Home Breaking Entertainment News Kannada ಈ ನಟ, ಸಿನಿಮಾದಲ್ಲಿ ಚಾನ್ಸ್ ಕೊಡುವುದಾಗಿ, ನಯನತಾರಳನ್ನು ಮಂಚಕ್ಕೆ ಕರೆದಿದ್ರಂತೆ! ಸ್ಪೋಟಕ ಮಾಹಿತಿ ಬಿಚ್ಚಿಟ್ರು ಲೇಡಿ...

ಈ ನಟ, ಸಿನಿಮಾದಲ್ಲಿ ಚಾನ್ಸ್ ಕೊಡುವುದಾಗಿ, ನಯನತಾರಳನ್ನು ಮಂಚಕ್ಕೆ ಕರೆದಿದ್ರಂತೆ! ಸ್ಪೋಟಕ ಮಾಹಿತಿ ಬಿಚ್ಚಿಟ್ರು ಲೇಡಿ ಸೂಪರ್ ಸ್ಟಾರ್!!

Hindu neighbor gifts plot of land

Hindu neighbour gifts land to Muslim journalist

ಸಿನಿಮಾ ನಟಿಯರಿಗೆ ಬೆಂಬಿಡದ ಭೂತವಾಗಿ ಸದಾ ಕಾಡೋದು ಈ ಕಾಸ್ಟಿಂಗ್ ಕೌಚ್! ಇದಂತೂ ಬಣ್ಣದ ಬದುಕು ಕಟ್ಟಿಕೊಳ್ಳಲು ಬರುವ ಚೆಲುವೆಯರಿಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಎಂದೂ ಮುಗಿಯದ ಕಾಯಿಲೆಯಾಗಿ ಕಾಡುತ್ತಲೇ ಇರುತ್ತದೆ. ಸಿನಿಮಾ ಅವಕಾಶ ಕೇಳಿಕೊಂಡು ಬಂದ್ರೆ ಸೀದಾ ಮಂಚಕ್ಕೆ ಬಾ ಎಂದು ಕರೆಯೋದೂ ಇಂದು ಹಲವರು ಅಭ್ಯಸವನ್ನಾಗೇ ಮಾಡಿಕೊಂಡಿದ್ದಾರೆ. ಹೆಚ್ಚಿನ ನಟಿಯರಿಗೆ ಇಂತಹ ಅನುಭವಗಳು ಆಗಿದ್ರು ಕೂಡ, ಅವರು ಇದನ್ನೆಲ್ಲ ಬಾಯಿ ಬಿಡೋದು ತಾವು ಸ್ಟಾರ್ ನಟಿಯರಾಗಿ ಮಿಂಚಿದ ಬಳಿಕವೇ. ಅಂತೆಯೇ ಈ ಕಾಸ್ಟಿಂಗ್ ಕೌಚ್ ಭೂತ ಸೌತ್ ಇಂಡಿಯಾದ ಈ ಫೇಮಸ್ ನಟಿಯಾದ ನಯನತಾರಳನ್ನೂ ಬಿಟ್ಟಿಲ್ಲವಂತೆ. ಇದರ ಕುರಿತು ನಯನ ಅವರೇ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಮೂಲತಃ ಬೆಂಗಳೂರಿನವರಾದ ನಯನತಾರ, ಸಿನಿಮಾಗೆ ಬರೋ ಮೊದಲು ರೂಪದರ್ಶಿಯಾಗಿ ಪಾರ್ಟ್ ಟೈಂ ಜಾಬ್ ಮಾಡುತ್ತಿದ್ರು. ನಂತರ ಮಲೆಯಾಳಂ ಚಿತ್ರಗಳ ಮೂಲಕ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟು ಇದೀಗ ಸೌತ್ ಇಂಡಿಯಾದ ಬಿಗ್ ಹಿರೋಯಿನ್ ಆಗಿ ಬೆಳೆದಿದ್ದಾರೆ. ಅಲ್ಲದೆ ಬಹುಬೇಡಿಕಿಯ ನಟಿಯಾಗಿ ಮಿಂಚುವುದರೊಂದಿಗೆ ಲೇಡಿ ಸೂಪರ್ ಸ್ಟಾರ್ ಅನ್ನೋ ಖ್ಯಾತಿ ಕೂಡ ಇವರದ್ದಾಗಿದೆ. ಆದರೀಗ ಈ ಸ್ಟಾರ್ ನಟಿ ಸಂದರ್ಶನವೊಂದರಲ್ಲಿ ತಾನು ಸಿನಿಮಾ ರಂಗಕ್ಕೆ ಬರುವ ಮೊದಲು ಆದಂತಹ ಹಲವು ಕಹಿ ಅನುಭವಗಳನ್ನು ಹಂಚಿಕೊಂಡಿದ್ದು, ಆ ಸಮಯದಲ್ಲಿ ನನಗೆ ಚಾನ್ಸ್ ಕೊಡುವುದಾಗಿ ಮಂಚಕ್ಕೆ ಬಾ ಎಂದು ಕರೆದಿದ್ರು ಎಂದು ಹೇಳಿ ಎಲ್ಲರನ್ನೂ ಚಕಿತರಾಗಿಸಿದ್ದಾರೆ.

