Home Crime Chennai: ವಿಧಾನಸಭೆಯ ಮಾಜಿ ಸದಸ್ಯನ ಬ್ಯಾಗ್ ನಲ್ಲಿ 40 ಬುಲೆಟ್ ಪತ್ತೆ..!

Chennai: ವಿಧಾನಸಭೆಯ ಮಾಜಿ ಸದಸ್ಯನ ಬ್ಯಾಗ್ ನಲ್ಲಿ 40 ಬುಲೆಟ್ ಪತ್ತೆ..!

Chennai

Hindu neighbor gifts plot of land

Hindu neighbour gifts land to Muslim journalist

Chennai: ವಿಧಾನಸಭೆಯ ಮಾಜಿ ಸದಸ್ಯ ಹಾಗೂ ನಟ ಕರುಣಾಸ್ ಅವರ ಬ್ಯಾಗ್ ನಲ್ಲಿ ಜೀವಂತ ಮದ್ದು ಗುಂಡುಗಳು ಪತ್ತೆಯಾಗಿದೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.

ನುಗ್ಗೆಕಾಯಿ ಬೇಯಿಸಿದ ನೀರನ್ನು ಸೇವಿಸಿದರೆ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ?!

ನಟ ಕರುಣಾಸ್ ಅವರು ಚೆನ್ನೈನಿಂದ ತಿರುಚ್ಚಿಗೆ ಪ್ರಯಾಣಿಸಲು ಚೆನ್ನೈ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ, ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಈ ವೇಳೆ ನಟನ ಬ್ಯಾಗ್ ನಲ್ಲಿ ಎರಡು ಮದ್ದುಗುಂಡುಗಳ ಪೆಟ್ಟಿಗೆಗಳು ಇರುವುದು ಬೆಳಕಿಗೆ ಬಂದಿದೆ. ಬ್ಯಾಗ್ ನಲ್ಲಿ ಒಟ್ಟು 40 ಮದ್ದುಗುಂಡುಗಳು ಪತ್ತೆಯಾಗಿದ್ದು ವಶಕ್ಕೆ ಪಡೆದುಕೊಳ್ಳಲಾಗಿದೆ.

ನಮ್ಮ ಬಳಿ ಗನ್ ಲೈಸೆನ್ಸ್ ಇದ್ದು, ವಿಮಾನದಲ್ಲಿ ಬಂದೂಕು ತರಬಾರದು ಎಂಬ ಅರಿವಿದ್ದ ಕಾರಣ ಬುಲೆಟ್ ಮಾತ್ರ ಇದೆ ಎಂದು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ಕರುಣಾಸ್ ವಿವರಿಸಿದ್ದಾರೆ ಎಂದು ವರದಿಯಾಗಿದೆ. ಆದರೆ, ಮನೆಯಿಂದ ಅವಸರವಾಗಿ ಹೊರಟಿದ್ದ ಕಾರಣ ಬ್ಯಾಗ್‌ನಲ್ಲಿದ್ದ ಗುಂಡುಗಳು ಅವರ ಗಮನಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ. ಇನ್ನು ಕರುಣಾಸನ್ ರವರನ್ನು ವಿಚಾರಣೆ ನಡೆಸಿ ಬಿಡಲಾಗಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ. ಈ ಘಟನೆಯಿಂದಾಗಿ ತಿರುಚ್ಚಿಗೆ ತೆರಳುವ ವಿಮಾನ ಸುಮಾರು ಅರ್ಧ ಗಂಟೆ ತಡವಾಗಿತ್ತು.

ಕ್ರಿಕೆಟ್ ಮೈದಾನದಲ್ಲಿ ಸಿಕ್ಸ್‌ ಹೊಡೆದು ದಿಢೀರ್ ಕೆಳಗೆ ಬಿದ್ದು ಆಟಗಾರ ಸಾವು ; ವಿಡಿಯೋ ವೈರಲ್‌