ CM “ಬಸವರಾಜ ಬೊಮ್ಮಾಯಿ” ಗೆ ವ್ಯಂಗ್ಯವಾಡಿದ ನಟ...

“777 ಚಾರ್ಲಿ” ಸಿನಿಮಾ ನೋಡಿ ಕಣ್ಣೀರು ಹಾಕಿದ CM “ಬಸವರಾಜ ಬೊಮ್ಮಾಯಿ” ಗೆ ವ್ಯಂಗ್ಯವಾಡಿದ ನಟ ಚೇತನ್ !!!

Hindu neighbor gifts plot of land

Hindu neighbour gifts land to Muslim journalist

ಇತ್ತೀಚೆಗಷ್ಟೇ ನಟ ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾ ನೋಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಧ್ಯಮಗಳ ಮುಂದೆ ಭಾವುಕರಾಗಿ ಸಿನಿಮಾದ ಬಗ್ಗೆ ಮಾತನಾಡಿದ್ದರು. ಈ ವೇಳೆ ಕೆಲ ತಿಂಗಳ ಹಿಂದೆ ನಿಧನ ಹೊಂದಿದ್ದ ಮನೆಯ ನಾಯಿಯನ್ನು ನೆನಪಿಸಿಕೊಂಡಿದ್ದರು.

ಸಿಎಂ ಬೊಮ್ಮಾಯಿ ಅವರು ಕಣ್ಣೀರಿಟ್ಟ ವಿಡಿಯೋ ನೋಡಿರುವ ಚೇತನ್, ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ “ಕನ್ನಡ ಚಿತ್ರವೊಂದನ್ನು ತೆರೆ ಮೇಲೆ ನೋಡಿ ಸಿಎಂ ಬೊಮ್ಮಾಯಿ ಅವರು ಕಣ್ಣೀರು ಹಾಕಿದರೆ, ಬೊಮ್ಮಾಯಿ ಅವರ ಆಡಳಿತವನ್ನು ನೋಡಿ ಕರ್ನಾಟಕದ ಜನತೆ ಕಣ್ಣೀರು ಹಾಕುತ್ತಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.

ಚೇತನ್ ಪೋಸ್ಟ್ ನೋಡಿ ಸಾಕಷ್ಟು ಮಂದಿ ಚೇತನ್ ರನ್ನ ತರಾಟೆಗೆ ತಗೆದುಕೊಂಡಿದ್ದರೆ, ಇನ್ನೂ ಕೆಲವರು ಮೆಚ್ಚುಗೆ ಸೂಚಿಸಿದ್ದಾರೆ.