ನಯನ ತಮ್ಮ 18ನೇ ವಯಸ್ಸಿಗೆ ಸಿನಿಮಾದಲ್ಲಿ ಅವಕಾಶವನ್ನರಸಿ, ಚಾನ್ಸ್ ಕೇಳಕೊಂಡು ಈ ಹೀರೋ ಹತ್ತಿರ ಹೋದಾಗ ಅವರು ನೇರವಾಗಿ ಮಂಚಕ್ಕೇ ಆಹ್ವಾನ ನೀಡಿದ್ರಂತೆ. ನಾನು ಹೇಳೋದನ್ನೆಲ್ಲ ಮಾಡಿದ್ರೆ, ಹೇಳಿದ ಹಾಗೆ ಕೇಳಿದ್ರೆ ಖಂಡಿತಾ ಹಿರೋಯಿನ್ ಆಗಿ ಚಾನ್ಸ್ ಕೊಡ್ತೇನೆ ಅಂದಿದ್ರಂತೆ. ಆದರೆ ಹೀಗೆ ಹೇಳಿದ ಕೂಡಲೇ ನಯನತಾರ ಎಲ್ಲವನ್ನೂ ನೇರವಾಗಿ ನಿರಾಕರಿಸಿ ಬಿಟ್ರಂತೆ. ಇದರ ಬಗ್ಗೆ ಮಾತನಾಡಿದ ಅವರು ‘ ಆರಂಭದ ದಿನ ನನಗೆ ತುಂಬಾ ಸಂಕಷ್ಟಗಳನ್ನು ತಂದೊಡ್ಡಿತ್ತು. ಅವಕಾಶ ಕೊಡುವ ನೆಪದಲ್ಲಿ ಅಸಭ್ಯವಾಗಿ ನಡಕೊಂಡಿದ್ರು, ಸಾಕಷ್ಟು ಜನರು ನನ್ನನ್ನು ಹಾಸಿಗೆಗೆ ಬಾ ಎಂದು ಕರೆದ್ರು, ಆದರೆ ಎಲ್ಲವನ್ನೂ ನಾನು ನಿರಾಕರಿಸಿದೆ. ನಂತರ ನನ್ನ ಸ್ವಂತ ಪ್ರತಿಭೆಯಿಂದ ಬೆಳೆದು ಇಂದು ಈ ಸ್ಥಾನದಲ್ಲಿದ್ದೀನಿ’ ಎಂದಿದ್ದಾರೆ.

ಬಳಿಕ ಮಾತನಾಡಿದ ಅವರು ‘ಎಲ್ಲವೂ ನಮ್ಮ ನಡವಳಿಕೆ ಮೇಲೆ ಅವಲಂಬಿಸಿದೆ. ನಮ್ಮ ನಮ್ಮ ನಡವಳಿಕೆ ಸರಿ ಇದ್ರೆ ಯಾರೂ ಹತ್ತಿರ ಸುಳಿಯಲ್ಲ. ಇದೀಗ ನಾನು ತುಂಬಾ ಎತ್ತರಕ್ಕೆ ಬೆಳ್ದಿದೀನಿ. ಹಾಗಾಗಿ ಯಾರೂ ನನ್ನ ತಂಟೆಗೆ ಬರುವುದಿಲ್ಲ. ನಮ್ಮ ವ್ಯಕ್ತಿತ್ವಗಳು ಕೂಡ ನಾವು ಹೇಗಿರುತ್ತೇವೆ ಎಂಬುದನ್ನು ನಿರ್ಧರಿಸುತ್ತದೆ’ ಎಂದಿದ್ದಾರೆ. ಅಲ್ಲದೆ ಸಂದರ್ಶನದಲ್ಲಿ ಎಲ್ಲವನ್ನೂ ಹಂಚಿಕೊಂಡ ನಯನ, ತನ್ನನ್ನು ಮಂಚಕ್ಕೆ ಕರೆದವರು ಯಾರೆಂದು ಮಾತ್ರ ಎಲ್ಲಿಯೂ ಹೇಳಲಿಲ್ಲ. ಅವರ ಬಗ್ಗೆ ಸುಳಿವನ್ನೂ ಕೂಡ ನೀಡಲಿಲ್ಲ. ನಯನ, ಕಳೆದ 7 ತಿಂಗಳ ಹಿಂದೆ ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ಮದುವೆಯಾಗಿದ್ದು, ಸದ್ಯ ಈ ರೀತಿ ಮಾಹಿತಿ ಹಂಚಿಕೊಂಡದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.