Home Crime Dakshina Kannada: ದಿಗಂತ್‌ ಪತ್ತೆಗೆ ಆಗ್ರಹ ಮಾಡಿ ಪ್ರತಿಭಟನೆ ಮಾಡಿದ್ದ ಬಜರಂಗದಳ ಮುಖಂಡನಿಗೆ ಕೊಲೆ ಬೆದರಿಕೆ!

Dakshina Kannada: ದಿಗಂತ್‌ ಪತ್ತೆಗೆ ಆಗ್ರಹ ಮಾಡಿ ಪ್ರತಿಭಟನೆ ಮಾಡಿದ್ದ ಬಜರಂಗದಳ ಮುಖಂಡನಿಗೆ ಕೊಲೆ ಬೆದರಿಕೆ!

Hindu neighbor gifts plot of land

Hindu neighbour gifts land to Muslim journalist

Dakshina Kannada: ನಿಗೂಢವಾಗಿ ನಾಪತ್ತೆಯಾಗಿದ್ದ ವಿದ್ಯಾರ್ಥಿ ದಿಗಂತ್‌ ಪತ್ತೆ ಆಗ್ರಹಿಸಿ ಪ್ರತಿಭಟನೆ ಮಾಡಿದ್ದ ಬಜರಂಗದಳ ಮುಖಂಡ ಭರತ್‌ ಕುಮ್ಡೇಲ್‌ ಅವರಿಗೆ ಸಾಮಾಜಿಕ ತಾಣಗಳ ಮೂಲಕ ಕೊಲೆ ಬೆದರಿಕೆ ಹಾಕಲಾಗಿದೆ. BEARY_ROYAL_NAWAB, ಬ್ಯಾರಿ ಟ್ರೋಲರ್‌, ಮಂಗಳೂರು ಕಿಂಗ್‌ ಎಂಬ ಹೆಸರಿನ ಪೇಜ್‌ಗಳ ಮೂಲಕ ಕೊಲೆ ಬೆದರಿಕೆ ಹಾಕಲಾಗಿರುವ ಕುರಿತು ವರದಿಯಾಗಿದೆ.

ದಿಗಂತ್‌ ಪತ್ತೆಗಾಗಿ ಮಾ.1 ರಂದು ಭಜರಂಗದಳ ಮುಖಂಡ ಭರತ್‌ ನೇತೃತ್ವದಲ್ಲಿ ಫರಂಗಿಪೇಟೆ ಬಂದ್‌ ಮಾಡಲಾಗಿತ್ತು. ಗಾಂಜಾ ಗ್ಯಾಂಗ್‌ ಕೈವಾಡವಿದೆ ಎಂದು ಪ್ರತಿಭಟನೆ ಸಮಯದಲ್ಲಿ ಭರತ್‌ ಕುಮ್ಡೇಲು ಆರೋಪ ಮಾಡಿದ್ದರು. ಇದೀಗ ದಿಗಂತ್‌ ಪತ್ತೆಯಾದ ನಂತರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ಭರತ್‌ ಕುಮ್ಡೇಲುಗೆ ಬೆದರಿಕೆ ಹಾಕಿದ್ದಾರೆ.

ಭರತ್‌ ಕುಮ್ಡೇಲು 2017 ರಲ್ಲಿ ನಡೆದ ಎಸ್‌ಡಿಪಿಐ ಮುಖಂಡ ಅಶ್ರಫ್‌ ಕಲಾಯಿ ಹತ್ಯೆ ಆರೋಪಿಯಾಗಿದ್ದಾರೆ.