Home Crime Belagavi: ಉದ್ಯಮಿ ಅಪಹರಣ 5 ಕೋಟಿ ಬೇಡಿಕೆ; ಸಚಿವ ಸತೀಶ್‌ ಜಾರಕಿಹೊಳಿ ಆಪ್ತೆ ಅರೆಸ್ಟ್

Belagavi: ಉದ್ಯಮಿ ಅಪಹರಣ 5 ಕೋಟಿ ಬೇಡಿಕೆ; ಸಚಿವ ಸತೀಶ್‌ ಜಾರಕಿಹೊಳಿ ಆಪ್ತೆ ಅರೆಸ್ಟ್

Chitradurga

Hindu neighbor gifts plot of land

Hindu neighbour gifts land to Muslim journalist

Belagavi: ಉದ್ಯಮಿ ಅಪಹರಣ ಮಾಡಿ ಐದು ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದ ಪ್ರಕರಣದಲ್ಲಿ ಸಚಿವ ಸತೀಶ್‌ ಜಾರಕಿಹೊಳಿ ಆಪ್ತೆ ಮಂಜುಳಾ ರಾಮನಗುಟ್ಟಿ ಅವರನ್ನು ಘಟಪ್ರಭಾ ಠಾಣೆ ಪೊಲೀಸರು ಬಂಧನ ಮಾಡಿದ್ದಾರೆ.

ಮೂಡಲಗಿ ತಾಲೂಕಿನ ರಾಜಪುರ ಗ್ರಾಮದ ಉದ್ಯಮಿ ಬಸವರಾಜ ಅಂಬಿ ಅವರನ್ನು ಫೆ.14 ರಂದು ಅಪಹರಣ ಮಾಡಿ ಐದು ಕೋಟಿ ರೂಪಾಯಿ ಹಣಕ್ಕೆ ಆರೋಪಿಗಳು ಬೇಡಿಕೆ ಇಟ್ಟಿದ್ದರು. ಇದಾದ ನಂತರ ಪೊಲೀಸರು ಉದ್ಯಮಿಯ ರಕ್ಷಣೆ ಮಾಡಿದ್ದರು. ಈ ಪ್ರಕರಣ ಸಂಬಂಧ ಆರು ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದು, ತನಿಖೆಯ ಸಂದರ್ಭ ಮಂಜುಳಾ ಕಿಂಗ್‌ಪಿನ್‌ ಎನ್ನುವ ವಿಷಯ ಬಹಿರಂಗವಾಗಿತ್ತು.

ಮಂಜುಳಾ ಪುತ್ರ ಈಶ್ವರನನ್ನು ಬಂಧನ ಮಾಡಿ ವಿಚಾರಣೆ ಮಾಡಿದಾಗ ವಿಷಯ ಹೊರಬಿದ್ದಿದೆ. ತಾಂತ್ರಿಕ ಸಾಕ್ಷ್ಯ ಆರೋಪಿಗಳ ಹೇಳಿಕೆಯ ಆಧಾರದಲ್ಲಿ ಮಂಜುಳಾ ಅವರನ್ನು ಬಂಧನ ಮಾಡಲಾಗಿದೆ.