Home Breaking Entertainment News Kannada ಉರ್ಫಿ ಅಂದರೆ “ಫ್ಲವರ್” ಅಂದ್ಕೊಂಡ್ರಾ? “ಫೈರ್”….!!!

ಉರ್ಫಿ ಅಂದರೆ “ಫ್ಲವರ್” ಅಂದ್ಕೊಂಡ್ರಾ? “ಫೈರ್”….!!!

Hindu neighbor gifts plot of land

Hindu neighbour gifts land to Muslim journalist

ನಟಿ ಉರ್ಫಿ ಜಾವೇದ್ ಮಾಡದ ಅವತಾರಗಳಿಲ್ಲ. ಎಲ್ಲಾ ಬಗೆಯ ಬಟ್ಟೆಗಳನ್ನು ಇವಳು ಟ್ರೈ ಮಾಡಿದ್ದಾಳೆ ಅಂತ ಹೇಳಬಹುದು. ಬಗೆ ಬಗೆಯ ಬಟ್ಟೆ ಧರಿಸಿಕೊಂಡು ಬಂದು ಪಾಪರಾಜಿ ಕ್ಯಾಮೆರಾಗಳ ಮುಂದೆ ಪೋಸ್ ನೀಡುವುದೇ ಈ ನಟಿಯ ದೊಡ್ಡ ಟ್ಯಾಲೆಂಟ್ ಆದಂತಿದೆ. ಸೋಶಿಯಲ್ ಮೀಡಿಯಾದಲ್ಲಂತೂ ಉರ್ಫಿ ಜಾವೇದ್ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ನಟನೆಗಿಂತಲೂ ಹೆಚ್ಚಾಗಿ ಅವರು ಈ ರೀತಿಯ ಬಟ್ಟೆ ಧರಿಸಿಯೇ ಫೇಮಸ್ ಆಗಿದ್ದಾರೆ. ಇನ್ನು ಅವರಿಗೆ ಟ್ರೋಲ್ ಕಾಟವೂ ತಪ್ಪಿದ್ದಲ್ಲ. ಉರ್ಫಿ ಜಾವೇದ್ ಫೋಟೋ ಬಟ್ಟೆ ಧರಿಸಿಯೇ ಫೇಮಸ್ ಆಗಿದ್ದಿದೆ.

ಉರ್ಫಿ ಜಾವೇದ್ ಅವರ ಫೋಟೋ ಮತ್ತು ವೀಡಿಯೋಗೆ ಜನರು ಬಗೆಬಗೆಯಲ್ಲಿ ಕಮೆಂಟ್ ಮಾಡ್ತಾರೆ. ಕೆಲವರು ಹಿಗ್ಗಾಮುಗ್ಗಾ ಟ್ರೋಲ್ ಮಾಡ್ತಾರೆ. ಆದರೆ ಅದಕ್ಕೆಲ್ಲ ಈ ನಟಿ ತಲೆ ಕೆಡಿಸಿಕೊಂಡಿಲ್ಲ. ದಿನದಿನಕ್ಕೂ ಆಕೆಯ ಮಾದಕತೆ ಹೆಚ್ಚುತ್ತಲೇ ಇದೆ. ಜತೆಗೆ ಆಕೆಗೆ ಅಭಿಮಾನಿಗಳು ಹೆಚ್ಚಾಗುತ್ತಿದ್ದಾರೆ. ಈಗ ಈ ನಟಿ ಆಯಕಟ್ಟಿನ ಜಾಗಗಳಿಗೆ ಹೂವು ಅಂಟಿಸಿಕೊಂಡು ಬಂದಿದ್ದಾಳೆ. ಆ ಮೂಲಕ ಪಡ್ಡೆಗಳ ನಿದ್ದೆ ಬಿಡಿ, ಮಕರಂದ ಹೀರಲು ಪುಷ್ಪಗಳ ಅರಸುವ ‘ ದುಂಬಿ ಹಾರಿ ಬಂದು ಬೆರಗಾದೋ !’

