Home Breaking Entertainment News Kannada Sania Mirza- Shoaib Malik: ಕೊನೆಗೂ ವಿಚ್ಛೇದನದ ಮಾಹಿತಿ ಬಗ್ಗೆ ಬಾಯ್ಬಿಟ್ಟ ಶೋಯಬ್ ಮಲಿಕ್!!!

Sania Mirza- Shoaib Malik: ಕೊನೆಗೂ ವಿಚ್ಛೇದನದ ಮಾಹಿತಿ ಬಗ್ಗೆ ಬಾಯ್ಬಿಟ್ಟ ಶೋಯಬ್ ಮಲಿಕ್!!!

Sania Mirza- Shoaib Malik
Image source: Koimoi.com

Hindu neighbor gifts plot of land

Hindu neighbour gifts land to Muslim journalist

Sania Mirza- Shoaib Malik : ಭಾರತೀಯ ಟೆನ್ನಿಸ್ ತಾರೆ ಸಾನಿಯಾ ಮತ್ತು (Sania Mirza- Shoaib Malik) ಶೋಯೆಬ್ ಅವರ ವಿಚ್ಛೇದನದ(Divorce) ಬಗ್ಗೆ ಈಗಾಗಲೇ ಅನೇಕ ಬಾರಿ ಸುದ್ದಿ ಕೇಳಿ ಬರುತ್ತಲೇ ಇದೆ. ಈ ಜೋಡಿಗಳಿಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಇವರ ನಡುವೆ ಶೋಯೆಬ್ ಅವರಿಗೆ ಬೇರೆ ಅಕ್ರಮ ಸಂಬಂಧದ ಹಿನ್ನೆಲೆ ಸಾನಿಯಾ ಮಿರ್ಜಾ ದೂರ ಆಗಲು ನಿರ್ಧರಿಸಿದ್ದಾರೆ ಎಂಬ ಸುದ್ಧಿ ಎಲ್ಲೆಡೆ ಹರಿದಾಡಿ ಈ ಜೋಡಿಯ ಅಭಿಮಾನಿಗಳಿಗೆ ಗೊಂದಲ ಶಾಕ್ ಉಂಟಾಗಿತ್ತು. ಮತ್ತೆ ಈ ವಿಚಾರ ಮುನ್ನಲೆಗೆ ಬಂದಿದೆ.

ಈ ಹಿಂದೆ ಡಿವೋರ್ಸ್ ಗಾಸಿಪ್ ಎಲ್ಲೆಡೆ ಕೇಳಿಬಂದಾಗ ಈ ಜೋಡಿ ಹೊಸ ಕಾರ್ಯಕ್ರಮವನ್ನು ಒಟ್ಟಿಗೆ ಘೋಷಿಸುವ ಮೂಲಕ ಎಲ್ಲರಿಗೆ ಶಾಕ್ ನೀಡಿದ್ದರು. ಒಟಿಟಿ ಪ್ಲಾಟ್ಫಾರ್ಮ್ `ದಿ ಮಿರ್ಜಾ ಮಲಿಕ್ ಶೋʼ ಎಂಬ ಶೀರ್ಷಿಕೆಯ ಮೂಲಕ ದಂಪತಿಗಳಿಬ್ಬರು ತೆರೆಮೇಲೆ ಬರಲಿದ್ದಾರೆ ಎಂಬ ಸುದ್ದಿಯ ಜೊತೆಗೆ ಒಟಿಟಿ ಪ್ಲಾಟ್ಫಾರ್ಮ್ ಉರ್ದುಫ್ಲಿಕ್ಸ್ ಕಾರ್ಯಕ್ರಮದ ಪೋಸ್ಟರ್ ಕೂಡ ಬಿಡುಗಡೆ ಮಾಡಿ ವಿಚ್ಛೇಧನ ಸುಳ್ಳು ಎಂಬುದನ್ನು ಸ್ಪಷ್ಟಪಡಿಸಿದ್ದರು. ಇದೀಗ, ಈ ಜೋಡಿ ಆರು ತಿಂಗಳಿಂದ ಜೊತೆಯಾಗಿ ಕಾಣಿಸಿಕೊಳ್ಳದೆ ಇರುವುದರಿಂದ ಈ ಜೋಡಿ ವಿಚ್ಛೇಧನ ಪಡೆಯೋದು ನಿಜಾನಾ ಎಂಬ ಅನುಮಾನ ಅಭಿಮಾನೀ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.ಸದ್ಯ, ಈ ಕುರಿತು ಶೋಯಬ್ ಮಲಿಕ್ ಮೌನ ಮುರಿದಿದ್ದು, ಇಬ್ಬರು ದೂರವಿರಲು ಕಾರಣವೇನು ಎಂಬುದನ್ನು ಬಾಯಿಬಿಟ್ಟಿದ್ದಾರೆ.

