Home Crime Dharmasthala: ಧರ್ಮಸ್ಥಳ ಮೂಲದ ಯುವತಿ ಪಂಜಾಬ್‌ನಲ್ಲಿ ನಿಗೂಢ ಸಾವು: ಬೈಕಿನಲ್ಲಿ ಕಾಲೇಜಿಗೆ ಬಿಟ್ಟು ಹೋದ ಮಿತ್ರ,...

Dharmasthala: ಧರ್ಮಸ್ಥಳ ಮೂಲದ ಯುವತಿ ಪಂಜಾಬ್‌ನಲ್ಲಿ ನಿಗೂಢ ಸಾವು: ಬೈಕಿನಲ್ಲಿ ಕಾಲೇಜಿಗೆ ಬಿಟ್ಟು ಹೋದ ಮಿತ್ರ, ನಂತರ ಆಗಿದ್ದೇನು?

Hindu neighbor gifts plot of land

Hindu neighbour gifts land to Muslim journalist

Belthangady: ಮೇ 17 ರಂದು ಸ್ಪೇಸ್‌ ಜೆಟ್‌ ಕಂಪನಿ ಉದ್ಯೋಗಿ ಧರ್ಮಸ್ಥಳದ ಅಕಾಂಕ್ಷ ಎಸ್‌.ಎನ್‌ (22) ಪಂಜಾಬ್‌ ನಲ್ಲಿ ನಿಗೂಢವಾಗಿ ಸಾವಿಗೀಡಾಗಿರುವ ಕುರಿತು ಈಗಾಗಲೇ ವರದಿಯಾಗಿದೆ. ಜಪಾನ್‌ಗೆ ಉದ್ಯೋಗಕ್ಕೆಂದು ಹೋಗಲಿದ್ದು, ಹೀಗಾಗಿ ಸರ್ಟಿಫಿಕೇಟ್‌ ಪಡೆಯಲು ಪಂಜಾಬ್‌ನ ಎಲ್‌ಪಿಯು ಪಗ್ವಾಡ ಕಾಲೇಜಿನಿಂದ ಹೋಗಿದ್ದರು. ನಾನು ಮಿತ್ರನೊಬ್ಬನ ಜೊತೆ ಕಾಲೇಜಿಗೆ ತೆರಳುತ್ತಿದ್ದು, ಅವನೇ ನನ್ನನ್ನು ಅವನೇ ಬೈಕಿನಲ್ಲಿ ಬಿಟ್ಟುಬಂದಿದ್ದಾರೆ ಎಂದು ತಿಳಿಸಿದ್ದಾಳೆ. ಕಾಲೇಜಿನಿಂದ ಸರ್ಟಿಫಿಕೇಟ್‌ ಪಡೆದ ನಂತರವೂ ಮನೆಯಲ್ಲಿ ಮಾತನಾಡಿದ್ದಾಳೆ.

ಮೃತ ಯುವತಿ ಧರ್ಮಸ್ಥಳ ಗ್ರಾಮದ ಬೊಳಿಯಾರು ನಿವಾಸಿ, ಕಾಶಿಬೆಟ್ಟಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರು ಸಿವಿಲ್‌ ಗುತ್ತಿಗೆದಾರ ಸುರೇಂದ್ರ, ಜೆಡಿಎಸ್‌ ಮಾಜಿ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಸಿಂಧೂದೇವಿ ದಂಪತಿಗಳಿಗೆ ಏಕೈಕ ಹೆಣ್ಣು ಮಗಳು. ಮಗನಿಗೆ ಕೆಲ ತಿಂಗಳುಗಳ ಹಿಂದೆ ಕೇರಳದಲ್ಲಿ ಅದ್ಧೂರಿ ವಿವಾಹ ಮಾಡಿ, ಮಂಗಳೂರಿನಲ್ಲಿ ಔತಣಕೂಟ ಕೂಡಾ ಮಾಡಲಾಗಿತ್ತು.

ಪಂಜಾಬ್‌ನ ಎಲ್‌ಪಿಯು ಪಗ್ವಾಡ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದಿದ್ದ ಈಕೆ, ಆರು ತಿಂಗಳ ಹಿಂದೆಯಷ್ಟೇ ಏರೋಸ್ಪೇಸ್‌ ಇಂಜಿನಿಯರ್‌ ಆಗಿ ದೆಹಲಿಯಲ್ಲಿ ಉದ್ಯೋಗ ಮಾಡುತ್ತಿದ್ದರು. ಜಪಾನ್‌ಗೆ ಉದ್ಯೋಗಕ್ಕೆ ಹೋಗುವ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು, ಪಂಜಾಬ್‌ ಎಲ್‌.ಪಿಯು ಪಗ್ವಾಡ ಕಾಲೇಜಿನಿಂದ ಸರ್ಟಿಫಿಕೇಟ್‌ ಪಡೆಯಲು ತೆರಳಿದ್ದರು, ಈ ಕುರಿತು ತನ್ನ ಮನೆಯವರಿಗೆ ಕರೆ ಮಾಡಿ ಹೇಳಿದ್ದರು ಎಂದು ತಿಳಿದು ಬಂದಿದೆ.

ಪಂಜಾಬ್‌ನ ಜಲಂದರ್‌ ಪೊಲೀಸ್‌ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಮೇ 17 ರ ರಾತ್ರಿಯೇ ಮನೆ ಮಂದಿ ಪಂಜಾಬ್‌ಗೆ ತೆರಳಿದ್ದಾರೆ. ಮೂರನೇ ಮಹಡಿಯಿಂದ ಕೆಳಗೆ ಬಿದ್ದು ಸಾವಿಗೀಡಾಗಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ಪ್ರಕಾರ ತಿಳಿದು ಬಂದಿದೆ ಎಂದು ವರದಿಯಾಗಿದೆ. ಆದರೆ ತಮ್ಮ ಮಗಳನ್ನು ಕೊಲೆ ಮಾಡಲಾಗಿದೆ ಎಂದು ತಂದೆ ಆರೋಪ ಮಾಡುತ್ತಿದ್ದು, ಘಟನೆಯ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.