Home Crime Bantwala: ಭರತ್‌ ಕುಮ್ಡೇಲುಗೆ ನ್ಯಾಯಾಂಗ ಬಂಧನ

Bantwala: ಭರತ್‌ ಕುಮ್ಡೇಲುಗೆ ನ್ಯಾಯಾಂಗ ಬಂಧನ

Hindu neighbor gifts plot of land

Hindu neighbour gifts land to Muslim journalist

Bantwala: ಬಂಟ್ವಾಳ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಬ್ದುಲ್‌ ರಹಿಮಾನ್‌ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಭರತ್‌ ಕುಮ್ಡೇಲು ಕೋರ್ಟ್‌ಗೆ ಶರಣಾಗಿದ್ದು, ನ್ಯಾಯಾಲಯವು ಈತನಿಗೆ ದಿ.25-10-2025 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಕೋಕಾ ಕಾಯ್ದೆಯಡಿ ಆರೋಪಿ ಭರತ್‌ ಕುಮ್ಡೇಲು ವಿರುದ್ಧ ಪ್ರಕರಣ ದಾಖಲು ಮಾಡಲಾಗಿತ್ತು. ಪ್ರಕರಣ ಬೆಳಕಿಗೆ ಬಂದಾಗಿನಿಂದ ಆರೋಪಿ ತಲೆಮರೆಸಿಕೊಂಡಿದ್ದು, ಇದೀಗ ವಾರೆಂಟ್‌ ಹಾಗೂ ಕೋಕಾ ಕಾಯ್ದೆ ಜಾರಿಯಾಗಿದ್ದ ಹಿನ್ನೆಲೆಯಲ್ಲಿ ಮಂಗಳೂರು ನ್ಯಾಯಾಲಯಕ್ಕೆ ಬಂದು ಶರಣಾಗಿರುವ ಘಟನೆ ನಡೆದಿದೆ.

ಅಬ್ದುಲ್‌ ರಹಿಮಾನ್‌ ಕೊಲೆ ಮೇ 27 ರಂದು ನಡೆದಿತ್ತು. ಇದಕ್ಕೆ ಸಂಬಂಧಪಟ್ಟಂತೆ ಪೊಲೀಸರು ದೀಪಕ್‌, ಚಿಂತನ್‌, ಪೃಥ್ವಿರಾಜ್‌ ಜೋಗಿ, ಸುಮಿತ್‌ ಬಿ ಆಚಾರ್ಯ, ವಿ.ರವಿರಾಜ ಮೂಲ್ಯ, ಅಭಿನ್‌ ರೈ, ತೇಜಾಕ್ಷ, ರವಿಸಂಜಯ್‌ ಜಿ.ಎಸ್‌., ಶಿವಪ್ರಸಾದ್‌ ತುಂಬೆ, ಪ್ರದೀಪ, ಶಾಹಿತ್‌ ಸಚಿನ್‌ ರೊಟ್ಟಿಗುಡ್ಡೆ, ರಂಜಿತ್‌ ಎಂಬುವವರನ್ನು ಬಂಧನ ಮಾಡಲಾಗಿತ್ತು.

ಈ ಪ್ರಕರಣದ ಪ್ರಮುಖ ಆರೋಪಿ ಭರತ್‌ ರಾಜ್‌ ಯಾನೆ ಭರತ್‌ ಕುಮ್ಡೇಲು (29) ತಲೆ ಮರೆಸಿಕೊಂಡಿದ್ದ. ಇದೀಗ ಕೋರ್ಟ್‌ಗೆ ಶರಣಾಗತನಾಗಿದ್ದು, ನ್ಯಾಯಾಲಯವು ಈತನಿಗೆ ದಿ.25.10.2025 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.