Home Breaking Entertainment News Kannada ಪತ್ನಿ ರಮ್ಯಾ ತನ್ನನ್ನು ಕೊಳ್ಳಲು ಸುಪಾರಿ ಕಿಲ್ಲರ್’ನ್ನು ನೇಮಿಸಿದ್ದಾಳೆ – ಎಂದು ತೆಲುಗು ನಟ ನರೇಶ್...

ಪತ್ನಿ ರಮ್ಯಾ ತನ್ನನ್ನು ಕೊಳ್ಳಲು ಸುಪಾರಿ ಕಿಲ್ಲರ್’ನ್ನು ನೇಮಿಸಿದ್ದಾಳೆ – ಎಂದು ತೆಲುಗು ನಟ ನರೇಶ್ ಆರೋಪ, ರಕ್ಷಣೆಗಾಗಿ ಬೇಡಿಕೆ !

Hindu neighbor gifts plot of land

Hindu neighbour gifts land to Muslim journalist

ಮತ್ತೆ ಪವಿತ್ರಾ ಲೋಕೇಶ್ ಪ್ರಿಯಕರ ರಮ್ಯಾ ರಘುಪತಿ ಗಂಡ ನರೇಶ್, ಮಾಧ್ಯಮಗಳಲ್ಲಿ ಪ್ರತ್ಯಕ್ಷಳಾಗಿದ್ದಾರೆ. ತೆಲುಗು ನಟ ವಿಜಯ ಕೃಷ್ಣ ಅವರ ಪುತ್ರ ನರೇಶ್ ಅವರು ತಮ್ಮ ವಿಚ್ಛೇದಿತ ಪತ್ನಿ ರಮ್ಯಾ ರಘುಪತಿ ತನಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನುವ ಗಂಭೀರ ಆರೋಪ ಮಾಡಿದ್ದಾರೆ. ಹೈದರಾಬಾದ್‌ನಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ನಟ ಈ ಹೇಳಿಕೆ ನೀಡಿದ್ದು, ಆಕೆಯಿಂದ ತನಗೆ ರಕ್ಷಣೆ ನೀಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.

ರಮ್ಯಾ ಅವರು ನರೇಶ್ ಅವರ ಮೂರನೇ ಪತ್ನಿ. ಇಬ್ಬರೂ ಸುಮಾರು ಒಂದು ದಶಕದ ಹಿಂದೆ ಮದುವೆಯಾಗಿದ್ದು, ಅವರಿಗೆ ಒಬ್ಬ ಮಗನೂ ಸಹ ಇದ್ದಾನೆ. ಕಳೆದ ಜುಲೈನಲ್ಲಿ, ತನ್ನ ಪತಿ ನರೇಶ್ ಪವಿತ್ರಾಳನ್ನು ಮದುವೆಯಾಗಿದ್ದಾನೆ ಎಂದು ಪತ್ನಿ ಆರೋಪಿಸಿದ್ದಳು ಮತ್ತು ಅವರಿಬ್ಬರನ್ನು ಮೈಸೂರಿನ ಹೋಟೆಲ್‌ನಲ್ಲಿ ಪತ್ನಿ ಲಾಕ್ ಮಾಡಿದ್ದಳು. ಅಲ್ಲಿಗೆ ನರೇಶ್ ಅಮ್ತ್ತು ಪವಿತ್ರಾಳ ಮರ್ಯಾದಿ ಸಾರ್ವಜನಿಕವಾಗಿ ಲಾಸ್ ಆಗಿತ್ತು. ಆರಂಭದಲ್ಲಿ ಪವಿತ್ರಾ ಜೊತೆ ಡೇಟಿಂಗ್ ಮಾಡುತ್ತಿದ್ದೇನೆ ಎಂದು ನಿರಾಕರಿಸಿದರೆ, ನಂತರ ಹೋಟೆಲ್ ನಲ್ಲಿ ಅವರಿಬ್ಬರೂ ಸಿಕ್ಕಿ ಬಿದ್ದ ಮೇಲೆ ಪವಿತ್ರಾಳನ್ನು ಮದುವೆಯಾಗುವುದಾಗಿ ಘೋಷಿಸಿದರು. ಆದರೆ ಇನ್ನೂ ಪತ್ನಿ ರಮ್ಯಾಳಿಂದ ಆತ ವಿಚ್ಚೇದನೆ ಪಡೆದಿಲ್ಲ. ನಿಜ ಹೇಳಬೇಕೆಂದರೆ, ವಿಚ್ಚೇದನಕ್ಕೆ ಪತ್ನಿ ರಮ್ಯಾ ಒಪ್ಪುತ್ತಿಲ್ಲ. ಇದೆಲ್ಲ ಹಳೆಯ ಕಥೆಯೇ.

