Home Education 2nd PUC ವಿದ್ಯಾರ್ಥಿಗಳೇ ಗಮನಿಸಿ; ಈ ಬಾರಿ ಪರೀಕ್ಷೆಗೆ ಬಹುಆಯ್ಕೆಯ ಪ್ರಶ್ನೆಗಳೇ ಹೆಚ್ಚು : ವಿದ್ಯಾಥಿಗಳಿಗೆ...

2nd PUC ವಿದ್ಯಾರ್ಥಿಗಳೇ ಗಮನಿಸಿ; ಈ ಬಾರಿ ಪರೀಕ್ಷೆಗೆ ಬಹುಆಯ್ಕೆಯ ಪ್ರಶ್ನೆಗಳೇ ಹೆಚ್ಚು : ವಿದ್ಯಾಥಿಗಳಿಗೆ ಸುಲಭ ಆಗುವಂತೆ ಪ್ರಶ್ನೆ ಪತ್ರಿಕೆ ರಚನೆ ;

Hindu neighbor gifts plot of land

Hindu neighbour gifts land to Muslim journalist

ಕೋವಿಡ್ ಕಾರಣದಿಂದಾಗಿ ಕಳೆದ ವರ್ಷ ಪರೀಕ್ಷೆ ಇಲ್ಲದೆಯೇ ದ್ವಿತೀಯ ಪಿಯು ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗಿತ್ತು. ಪ್ರಸಕ್ತ ಶೈಕ್ಷಣಿಕ ವರ್ಷದ ದ್ವಿತೀಯ ಪಿಯು ಪರೀಕ್ಷೆ ಏ. 22ರಿಂದ ಮೇ.18ರವರೆಗೆ ಪರೀಕ್ಷೆ ನಡೆಯಲಿರುವುದರಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಈ ಕೆಳಗೆ ನೀಡಿರುವ ಮಾಹಿತಿ ಸಿಹಿ ಸುದ್ದಿ ಆಗುವುದರಲ್ಲಿ ಎರಡು ಮಾತಿಲ್ಲ.

ಏಕೆಂದರೆ ಈ ವರ್ಷ ಪರೀಕ್ಷೆಯಲ್ಲಿ ವಿದ್ಯಾಥಿಗಳಿಗೆ ಸರಳ ಆಗುವಂತೆ ಪ್ರಶ್ನೆ ಪತ್ರಿಕೆಯನ್ನು ರಚಿಸಲಾಗಿದೆ. ಒಂದು ಅಂಕ ಬಹುಆಯ್ಕೆಯ ಪ್ರಶ್ನೆಗಳು ಈ ಬಾರಿ ಹೆಚ್ಚಾಗಿ ನೀಡಲಾಗಿದೆ.

ಕೋವಿಡ್ ಮೂರನೇ ಅಲೆ ಭೀತಿ ಹಿನ್ನೆಲೆಯಲ್ಲಿ ಈ ವರ್ಷ ಶೈಕ್ಷಣಿಕ ದಿನಗಳು ಕಡಿಮೆ ಮಾಡಲಾಗಿದೆ. ಆದರೆ ಈ ಬಾರಿ ಪರೀಕ್ಷೆಯನ್ನು ಎಲ್ಲರೂ ಬರೆಯಬೇಕಿದೆ. ಹಾಗಾಗಿ ಪ್ರಶ್ನೆ ಪತ್ರಿಕೆಯಲ್ಲಿ ಕೆಲವು ಸರಳ ಬದಲಾವಣೆ ಮಾಡಲಾಗಿದೆ.

ಹೀಗಿರಲಿದೆ ಪ್ರಶ್ನೆ ಪತ್ರಿಕೆ!: ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ಪ್ರತಿ ಪತ್ರಿಕೆಯನ್ನು ಸುಲಭ ಮಾದರಿಯಲ್ಲಿ ರೂಪಿಸಲಾಗುತ್ತಿದೆ. 1 ಅಂಕದ ಪ್ರಶ್ನೆಗಳನ್ನು 10ಕ್ಕೆ ಹೆಚ್ಚಿಸಲಾಗಿದೆ. ಒಂದು ಅಂಕದ ಪ್ರಶ್ನೆಗಳನ್ನು ಹೆಚ್ಚಿಸಿದ್ದು ಮತ್ತು ಪ್ರಶ್ನೆಗಳಿಗೆ ಬಹು ಆಯ್ಕೆ ನೀಡಿರುವುದು ಇನ್ನಷ್ಟು ಸರಳವಾಗಿದೆ.

ಮೊದಲು ವಿಜ್ಞಾನ ವಿಷಯದಲ್ಲಿ ಒಂದು ಪ್ರಶ್ನೆ ಪತ್ರಿಕೆಯಲ್ಲಿ 105 ಪ್ರಶ್ನೆಗಳು ಇರುತ್ತಿದ್ದವು. ಈ ಬಾರಿಯಿಂದ 140 ಪ್ರಶ್ನೆಗಳಿರಲಿದೆ. ಆದರೆ, ವಿದ್ಯಾರ್ಥಿಗಳು 70 ಅಂಕಗಳಿಗೆ ಉತ್ತರಿಸಬೇಕಿದೆ. ಈ ಮೊದಲು ಕಲಾ ಹಾಗೂ ವಾಣಿಜ್ಯ ವಿಭಾಗದ ಪತ್ರಿಕೆಗಳಿಗೆ 140 ಪ್ರಶ್ನೆಗಳಿರುತ್ತಿದ್ದವು, ಈ ಬಾರಿ 167 ಕ್ಕೆ ಹೆಚ್ಚಿಸಲಾಗಿದೆ. 100 ಅಂಕಗಳಿಗಷ್ಟೇ ಉತ್ತರಿಸಬೇಕಿದೆ.

ಬಹುಆಯ್ಕೆ ಪ್ರಶ್ನೆಗಳ ಸಂಖ್ಯೆ ಹೆಚ್ಚಾಗಿರುವ ಕಾರಣದಿಂದಾಗಿ ವಿದ್ಯಾರ್ಥಿಗಳು ಕಡಿಮೆ ಓದಿದರೂ ಅಂದರೆ ಶೇಕಡಾ 50-60 ರಷ್ಟು ಪಠ್ಯ ಓದಿದರೂ ಶೇ. 75 ರಷ್ಟು ಅಂಕಗಳ ಸುಲಭವಾಗಿ ಪಡೆಯಬಹುದು. ಈ ಮೊದಲು ಡಿಸ್ಟಿಂಕ್ಷನ್‌ಷ್ಟು ಅಂಕ ಪಡೆಯಲು ಕನಿಷ್ಠ ಶೇ. 80 ರಷ್ಟು ಪಠ್ಯ ಓದಬೇಕಿತ್ತು. ಆದರೆ ಈ ಬಾರಿ ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಪ್ರಶ್ನೆ ಪತ್ರಿಕೆ ರೂಪಿಸಲಾಗುತ್ತಿದ್ದು, ಡಿಸ್ಟಿಂಕ್ಷನ್‌ನಲ್ಲಿ ಪಾಸ್ ಆಗುವುದು ಸುಲಭವಾಗಿದೆ. ಪ್ರಶ್ನೆ ಪತ್ರಿಕೆಯ ಈ ಹೊಸ ನಿಯಮ ಈ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಇರಲಿದೆ.