Home Crime Darshan : ದರ್ಶನ್ ಜಾಮೀನಿನ ಮೇಲೆ ಹೊರಬರಲು ಶ್ಯೂರಿಟಿ ಹಾಕಿದ್ದು ಯಾರು? ಇವರಿಬ್ಬರೇ ನೋಡಿ

Darshan : ದರ್ಶನ್ ಜಾಮೀನಿನ ಮೇಲೆ ಹೊರಬರಲು ಶ್ಯೂರಿಟಿ ಹಾಕಿದ್ದು ಯಾರು? ಇವರಿಬ್ಬರೇ ನೋಡಿ

Hindu neighbor gifts plot of land

Hindu neighbour gifts land to Muslim journalist

Darshan : ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಅರೆಸ್ಟ್ ಆಗಿದ್ದ ದರ್ಶನ್(Darshan ) ಅವರು 131 ದಿನಗಳ ಬಳಿಕ ಜೈಲಿನಿಂದ ಹೊರ ಬರುತ್ತಿದ್ದಾರೆ. ಅವರು ಅನಾರೋಗ್ಯದ ಕಾರಣ ನೀಡಿ ಜಾಮೀನು ಪಡೆದಿದ್ದಾರೆ. ಕರ್ನಾಟಕ ಹೈಕೋರ್ಟ್(Highcourt ) ದರ್ಶನ್ ಅವರಿಗೆ 6 ವಾರಗಳ ಮಧ್ಯಂತರ ಜಾಮೀನನ್ನು ನೀಡಿದೆ. ಈ ಹಿನ್ನಲೆಯಲ್ಲಿ ದರ್ಶನ್ ಹೊರಬರಲು ಇಬ್ಬರು ಶ್ಯೂರಿಟಿ ಹಾಕಬೇಕಿತ್ತು. ಹಾಗಿದ್ರೆ ದರ್ಶನ್ ಗೆ ಶ್ಯೂರಿಟಿ ಹಾಕಿದವರು ಯಾರು?

ದರ್ಶನ್ ಹೊರಗಿದ್ದಾಗಲೂ ಜೊತೆಯಲ್ಲಿದ್ದ, ಜೈಲು ಪಾಲಾದ ಬಳಿಕ ಆಗಾಗ ಜೈಲಿಗೆ ಭೇಟಿ ನೀಡಿ ದರ್ಶನ್​ಗೆ ಧೈರ್ಯ ಹೇಳ್ತಿದ್ದ ನಟ ಧನ್ವೀರ್ ಇದೀಗ ದರ್ಶನ್​ ಜಾಮೀನಿಗೆ ಶ್ಯೂರಿಟಿ ನೀಡ್ತಿದ್ದಾರೆ. ಧನ್ವೀರ್ ಜೊತೆಗೆ ಸಹೋದರ ದಿನಕರ್‌ ಅವರು ಶ್ಯೂರಿಟಿ ನೀಡಿದ್ದಾರೆ.

ಅಲ್ಲದೆ ಇಬ್ಬರ ಶ್ಯೂರಿಟಿ ಪ್ರಕ್ರಿಯೆ ವೇಳೆ ಶ್ಯೂರಿಟಿ ನೀಡುತ್ತಿರುವ ಇಬ್ಬರಿಗೆ ದರ್ಶನ್ ಏನ್ ಆಗಬೇಕು ಅಂತ ನ್ಯಾಯಾಧೀಶರ ಪ್ರಶ್ನೆ ಇಟ್ಟಿದ್ದಾರೆ. ದರ್ಶನ್ ಸ್ನೇಹಿತ ಆಗಬೇಕು ಎಂದು ಧನ್ವಿರ್‌ ಹೇಳಿದ್ದಾರೆ. ದಿನಕರ್ ಸಹೋದರ ಅಂತ ನ್ಯಾಯಾಧೀಶರಿಗೆ ಉತ್ತರ ನೀಡಿದ್ದಾರೆ. ಪ್ರಾಪರ್ಟಿಗಳು ಎಲ್ಲಿವೆ ಅಂತ ನ್ಯಾಯಾಧೀಶರ ಪ್ರಶ್ನೆ..? ಇಟ್ಟಾಗ, ರಾಜಾಜಿನಗರ ಹಾಗೂ ಮಾಗಡಿರೋಡ್ ಅಂತ ನ್ಯಾಯಾಧೀಶರಿಗೆ ಉತ್ತರ ನೀಡಿದ್ದಾರೆ.

ಇನ್ನು ದರ್ಶನ್ ಅವರನ್ನು ಬಳ್ಳಾರಿ ಜೈಲಿಂದ ಕರೆದುಕೊಂಡು ಬರಲು ಎಲ್ಲಾ ವ್ಯವಸ್ಥೆ ಧನ್ವೀರ್ ಮಾಡ್ತಿದ್ದಾರೆ. ದರ್ಶನ್​ ಬೆಂಬಲಕ್ಕೆ ಧನ್ವಿರ್​ ನಿಂತಿದ್ದನ್ನು ಕಂಡ ದರ್ಶನ್ ಫ್ಯಾನ್​ ಧನ್ವೀರ್​ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 6 ವಾರಗಳ ಕಾಲ ಜಾಮೀನು ಮಂಜೂರು ಮಾಡಿರುವ ನ್ಯಾಯಾಲಯ, ಮಧ್ಯಂತರ ಜಾಮೀನಿಗೆ ಸಾಕಷ್ಟು ಷರತ್ತುಗಳನ್ನು ವಿಧಿಸಿದೆ. 131 ದಿನಗಳ ಬಳಿಕ ದರ್ಶನ್​ ಜೈಲಿನಿಂದ ಹೊರಗೆ ಬರ್ತಿದ್ದಾರೆ. ಬಳ್ಳಾರಿ ಜೈಲು ಸೇರಿ ದರ್ಶನ್ 65 ದಿನಗಳು ಕಳೆದಿತ್ತು. ಇದೀಗ ದಾಸನಿಗೆ ಬಿಡುಗಡೆ ಭಾಗ್ಯ ಲಭಿಸಿದೆ. ಜಾಮೀನು ಅದೇಶ ಜೈಲಾಧಿಕಾರಿಗಳ ಕೈ ಸೇರುತ್ತಿದ್ದಂತೆ ದರ್ಶನ್​ ರಿಲೀಸ್ ಆಗಲಿದ್ದಾರೆ.