ಈಗ, ನಿನ್ನೆ ಶನಿವಾರ ಹೈದರಾಬಾದ್‌ನಲ್ಲಿ ನರೇಶ್ ಪತ್ರಿಕಾಗೋಷ್ಠಿ ನಡೆಸಿ, ರಮ್ಯಾಗೆ ” ಅನೇಕ ವ್ಯವಹಾರ ” ಗಳಿರುವುದರಿಂದ ಮತ್ತು ಇಬ್ಬರೂ ಸ್ವಲ್ಪ ಸಮಯದಿಂದ ಒಟ್ಟಿಗೆ ವಾಸಿಸದ ಕಾರಣ ಅವರನ್ನು ತೊರೆಯಲು ನಿರ್ಧರಿಸಿದ್ದಾರೆ ಎಂದು ಆರೋಪಿಸಿದರು. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ರಮ್ಯಾ ತನ್ನ ‘ರಾಜಕೀಯ ಹಿನ್ನೆಲೆ’ ಯನ್ನು ಬಳಸಿಕೊಂಡು ಬೆದರಿಕೆ ಹಾಕುತ್ತಿದ್ದಾರೆ ಎಂದು ನರೇಶ್ ಅವರು ಆರೋಪಿಸಿದ್ದಾರೆ. ಮತ್ತು ತನ್ನನ್ನು ಕೊಳ್ಳಲು ಸುಪಾರಿ ಕಿಲ್ಲರ್ ಗಳನ್ನು ಬಳಸಲಾಗುತ್ತಿದೆ. ಇದಕ್ಕಾಗಿ ಸುಪಾರಿ ಕಿಲ್ಲರ್‌ಗಳನ್ನು ಕೆಲಸಕ್ಕೆ ನೇಮಿಸಿಕೊಂಡು ರಮ್ಯಾ ಅವರಿಗೆ 10 ಕೋಟಿ ರೂ.ಗಳ ಮೊತ್ತಕ್ಕೆ ತನ್ನ ರಮ್ಯಾ ಸುಪಾರಿ ನೀಡಿದ್ದಾರೆ ಎಂದು ನರೇಶ್ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಈ ‘ಬಹಿರಂಗ’ ದ ಹಿನ್ನೆಲೆಯಲ್ಲಿ ತಮಗೆ ರಕ್ಷಣೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡುವುದಾಗಿ ನರೇಶ್ ಅವರು ತಿಳಿಸಿದ್ದಾರೆ.

ನರೇಶ್ ಈ ಹಿಂದೆ ಎರಡು ಮದುವೆಯಾಗಿದ್ದರು. ಪವಿತ್ರಾ ಲೋಕೇಶ್ 2007 ರಲ್ಲಿ ಸುಚೇಂದ್ರ ಪ್ರಸಾದ್ ಅವರನ್ನು ಮದುವೆಯಾಗಿದ್ದರು, ಆದರೆ ಇಬ್ಬರೂ ಈಗ ಬೇರೆಯಾಗಿದ್ದಾರೆ. ನರೇಶ್ ಮತ್ತು ಪವಿತ್ರಾ ಲೋಕೇಶ್ ರ ಬಗ್ಗೆ ಮೊದಲು ತೆಲುಗು ಮೀಡಿಯಾ ಗುಸು ಗುಸು ಸುದ್ದಿ ಹಬ್ಬಿಸಿತ್ತು. ಅವರಿಬ್ಬರೂ ಪ್ರಣಯ ಪಕ್ಷಿಗಳಂತೆ ಪ್ರಣಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ವದಂತಿಹಬ್ಬಿತ್ತು. ಆದರೆ ಈ ಜೋಡಿಯು, ” ಇಲ್ಲ, ನಾವು ಜಸ್ಟ್ ಫ್ರೆಂಡ್ಸ್ ” ಎಂದು ಎಲ್ಲಾ ಸುದ್ದಿಗಳನ್ನು ಅಲ್ಲಗಳೆದಿತ್ತು. ಆದರೆ ಕಳೆದ ವರ್ಷ ಅವರು ಅದನ್ನು ಒಪ್ಪಿಕೊಳ್ಳಲೇ ಬೇಕಾಯಿತು. ಆಗ ನರೇಶ್ ಪತ್ನಿ ರಮ್ಯಾ ತಿರುಗಿಬಿದ್ದಿದ್ದರು. ಇಬ್ಬರ ಮದ್ಯೆ ರಾಮಾ ರಂಪ ಆಗಿತ್ತು. ಈಗ ಪತ್ನಿ ತನ್ನನ್ನು ಕೊಲ್ಲಿಸಲು ಸುಪಾರಿ ನೀಡಿದ್ದಾಳೆ ಎನ್ನುವ ಗಂಭೀರ ಆರೋಪ ಮಾಡಿದ್ದಾರೆ ನರೇಶ್.