Home Crime Assam: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ 10 ವರ್ಷದ ಮಗ; ಲವರ್‌ ಜೊತೆ ಸೇರಿ ಮಗನನ್ನು ಕೊಂದ...

Assam: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ 10 ವರ್ಷದ ಮಗ; ಲವರ್‌ ಜೊತೆ ಸೇರಿ ಮಗನನ್ನು ಕೊಂದ ತಾಯಿ

Hindu neighbor gifts plot of land

Hindu neighbour gifts land to Muslim journalist

Assam: ತಾಯಿಯೋರ್ವಳು ತನ್ನ ಪ್ರಿಯಕರನ ಜೊತೆ ಸೇರಿ 10 ವರ್ಷದ ಮಗನನ್ನು ಕೊಲೆಯನ್ನು ಮಾಡಿರುವ ಘಟನೆ ನಡೆದಿದೆ. ತಮ್ಮ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದೆ ಮಗು ಎಂದು ಮಹಿಳೆ ಪ್ರಿಯಕರನ ಸಹಾಯದಿಂದ ಕೊಂದು ಶವವನ್ನು ಸೂಟ್‌ಕೇಸ್‌ಗೆ ತುಂಬಿಸಿದ್ದಾಳೆ.

ಮೃಣ್ಮಯ್‌ ಬರ್ಮನ್‌ ಕೊಲೆಯಾದ ಬಾಲಕ. ನವೋದಯ ರಾಷ್ಟ್ರೀಯ ವಿದ್ಯಾಲಯದಲ್ಲಿ ಐದನೇ ತರಗತಿ ವಿದ್ಯಾರ್ಥಿ. ಈತನ ದೇಹವನ್ನು ಕತ್ತರಿಸಿ ಸೂಟ್‌ಕೇಸ್‌ನಲ್ಲಿ ತುಂಬಿಸಲಾಗಿತ್ತು. ನಿರ್ಜನ ರಸ್ತೆಯಲ್ಲಿ ಅರಣ್ಯ ಇಲಾಖೆ ಕಚೇರಿಯ ಬಳಿ ಕಸ ಆರಿಸುವವರಿಗೆ ಶವ ಪತ್ತೆಯಾಗಿದೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿಯನ್ನು ನೀಡಿದರು.

ಪೊಲೀಸ್‌ ತನಿಖೆಯ ನಂತರ ತಾಯಿ ದೀಪಾಲಿ ರಾಜ್‌ಬೊಂಗ್ಶಿ ಮತ್ತು ಆಕೆಯ ಪ್ರಿಯಕರ ಅಕೌಂಟೆಂಟ್‌ ಜನರಲ್‌ ಕಚೇರಿಯಲ್ಲಿ ತಾತ್ಕಾಲಿಕ ಪಿಯೂನ್‌ ಕೆಲಸದಲ್ಲಿರುವ ಜ್ಯೋತಿಮೊಯ್‌ ಹಲೋಯ್‌ ಎಂಬಾತನನ್ನು ಬಂಧನ ಮಾಡಲಾಯಿತು. ವಿಚಾರಣೆಯ ವೇಳೆ ಇಬ್ಬರೂ ತಮ್ಮ ಅಪರಾಧವನ್ನು ಒಪ್ಪಿದ್ದಾರೆ.

ಕ್ಲಿನಿಕ್‌ನಲ್ಲಿ ಕೆಲಸ ಮಾಡುತ್ತಿದ್ದ ದೀಪಾಲಿ ತನ್ನ ಗಂಡನಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಳು. ಈಕೆ ಮೊದಲಿಗೆ ತನ್ನ ಮಗ ಕಾಣೆಯಾಗಿದ್ದಾನೆ ಎಂದು ಪೊಲೀಸ್‌ ದೂರು ನೀಡಿದ್ದಳು. ಆದರೆ ಪೊಲೀಸರ ತನಿಖೆಯ ವೇಳೆ ಈಕೆ ಜ್ಯೋತಿಮೊಯ್‌ ಹಲೋಯ್‌ ಜೊತೆ ಸಂಬಂಧ ಹೊಂದಿರುವುದು ಪೊಲೀಸರಿಗೆ ತಿಳಿದು ಬಂದಿದೆ. ಮಗುವನ್ನು ಕೊಲ್ಲಲ್ಲು ಇಬ್ಬರೂ ಸಂಚು ರೂಪಿಸಿದ್ದು, ಇವರ ಸಂಬಂಧಕ್ಕೆ ಮಗು ಅಡ್ಡಿಯಾಗಿದೆ ಎಂದು ಹೇಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.