ಈಗ ಉರ್ಫಿ ಹಾಕಿದ ಬಟ್ಟೆ ಭಾರೀ ಚರ್ಚೆಯಲ್ಲಿದೆ. ಏಕೆಂದರೆ ಉರ್ಫಿ ಜಾವೇದ್ ಹಾಗೆಯೇ ಡ್ರೆಸ್ ಮಾಡಿಕೊಂಡು ಬಂದಿದ್ದಾರೆ. ಈ ಬಾರಿ ಫ್ಲವರ್ ಅಂಟಿಸಿಕೊಂಡು ಆಕೆ ನಡೆದು ಬಂದಿದ್ದಾಳೆ. ರಾಣಿ ಜೇನಿಗಾಗಿ ಮಕರಂದ ನೆಕ್ಕಿ ತರಲು ರಸ್ತೆಗೆ ಇಳಿದ ದುಂಬಿಗಳಲ್ಲಿ ಇಬ್ಬಂದಿ ನಿಲುವು. ಗುಂಡು ಕರ್ವೆಚರಿನ ದೇಹಕ್ಕೆ ಗೊಂಡೆ ಸೇವಂತಿಗಳ ತಣ್ಣಗಿನ ಬೆಸುಗೆ. ಆ ಮಟ್ಟಿಗೆ ಹೂವುಗಳ ಆಕರ್ಷಣೆ ಮತ್ತು ಘಮ ಸೋಷಿಯಲ್ ಉರ್ಫಿಯ ಈ ಮಾದಕತೆ ಸೃಷ್ಟಿಸಿದೆ. ಉರ್ಫಿ ಅಂದರೆ ಫ್ಲವರ್. ಉರ್ಫಿ ಅಂದರೆ ಮೊದಲಿಗೆ ನೆನಪಾಗೋದು ಫೈರ್ !! ಇವತ್ತು ಎರಡೂ ಜೋಡಿಯಾಗಿದೆ. ಈ ದಿರಿಸು ಪಕ್ಕ ಫೈರ್ ರೀತಿ ಇದೆ ಎನ್ನುತ್ತಿದ್ದಾರೆ ಅಭಿಮಾನಿಗಳು. ಇನ್ನೊಂದು ವಾರದ ಮಟ್ಟಿಗೆ ಆಕೆಯ ಗುಂಗಿನಲ್ಲಿರಲು ಅಭಿಮಾನಿಗಳಿಗೆ ಸಬ್ಜೆಕ್ಟ್ ಎತ್ತಿ ಕೊಟ್ಟಿದ್ದಾಳೆ ಉರ್ಫಿ. ಅಷ್ಟರಲ್ಲಿ ಮತ್ತೊಂದು ವಿಭಿನ್ನ ಮಾದರಿಯಲ್ಲಿ ಬರ್ತಾಳೆ. ಆ ಸುದ್ದಿಯನ್ನು ನಿಮಗೆ ಒಂದಷ್ಟು ಬಣ್ಣ ಬೆರೆಸಿ ತಲುಪಿಸಲು ನಮಲ್ಲೂ ತವಕ.

ಬಟ್ಟೆ ಮಾತ್ರವಲ್ಲದೇ ಬೇರೆ ವಿಚಾರಗಳಿಂದಲೂ ಊರ್ಫಿ ಜಾವೇದ್ ಅವರು ಆಗಾಗ ಸುದ್ದಿ ಆಗುತ್ತಾರೆ. ‘ಬಿಗ್ ಬಾಸ್ ಒಟಿಟಿ’ ಶೋನಲ್ಲಿ ಅವರು ಭಾಗವಹಿಸಿದ್ದರು. ಕಿರುತೆರೆಯಲ್ಲಿ ತಮಗೆ ಸೂಕ್ತ ಮನ್ನಣೆ ಸಿಕ್ಕಿಲ್ಲ ಎಂಬ ಬೇಸರ ಕೂಡ ಅವರಿಗೆ ಇದೆ.