Home Death Heart Attack: ಹಠಾತ್‌ ಕುಸಿದು ಬಿದ್ದು ವೇದಿಕೆಯಲ್ಲೇ ಕೊನೆಯುಸಿರೆಳೆದ 24ರ ಹರೆಯದ ಟೆಕ್ಕಿ

Heart Attack: ಹಠಾತ್‌ ಕುಸಿದು ಬಿದ್ದು ವೇದಿಕೆಯಲ್ಲೇ ಕೊನೆಯುಸಿರೆಳೆದ 24ರ ಹರೆಯದ ಟೆಕ್ಕಿ

Hindu neighbor gifts plot of land

Hindu neighbour gifts land to Muslim journalist

Heart Attack: ಅಹ್ಮದಾಬಾದ್‌ನ ಕಾಲೇಜೊಂದರಲ್ಲಿ ನಡೆದ ಐಟಿ ಕಾರ್ಯಕ್ರಮವೊಂದರಲ್ಲಿ 24ರ ಹರೆಯ ಐಟಿ ಉದ್ಯೋಗಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಭಾನುವಾರ ಸಂಜೆ ಸೂರತ್‌ನಲ್ಲಿ ನಡೆದ ಮಾಹಿತಿ ತಂತ್ರಜ್ಞಾನ ಕಾರ್ಯಕ್ರಮದಲ್ಲಿ ಈ ದುರಂತ ನಡೆದಿದೆ.ಮೂಲತಃ ರಾಯ್‌ಪುರದವರಾದ ಝಿಲ್ ಥಕ್ಕರ್ ಸಾವನ್ನಪ್ಪಿದ್ದವರು. ವೆಬ್ ಡೆವಲಪರ್ ಆಗಿರುವ ಝಿಲ್ ಥಕ್ಕರ್ ಕಪೋದ್ರಾದ ಶ್ರೀ ಸ್ವಾಮಿ ಆತ್ಮಾನಂದ ಸರಸ್ವತಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (SSASIT) ನಲ್ಲಿ ನಡೆದ ವರ್ಡ್‌ಕ್ಯಾಂಪ್ ಸೂರತ್ 2025 ರಲ್ಲಿ ಭಾಗವಹಿಸಲು ಬಂದಿದ್ದರು. ಕಾರ್ಯಕ್ರಮದ ವೇದಿಕೆಯಲ್ಲಿದ್ದ ಅವರು ಭಾಷಣ ಮುಗಿಸಿದ ಕೆಲವೇ ಕ್ಷಣಗಳಲ್ಲಿ ವೇದಿಕೆಯ ಮೇಲೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.ಸಂಜೆ 5 ಗಂಟೆ ಸುಮಾರಿಗೆ, ಥಕ್ಕರ್ ತಮ್ಮ ಕಂಪನಿಯನ್ನು ಪ್ರತಿನಿಧಿಸಲು ವೇದಿಕೆಯ ಮೇಲೆ ಬಂದಿದ್ದರು. ಅಲ್ಲಿ ಭಾಷಣ ಮುಗಿಸಿದ ಕೆಲವೇ ಕ್ಷಣಗಳಲ್ಲಿ ಅವರು ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರನ್ನು ಬದುಕುಳಿಸಲು ಸಾಧ್ಯವಾಗಲಿಲ್ಲ.ಪ್ರಾಥಮಿಕ ಮಾಹಿತಿಯ ಪ್ರಕಾರ ಆಕೆಗೆ ಹೃದಯಾಘಾತವಾಗಿದೆ ಎಂದು ತಿಳಿದು ಬಂದಿದೆ.