Home Crime Bhopal: ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದ ವೈದ್ಯೆ ಶವವಾಗಿ ಪತ್ತೆ!

Bhopal: ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದ ವೈದ್ಯೆ ಶವವಾಗಿ ಪತ್ತೆ!

Hindu neighbor gifts plot of land

Hindu neighbour gifts land to Muslim journalist

Bhopal: ನಾಲ್ಕು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಮಹಿಳಾ ವೈದ್ಯೆಯೊಬ್ಬಳ ಮೃ*ತದೇಹ ಭೋಪಾಲ್‌ನಲ್ಲಿರುವ ಆಕೆಯ ಮನೆಯ ಕೋಣೆಯಲ್ಲಿ ಪತ್ತೆಯಾಗಿದೆ. ಆಕೆಯ ತೋಳಿನ ಮೇಲೆ ಸೂಜಿ ಚುಚ್ಚಿದ ಗುರುತು ಪತ್ತೆಯಾಗಿರುವ ಕುರಿತು ಪೊಲೀಸರು ತಿಳಿಸಿದ್ದಾರೆ.

ಡಾ.ರಿಚಾ ಪಾಂಡೆ ಎಂಬುವವರು ಮೃತ ಮಹಿಳೆ. ಇವರು ಲಕ್ನೋ ಮೂಲದವರು. ನಾಲ್ಕು ತಿಂಗಳ ಹಿಂದೆ ಭೋಪಾಲ್‌ ಮೂಲದ ದಂತವೈದ್ಯೆರಾಗಿರುವ ಡಾ.ಅಭಿಜಿತ್‌ ಪಾಂಡೆ ಅವರನ್ನು ವಿವಾಹವಾಗಿದ್ದರು. ಭೋಪಾಲ್‌ನ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಮಾಡುತ್ತಿದ್ದರೆ, ಪತಿ ಡಾ.ಅಭಿಜಿತ್‌ ಪಾಂಡೆ ದಂತವೈದ್ಯ ಶಾಸ್ತ್ರ ಅಭ್ಯಾಸ ಮಾಡುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ದಂಪತಿಗಳು ಪ್ರತ್ಯೇಕ ಕೊಠಡಿಯಲ್ಲಿ ಮಲಗಿದ್ದು, ಶುಕ್ರವಾರ ಬೆಳಗ್ಗೆ ಅಭಿಜೀತ್‌ ಎದ್ದು ರಿಚಾ ಅವರ ಕೊಠಡಿಯ ಬಾಗಿಲು ಬಡಿದಾಗ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಗಾಬರಿಗೊಂಡ ಅಭಿಷೇಕ್‌ ನೆರೆಹೊರೆಯವರ ಸಹಾಯ ಕೇಳಿದ್ದು, ಅವರು ಬಂದು ಬಾಗಿಲು ತೆರೆಯುವ ಪ್ರಯತ್ನ ಮಾಡಿದರೂ, ಸಾಧ್ಯವಾಗಲಿಲ್ಲ. ನಂತರ ಹೊರಗಿನಿಂದ ಕಾರ್ಮಿಕರನ್ನು ಹೊರಗಿನಿಂದ ಕಾರ್ಮಿಕರನ್ನು ಕರೆಸಿ, ಬಾಗಿಲನ್ನು ಒಡೆದು ಒಳ ಪ್ರವೇಶ ಮಾಡಿದ್ದಾರೆ. ಆಗ ರಿಚಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಪತ್ತೆಯಾಗಿದೆ.

ಆಕೆಯನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಗ ವೈದ್ಯರು ಪರಿಶೀಲನೆ ಮಾಡಿದಾಗ ಆಕೆ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಚುಚ್ಚುಮದ್ದಿನ ಗುರುತುಗಳು ರಿಚಾ ಕೈಯಲ್ಲಿ ಕಂಡು ಬಂದಿದೆ. ಮರಣೋತ್ತರ ಪರೀಕ್ಷೆಯ ನಂತರವೇ ಸಾವಿಗೆ ಕಾರಣ ತಿಳಿದು ಬರಲಿದೆ.