Home Crime Student Ragging: ಶಾಲೆಯಲ್ಲಿ ವಿದ್ಯಾರ್ಥಿಯೋರ್ವನ ಮೇಲೆ ರ್ಯಾಗಿಂಗ್‌, ಬೆತ್ತಲೆ ಮೆರವಣಿಗೆ ನಡೆಸಿದ ಸಹಪಾಠಿಗಳು!

Student Ragging: ಶಾಲೆಯಲ್ಲಿ ವಿದ್ಯಾರ್ಥಿಯೋರ್ವನ ಮೇಲೆ ರ್ಯಾಗಿಂಗ್‌, ಬೆತ್ತಲೆ ಮೆರವಣಿಗೆ ನಡೆಸಿದ ಸಹಪಾಠಿಗಳು!

Hindu neighbor gifts plot of land

Hindu neighbour gifts land to Muslim journalist

Student Ragging: ಒಂಭತ್ತನೇ ತರಗತಿ ವಿದ್ಯಾರ್ಥಿಯೊಂದಿಗೆ ರ್ಯಾಗಿಂಗ್‌ ಮಾಡಿರುವ ಘಟನೆಯೊಂದು ಜಬಲ್ಪುರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಆತನ ಸಹಪಾಠಿಯೇ ಬಟ್ಟೆ ಬಿಚ್ಚಿಸಿ ಹಲ್ಲೆ ಮಾಡಿದ್ದಾರೆ ಎಂದು ವಿದ್ಯಾರ್ಥಿ ಆರೋಪ ಮಾಡಿದ್ದಾನೆ.

ಜಬಲ್ಪುರ ಜಿಲ್ಲೆಯ ಗ್ವಾರಿಘಾಟ್‌ನ ಪೋಲಿ ಪಥರ್‌ನಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ ಒಂಬತ್ತನೇ ತರಗತಿಯ ವಿದ್ಯಾರ್ಥಿಗೆ ರ್ಯಾಗಿಂಗ್ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಮಕ್ಕಳ ಕುಟುಂಬಸ್ಥರು ಜಬಲ್‌ಪುರದ ಗ್ವಾರಿಘಾಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ವೇಳೆ ಮೂವರು ಮಕ್ಕಳ ಹೆಸರು ಬೆಳಕಿಗೆ ಬಂದಿದೆ. ಅಲ್ಲದೆ ವಿದ್ಯಾರ್ಥಿಯ ಬಟ್ಟೆಗಳನ್ನು ತೆಗೆದು ಥಳಿಸಲಾಗಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅದೇ ತರಗತಿಯ ಮೂವರು ವಿದ್ಯಾರ್ಥಿಗಳು ಆತನಿಗೆ ಥಳಿಸಿದ್ದು ಮಾತ್ರವಲ್ಲದೇ ವಿದ್ಯಾರ್ಥಿಯ ಬಟ್ಟೆ ತೆಗೆದು ಬೆತ್ತಲೆ ಮೆರವಣಿಗೆ ಕೂಡಾ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಸಂತ್ರಸ್ತ ವಿದ್ಯಾರ್ಥಿಯ ಕುಟುಂಬಸ್ಥರು ಶಾಲಾ ಆಡಳಿತ ಮಂಡಳಿಗೆ ಈ ಕುರಿತು ದೂರನ್ನು ನೀಡಿದ್ದಾರೆ. ಬಾಲಕನ ಪ್ಯಾಂಟ್‌ ಬಿಚ್ಚಿ ಥಳಿಸಿರುವ ಕುರಿತು ಜಬಲ್‌ಪುರದ ಹೆಚ್ಚುವರಿ ಎಸ್‌ಪಿ ಕಮಲ್‌ ಮೌರ್ಯ ಅವರು ತಿಳಿಸಿರುವ ವರದಿಯಾಗಿದೆ. ಮಕ್ಕಳ ಹೇಳಿಕೆಗಳನ್ನು ಪಡೆದುಕೊಳ್ಳಲಾಗುತ್ತಿದ್ದು, ಈ ಘಟನೆ ಕುರಿತು ಮಾತನಾಡಲು ಶಾಲಾ ಆಡಳಿತ ಮಂಡಳಿ ನಿರಾಕರಿಸಿದೆ.