Home Education Karnataka SSLC Result 2023: SSLC ಫಲಿತಾಂಶ ಪ್ರಕಟ: ಈ ಬಾರಿ ಚಿತ್ರದುರ್ಗ ಫಸ್ಟ್‌, ಸೆಕೆಂಡ್‌...

Karnataka SSLC Result 2023: SSLC ಫಲಿತಾಂಶ ಪ್ರಕಟ: ಈ ಬಾರಿ ಚಿತ್ರದುರ್ಗ ಫಸ್ಟ್‌, ಸೆಕೆಂಡ್‌ ಮಂಡ್ಯ! ಬಾಲಿಕೆಯರ ಸ್ಥಾನ ಭದ್ರ

Karnataka SSLC Result 2023
Image Credit Source: Vijayakarnataka

Hindu neighbor gifts plot of land

Hindu neighbour gifts land to Muslim journalist

Karnataka SSLC Result 2023: ಬಹು ನಿರೀಕ್ಷಿತ ಮತ್ತು ಬಹು ಚರ್ಚಿತ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಇದೀಗ ಪ್ರಕಟಗೊಂಡಿದ್ದು ಈ ಬಾರಿ ಚಿತ್ರದುರ್ಗ ಮೊದಲ ಸ್ಥಾನ ನಂತರದ ಸ್ಥಾನ ಮಂಡ್ಯ ಪಡೆದುಕೊಂಡಿದೆ. ಮೂರನೇ ಸ್ಥಾನವನ್ನು ಹಾಸನ ಜಿಲ್ಲೆ ಪಡೆದುಕೊಂಡಿದೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ, ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು (Karnataka SSLC Result 2023) ಇಂದು ಅಂದರೆ ದಿನಾಂಕ 08-05-2023 ರಂದು ಬೆಳಿಗ್ಗೆ 10.00 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ಪ್ರಕಟಿಸಿದೆ. ಕರ್ನಾಟಕ 10 ನೇ ತರಗತಿಯ ಪರೀಕ್ಷೆಯ ಫಲಿತಾಂಶದ ಲಿಂಕ್ ಅಧಿಕೃತ ವೆಬ್‌ಸೈಟ್ – karresults.nic.in – ಬೆಳಿಗ್ಗೆ 11 ಗಂಟೆಗೆ ಲಭ್ಯವಿರುತ್ತದೆ.

ಎಂದಿನಂತೆ ಈ ಬಾರಿ ಕೂಡಾ ಹುಡುಗಿಯರೇ ಮೇಲುಗೈ ಸಾಧಿಸಿದ್ದಾರೆ.  ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್‌ಗಳಾದ karresults.nic.in ಮತ್ತು https://kseab.karnataka.gov.in/ ನಲ್ಲಿ ಬಿಡುಗಡೆ ಮಾಡಲಾಗಿದೆ.

ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಪರೀಕ್ಷಾ ಮಂಡಳಿಯು ಮಾರ್ಚ್‌ 31, 2023 ರಿಂದ ಎಪ್ರಿಲ್‌ 15ರವರೆಗೆ ನಡೆಸಿದೆ. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆಯು ಎಪ್ರಿಲ್‌ 21ರಿಂದ ಪ್ರಾರಂಭವಾಗಿತ್ತು. ಇದೀಗ ಮೌಲ್ಯಮಾಪನದ ಎಲ್ಲಾ ಕೆಲಸ ಮುಗಿದಿದ್ದು, ಫಲಿತಾಂಶ ಬಿಡುಗಡೆಯಾಗಿದೆ. ಈ ಬಾರಿ ಶಾಲಾ ವಿದ್ಯಾರ್ಥಿಗಳು 7,94,611, ಪುನರಾವರ್ತಿತ ವಿದ್ಯಾರ್ಥಿಗಳು, 20,750, ಖಾಸಗಿ ಅಭ್ಯರ್ಥಿಗಳು 18,272, ಖಾಸಗಿ ಪುನರಾವರ್ತಿತ ಅಭ್ಯರ್ಥಿಗಳು 8,859 ಪರೀಕ್ಷೆ ಬರೆದಿದ್ದರು.

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪರಿಶೀಲನೆ ಮಾಡುವ ವಿಧಾನ ಹೀಗಿದೆ:
# ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯನಿರ್ಣಯ ಮಂಡಳಿಯ ಅಧಿಕೃತ ವೆಬ್‌ಸೈಟ್‌ https://kseab.karnataka.gov.in/ ಅಥವಾ karresults.nic.in ಗೆ ಭೇಟಿ ನೀಡಬೇಕು.
# ಈ ಪೇಜ್‌ ಓಪನ್ ಆದ ಬಳಿಕ ಎಸ್‌ಎಸ್‌ಎಲ್‌ಸಿ ಫಲಿತಾಂಶಕ್ಕೆ ಸಂಬಂಧಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
# ಆ ಬಳಿಕ, ತಮ್ಮ ಎಸ್‌ಎಸ್‌ಎಲ್‌ಸಿ ರಿಜಿಸ್ಟರ್ ನಂಬರ್ ಮತ್ತು ಜನ್ಮ ದಿನಾಂಕ ಮಾಹಿತಿ ಟೈಪ್‌ ಮಾಡಬೇಕು.
# ‘Submit’ ಎಂಬಲ್ಲಿ ಕ್ಲಿಕ್ ಮಾಡಿಕೊಂಡರೆ ಫಲಿತಾಂಶದ ಪೇಜ್‌ ಓಪನ್‌ ಆಗುತ್ತದೆ.
# ಈ ಕಾಪಿ ಅನ್ನು ಡೌನ್‌ಲೋಡ್‌ ಮಾಡಿ ಪ್ರಿಂಟ್ ತೆಗೆದುಕೊಂಡರೆ ಒಳ್ಳೆಯದು.