Home Breaking Entertainment News Kannada Simbu Marriage : ನಟ ಸಿಂಬು ಮದುವೆ ಅತಿ ಶೀಘ್ರದಲ್ಲಿ ! ಶ್ರೀಲಂಕಾದ ಉದ್ಯಮಿಯ ಮಗಳ...

Simbu Marriage : ನಟ ಸಿಂಬು ಮದುವೆ ಅತಿ ಶೀಘ್ರದಲ್ಲಿ ! ಶ್ರೀಲಂಕಾದ ಉದ್ಯಮಿಯ ಮಗಳ ಜೊತೆ ಕಲ್ಯಾಣ!?

Hindu neighbor gifts plot of land

Hindu neighbour gifts land to Muslim journalist

Simbu Marriage: ನಟನೆಯ ಜೊತೆ ಜೊತೆಗೆ ಗಾಸಿಪ್ ಮೂಲಕವೇ ಹೆಚ್ಚು ಸದ್ದು ಮಾಡಿದ್ದ ಕಾಲಿವುಡ್‌ ನಟ ಸಿಂಬು ಹಸೆಮಣೆ (Simbu Marriage)ಏರುವ ಕುರಿತು ಎಲ್ಲ ಕಡೆ ಸುದ್ಧಿ ಸದ್ದು ಮಾಡುತ್ತಿದೆ. ತಮಿಳು ನಟ ಟಿ.ರಾಜೇಂದರ್ ಅವರ ಸುಪುತ್ರ ಅವರ ನಾಮಧೇಯ ಸಿಲಂಬರಸನ್ ಥೆಸಿಂಗು ರಾಜೇಂದರ್ (Silambarasan Thesingu Rajendar).ಕಾಲಿವುಡ್‌ನಲ್ಲಿ ಸಿಂಬು, ಎಸ್.ಟಿ.ಆರ್ ಎಂದು ಹೆಚ್ಚು ಜನಪ್ರಿಯತೆ ಗಳಿಸಿದ್ದು, ಸದ್ಯ, ಇವರ ಮದುವೆ ಕುರಿತು ಹೊಸ ಸುದ್ದಿಯೊಂದು ಹೊರಬಿದ್ದಿದೆ.

ಸಿಂಬು ಕಾಲಿವುಡ್ ನಟನಾಗಿ, ಸಂಗೀತ ನಿರ್ದೇಶಕ, ಗಾಯಕ, ನಿರ್ಮಾಪಕನಾಗಿ ತೊಡಗಿಸಿಕೊಂಡಿದ್ದು ‘ಧಮ್’, ‘ಅಳೈ’, ‘ಕೋವಿಲ್’, ‘ಮನ್‌ಮದನ್’, ‘ವಲ್ಲವನ್’, ‘ಗೋವಾ’, ‘ವಿನೈತಾಂಡಿ ವರುವಾಯ’, ‘ವಾನಂ’, ‘ಒಸ್ತೆ’, ‘ಪೋಡಾ ಪೋಡಿ’, ‘ದೊಂಗಾಟ’, ‘ವಾಲು’, ‘ಈಶ್ವರನ್’, ‘ಮಾನಾಡು’ ಮುಂತಾದ ಹಿಟ್‌ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇಷ್ಟೇ ಅಲ್ಲದೆ, ಕಾವೇರಿ ನೀರಿನ ವಿಚಾರದಲ್ಲಿ ಕೂಡ ಕನ್ನಡಿಗರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಇದೀಗ, ಸಿಂಬು ಖ್ಯಾತ ಉದ್ಯಮಿಯ ಮಗಳನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ವ್ಯಾಪಕವಾಗಿ ಹರುದಾಡಿ ಸಂಚಲನ ಮೂಡಿಸಿದೆ.

ಈ ಹಿಂದೆ ಬಹುಬೇಡಿಕೆಯ ನಟಿಯರಾದ ನಯನತಾರಾ ಹಾಗೂ ಹನ್ಸಿಕಾ ಅವರ ಜೊತೆಗೆ ಸಿಂಬು ಹೆಸರು ತಳುಕು ಹಾಕಿಕೊಂಡು ಅಂತೆ ಕಂತೆಗಳ ಸಂತೆ ಹೆಚ್ಚಾಗಿತ್ತು. ಹೀಗಾಗಿ, ಸಿಂಬು ಕೊಂಚ ಸಮಯ ನಟನೆಗೆ ಬ್ರೇಕ್ ಕೂಡ ನೀಡಿದ್ದರು. ಈಗ ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ಸಿಂಬು ಶ್ರೀಲಂಕಾದ ಶ್ರೀಲಂಕಾದ ಯಶಸ್ವಿ ಉದ್ಯಮಿಯೊಬ್ಬರ ಮಗಳನ್ನು ವರಿಸಲಿದ್ದು, ಆಕೆ ಮೆಡಿಕಲ್ ವಿದ್ಯಾರ್ಥಿನಿಯೆನ್ನಲಾಗಿದೆ. ಇವರಿಬ್ಬರ ನಡುವೆ ಪ್ರೇಮಾಂಕುರವಾಗಿದ್ದು, ಯುವತಿ ಸಿಂಬು ಅವರ ದೊಡ್ಡ ಅಭಿಮಾನಿ ಎಂದು ಹೇಳಲಾಗುತ್ತಿದೆ. ಸಿಂಬು ಅಭಿನಯದ ತಣಿದತು ಕಾಡು'(vendhu thanindhathu kaadu) ಸಿನಿಮಾ ತೆರೆಕಂಡಿದ್ದು, ಇನ್ನೂ ಕೆಲ ಸಿನಿಮಾಗಳು ತೆರೆ ಕಾಣ ಬೇಕಾಗಿದೆ. ಇನ್ನು ಸಿಂಬು ಮದುವೆಯಾಗಲಿರುವ (Simbu Marriage)ಖ್ಯಾತ ಉದ್ಯಮಿ ಯಾರು? ಈ ನಟನ ಕೈ ಹಿಡಿಯಲಿರುವ ಅದೃಷ್ಟ ವಂತೆ ಯಾರು? ಎಂಬ ಗುಟ್ಟು ರಹಸ್ಯವಾಗಿಯೇ ಉಳಿದಿದ್ದು, ಸಿಂಬು ಅಭಿಮಾನಿಗಳು ಶುಭ ಸುದ್ದಿಯನ್ನು ಕೇಳಲು ಕಾತುರದಿಂದ ಎದುರು ನೋಡುತ್ತಿದ್ದಾರೆ