Home Education Scholarship for students | ಸ್ನಾತಕೋತ್ತರ ಪದವೀಧರರಿಗೆ ದೊರೆಯಲಿದೆ 2ಲಕ್ಷದವರೆಗೆ ಸ್ಕಾಲರ್ಷಿಪ್!

Scholarship for students | ಸ್ನಾತಕೋತ್ತರ ಪದವೀಧರರಿಗೆ ದೊರೆಯಲಿದೆ 2ಲಕ್ಷದವರೆಗೆ ಸ್ಕಾಲರ್ಷಿಪ್!

scholarship

Hindu neighbor gifts plot of land

Hindu neighbour gifts land to Muslim journalist

ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸಕ್ಕಾಗಿ ಫಿನ್‌ಟೆಕ್‌ ಸ್ಟಾರ್ಟಪ್‌ ಪ್ರಾಪೆಲ್ಡ್‌ ಲಕ್ಷದವರೆಗೆ ಸ್ಕಾಲರ್ಷಿಪ್ ನೀಡುತ್ತಿದ್ದು, ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸುತ್ತಿದೆ.

2023-2024 ಬ್ಯಾಚ್‌ನ ಸ್ನಾತಕ ವಿದ್ಯಾರ್ಥಿಗಳು ಈ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿಗಳು ತಮ್ಮ ಸ್ನಾತಕ ಪದವಿಯ ಒಟ್ಟು ಶುಲ್ಕದ ಶೇಕಡ 60ರಷ್ಟು ಮೊತ್ತ ಅಥವಾ 2 ಲಕ್ಷ ರೂ.ವರೆಗೆ ಸ್ಕಾಲರ್‌ಶಿಪ್‌ ಆಗಿ ಪಡೆಯಬಹುದು. ಇದರೊಂದಿಗೆ ಶಾಲಾ ಶುಲ್ಕ ಹೊರತುಪಡಿಸಿದ ಇತರೆ ವೆಚ್ಚಗಳನ್ನು ಗರಿಷ್ಠ 1 ಲಕ್ಷ ರೂ.ನಷ್ಟು ಸ್ಕಾಲರ್‌ಶಿಪ್‌ನಲ್ಲಿ ಪಡೆಯಬಹುದಾಗಿದೆ.

ಈ ಕುರಿತು ಪ್ರಾಪೆಲ್ಡ್‌ನ ಸಹ ಸ್ಥಾಪಕರಾದ ಬಿಭು ಪ್ರಸಾದ್‌ ದಾಸ್‌ “ಸ್ನಾತಕೋತ್ತರ ಪದವಿ ಮೂಲಕ ತಮ್ಮ ಮಹತ್ವಾಕಾಂಕ್ಷೆಗಳನ್ನು ಮುಂದುವರಿಸಲು ಬಯಸುವ ವಿದ್ಯಾರ್ಥಿಗಳಿಗೆ ಹಣಕಾಸಿನ ಸಮಸ್ಯೆಯನ್ನು ಪರಿಹರಿಸಲು ಪ್ರೊಪೆಲ್ಡ್ ಬಯಸುತ್ತಿದೆ. ಈ ವಿದ್ಯಾರ್ಥಿವೇತನ ಉಪಕ್ರಮದೊಂದಿಗೆ, ತಮ್ಮ ಶಿಕ್ಷಣವನ್ನು ಮುಂದುವರಿಸಲು ಬಯಸುವ ಅರ್ಹ ವಿದ್ಯಾರ್ಥಿಗಳ ಕನಸುಗಳನ್ನು ಈಡೇರಿಸಲು ನಾವು ಬಯಸುತ್ತೇವೆ.” ಎಂದು ಹೇಳಿದ್ದಾರೆ.

ಭಾರತದ ವಿಶ್ವವಿದ್ಯಾಲಯಗಳಲ್ಲಿ ಕಲಿಯುತ್ತಿರುವ ಸ್ನಾತಕೋತ್ತರ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದ್ದು, ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಅರ್ಜಿ ನಮೂನೆ ಭರ್ತಿ ಮಾಡಿ ಅಗತ್ಯವಿರುವ ದಾಖಲೆಗಳನ್ನೂ ಅಪ್ಲೋಡ್‌ ಮಾಡುವ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.

ವೆಬ್ ಸೈಟ್ : scholarship.propelld.com