Home Crime ಫೇಕ್ ಪೋಸ್ಟ್: ಉದ್ಯಮಿ ಗಣೇಶ್ ಗೌಡ ಕಲಾಯಿರಿಂದ ಸೈಬ‌ರ್ ಕ್ರೈಮ್’ಗೆ ದೂರು, ಬಂಧನ ಭೀತಿಯಲ್ಲಿ ಪೋಸ್ಟ್,...

ಫೇಕ್ ಪೋಸ್ಟ್: ಉದ್ಯಮಿ ಗಣೇಶ್ ಗೌಡ ಕಲಾಯಿರಿಂದ ಸೈಬ‌ರ್ ಕ್ರೈಮ್’ಗೆ ದೂರು, ಬಂಧನ ಭೀತಿಯಲ್ಲಿ ಪೋಸ್ಟ್, ಪ್ರೊಫೈಲ್ ಡಿಲೀಟ್

Crime

Hindu neighbor gifts plot of land

Hindu neighbour gifts land to Muslim journalist

Belthangady: ಬೆಳ್ತಂಗಡಿ: ಕೊಕ್ಕಡ ಗ್ರಾಮದ ಗಣೇಶ್ ಗೌಡ ಕೆ. ನಿವಾಸಿ ಎಂಬವರ ಪೋಟೋವನ್ನು ದುರುಪಯೋಗ ಮಾಡಿ “ಭೀಮ ಬಿ ನಾಯಕ್” ಎಂಬ ನಕಲಿ ಫೇಸ್ಟುಕ್ ಪೇಜ್ ನಲ್ಲಿ ಸತ್ಯಕ್ಕೆ ದೂರವಾದ, ಧರ್ಮಸ್ಥಳ ವಿಚಾರವನ್ನು ಕೂಡಾ ಎಳೆತಂದು ಹಾಕಿರುವ ಪೋಸ್ಟ್ ಬಗ್ಗೆ ಮಂಗಳೂರು ಸೈಬ‌ರ್ ಕ್ರೈಮ್ ಗೆ ಇದೀಗ ದೂರು ನೀಡಲಾಗಿದೆ.

ಆಗಸ್ಟ್ 23 ರಂದು ಕೊಕ್ಕಡ ನಿವಾಸಿ, ಉದ್ಯಮಿ ಮತ್ತು ಸಾಮಾಜಿಕ ಕಾರ್ಯಕರ್ತರಾಗಿರುವ ಗಣೇಶ್ ಗೌಡ ಕಲಾಯಿಯವರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಪತ್ತೆ ಹಚ್ಚುವ ಭರವಸೆ ನೀಡಿದ್ದಾರೆ ಎಂದು ದೂರುದಾರ ಗಣೇಶ್ ಗೌಡ ಕಲಾಯಿ ತಿಳಿಸಿದ್ದಾರೆ.
“2023ರಿಂದಲೂ ನನ್ನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಇದೇ ರೀತಿ ಫೋಟೋ ಬಳಸಿ, ಎಡಿಟ್ ಮಾಡಿ ಅವಹೇಳನ ನಡೆಸಿಕೊಂಡು ಬಂದಿದ್ದು, ಇದು ನಿರಂತರವಾಗಿ ಮುಂದುವರೆದಿದೆ. ನಾನು ಈ ಬಗ್ಗೆಯೂ ಹಿಂದೆ ದೂರು ನೀಡಿದ್ದರೂ, ಇಂತಹ ಘಟನೆ ಪದೇ ಪದೇ ನಡೆಯುತ್ತಿದೆ.

ತಕ್ಷಣ ಈ ಕೃತ್ಯ ಎಸಗಿದವರನ್ನು ಬಂಧಿಸಬೇಕು. ಕೆಲ ಸಂಸ್ಥೆಗಳ ವಿರುದ್ಧ ನನ್ನನ್ನು ಎತ್ತಿ ಕಟ್ಟುವ ಕೆಲಸ ನಡೆಯುತ್ತಿದೆ. ಈ ಹಿಂದೆ ಕೂಡಾ ನಾನು ದೂರು ನೀಡಿದ್ದ ಕಾರಣ, ಬೆಳ್ತoಗಡಿ ಮೂಲದ, ಕೊಕ್ಕಡದ ಓರ್ವ ಆರೋಪಿಯ ಕೈವಾಡ ಇದರಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಪೊಲೀಸರು ತಕ್ಷಣ ಆರೋಪಿಯನ್ನು ಬಂಧಿಸಬೇಕು” ಎಂದು ಗಣೇಶ್ ಗೌಡ ಕಲಾಯಿ ಎಸ್’ಪಿ ಯವರನ್ನು ಆಗ್ರಹಿಸಿದ್ದಾರೆ.

ಪೋಸ್ಟ್ ಡಿಲೀಟ್ ಮಾಡಿದ ಆರೋಪಿ
ಎಸ್ ಪಿಯವರು ಮನವಿಗೆ ಸ್ಪಂದಿಸಿದ್ದು, SP ಮೂಲಕ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬೆಳ್ತಂಗಡಿ ತಾಲೂಕಿನ ಕೊಕ್ಕಡ ಮೂಲದ ವ್ಯಕ್ತಿ ಈ ಹಿಂದೆ 3 ಬಾರಿ ಇಂಥದ್ದೇ ಕೃತ್ಯ ಎಸಗಿದ್ದ. ಈ ಬಗ್ಗೆ ಮಂಗಳೂರಿನ ಊರ್ವ ಸನ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಕೊನೆಗೆ ಪೊಲೀಸರಿಗೆ ಮುಚ್ಚಳಿಕೆ ಬರೆದು ಕೊಟ್ಟು ಬಚಾವಾಗಿದ್ದ. ಇದೀಗ ಈ ವ್ಯಕ್ತಿಯು ಮತ್ತೆ ತನ್ನ ಚಾಳಿಯನ್ನು ಶುರು ಮಾಡಿದ್ದು ಈಗ ದೂರು ದಾಖಲಾಗಿ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾದ ಬೆನ್ನಲ್ಲೇ ಪೊಲೀಸ್ ಕ್ರಮದ ಭೀತಿಯಲ್ಲಿ ಪೋಸ್ಟ್ ಡಿಲೀಟ್ ಆಗಿದೆ.