Image source: bollywoodshaadis.com

 

ಭಾರತದ ಮಾಜಿ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ 2010ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಬ್ಬರು ಕೂಡ ಅಂತರರಾಷ್ಟ್ರೀಯ ಕ್ರೀಡಾಪಟುಗಳಾಗಿರುವ ಹಿನ್ನೆಲೆ ಇಬ್ಬರ ಒತ್ತಡ ವೇಳಾಪಟ್ಟಿಯಿಂದ ಜೊತೆಯಾಗಿ ಕಾಣಿಸಿಕೊಳ್ಳುತ್ತಿಲ್ಲವಷ್ಟೆ.ಇವರ ನಡುವಿನ ವಿಚ್ಛೇದನ ವದಂತಿ ಸತ್ಯಕ್ಕೆ ದೂರವಾದ ಮಾತು ಎಂದು ಹೇಳಿ ಇಬ್ಬರು ದೂರವಾಗುವ ಸುದ್ದಿ ಸುಳ್ಳು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಪ್ರತಿಯೊಬ್ಬರ ದಾಂಪತ್ಯ ಜೀವನದಲ್ಲಿ ಏರಿಳಿತ ಇರುವುದು ಸಾಮಾನ್ಯ. ಹಾಗೆಂದ ಮಾತ್ರಕ್ಕೆ ಸಂಬಂಧಗಳಲ್ಲಿ ಎ‌ಲ್ಲವೂ ಮುಗಿದಿದೆ ಎಂದು ಅರ್ಥೈಸಿಕೊಳ್ಳುವುದು ಸರಿಯಲ್ಲ.
ಸ್ಥಳೀಯ ವಾಹಿನಿಯಲ್ಲಿ ಇತ್ತೀಚೆಗೆ ನಡೆದ ಈದ್ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಶೋಯೆಬ್ ಮಲಿಕ್ ಅವರು ತಾವಿಬ್ಬರು ವಿಚ್ಚೇದನ ಆಗುವ ಯೋಚನೆಯಲ್ಲಿಲ್ಲ. ಪ್ರತಿಯೊಬ್ಬರ ದಾಂಪತ್ಯ ಜೀವನದಲ್ಲಿ ಏರಿಳಿತ ಇರುವುದು ಸಾಮಾನ್ಯ. ಹಾಗೆಂದ ಮಾತ್ರಕ್ಕೆ ಸಂಬಂಧಗಳಲ್ಲಿ ಎ‌ಲ್ಲವೂ ಮುಗಿದಿದೆ ಎಂದು ಅರ್ಥೈಸಿಕೊಳ್ಳುವುದು ಸರಿಯಲ್ಲ ಎಂದು ಹೇಳಿ ವಿಚ್ಛೇದನದ ಕುರಿತ ಊಹಾಪೋಹಕ್ಕೆ ತೆರೆ ಎಳೆದಿದ್ದಾರೆ. ‘ಈದ್ ದಿನದಂದು ಮಡದಿ ಮತ್ತು ಮಗ ಜೊತೆಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದು, ಮನೆಯವರ ಜೊತೆಗೆ ಈದ್ ಆಚರಿಸಲು ಇಚ್ಚಿಸಿದ್ದೆ ಎಂಬುದನ್ನು ಇದೆ ವೇಳೆ ಶೋಯೆಬ್ ಹೇಳಿಕೊಂಡಿದ್ದಾರೆ.

 

ಇದನ್ನು ಓದಿ: Vizal Stuck in Child Throat : ಅಪ್ಪ ತಂದ ವಿಜಿಲ್ ನುಂಗಿದ 4 ವರ್ಷದ ಬಾಲಕ! ಈ ಮಗು ಬುದುಕಿದ್ದೇ ಬಹಳ ರೋಚಕ!