Home Breaking Entertainment News Kannada RRR ನಿರ್ದೇಶಕ ರಾಜಮೌಳಿ ಹತ್ಯೆಗೆ ಸ್ಕೆಚ್ ಹಾಕಿದ ಡೈರೆಕ್ಟರ್ಸ್ ಟೀಮ್ ? : ರಾಮ್ ಗೋಪಾಲ...

RRR ನಿರ್ದೇಶಕ ರಾಜಮೌಳಿ ಹತ್ಯೆಗೆ ಸ್ಕೆಚ್ ಹಾಕಿದ ಡೈರೆಕ್ಟರ್ಸ್ ಟೀಮ್ ? : ರಾಮ್ ಗೋಪಾಲ ವರ್ಮ ಟ್ವೀಟ್ !

Hindu neighbor gifts plot of land

Hindu neighbour gifts land to Muslim journalist

ರಾಜಮೌಳಿ ಅವರೇ ನೀವು ಜಾಗ್ರತರಾಗಿರಿ, ದಯವಿಟ್ಟು ನಿಮ್ಮ ಭದ್ರತೆಯನ್ನು ಹೆಚ್ಚಿಸಿಕೊಳ್ಳಿ. ನಿಮಗೆ ಅಪಾಯ ಕಾದಿದೆ. ಅನೇಕರು ನಿಮ್ಮ ಮೇಲೆ ಅಸೂಯೆ ಪಡುತ್ತಿದ್ದಾರೆ. ನಿಮ್ಮನ್ನು ಕೊಲ್ಲಲೆಂದೇ ನಿರ್ದೇಶಕರು ಒಂದು ಗುಂಪನ್ನಾಗಿ ಮಾಡಿಕೊಂಡಿದ್ದಾರೆ. ಆ ಗುಂಪಿನಲ್ಲಿ ನಾನೂ ಇದ್ದೇನೆ. ಇದೀಗ ನಾನು ನಾಲ್ಕು ಪೆಗ್‍ ತಗೆದುಕೊಂಡಿದ್ದೇನೆ ಹಾಗಾಗಿ ಸತ್ಯ ನುಡಿಯುತ್ತಿದ್ದೇನೆ ಎಂದು ಹೇಳುವ ಮೂಲಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ರಾಜಮೌಳಿ ಅಭಿಮಾನಿಗಳನ್ನು ದಂಗಾಗಿಸಿರುವ ಘಟನೆ ನಡೆದಿದೆ!

ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ಇದ್ದಲ್ಲಿ ಕಾಂಟ್ರವರ್ಸಿ ಸಹಜ. ಒಂದಿಲ್ಲೊಂದು ವಿಚಾರದಲ್ಲಿ ಅವರು ಸುದ್ದಿ ಆಗುತ್ತಲೇ ಇರುತ್ತಾರೆ. ಈಗ ಅವರು ರಾಜಮೌಳಿ ಬಗ್ಗೆ ಸರಣಿ ಟ್ವೀಟ್​ ಮಾಡಿದ್ದಾರೆ. ಅವರು ಮಾಡಿರುವ ‘ರಾಜಮೌಳಿ ಅವರೇ, ದಯವಿಟ್ಟು ಭದ್ರತೆ ಹೆಚ್ಚಿಸಿಕೊಳ್ಳಿ. ನಿಮ್ಮನ್ನು ಹತ್ಯೆ ಮಾಡಲು ತಂಡ ರಚಿಸಿಕೊಳ್ಳಲಾಗಿದೆ’ ಎಂಬ ಟ್ವೀಟ್​ ಅನ್ನು ಒಮ್ಮೆಲೆ ನೋಡಿದರೆ ಎಂತವರಿಗೂ ಕೂಡ ಶಾಕ್ ಆಗುವಂತಹ ವಿಚಾರ ಇದಾಗಿದೆ.

ಆದರೆ ಇದು ತಮಾಷೆಗಾಗಿ! ‘ರಾಜಮೌಳಿ ಅವರ ಹತ್ಯೆ ನಡೆಸಲು ತಂಡ ಸಿದ್ಧವಾಗಿದೆ’ ಎಂದು ರಾಮ್​ ಗೋಪಾಲ್​ ವರ್ಮಾ ಟ್ವೀಟ್ ಮಾಡಿದ್ದಾರೆ. ಆ ತಂಡದಲ್ಲಿ ತಾವೂ ಇರುವುದಾಗಿ ಅವರು ತಿಳಿಸಿದ್ದಾರೆ. ಇದೆಲ್ಲವನ್ನೂ ಅವರು ತಮಾಷೆಗಾಗಿ ಹೇಳಿದ್ದು ಅಂತ ಗೊತ್ತಾದ ತಕ್ಷಣ ರಾಜಮೌಳಿ ಅಭಿಮಾನಿಗಳು ಸಮಾಧಾನಗೊಂಡಿದ್ದಾರೆ. ರಾಮ್​ ಗೋಪಾಲ್​ ವರ್ಮಾ ಮಾಡಿದ ಈ ಟ್ವೀಟ್​ ಮಾತ್ರ ವೈರಲ್​ ಆಗಿದೆ.

ಸರಣಿಯ ಟ್ವೀಟ್ ನಲ್ಲಿ ರಾಜಮೌಳಿಯನ್ನು ಹೊಗಳಿರುವ ವರ್ಮಾ, ಅವರನ್ನು ದಾದಾ ಸಾಹೇಬ್ ಫಾಲ್ಕೆಗೆ ಹೋಲಿಸಿದ್ದಾರೆ. ಭಾರತೀಯ ಸಿನಿಮಾ ರಂಗದ ದಿಗ್ಗಜ ನಿರ್ದೇಶಕರನ್ನೂ ದಾಟಿಕೊಂಡು ಮುಂದೆ ಹೋಗಿದ್ದೀರಿ ಎಂದಿದ್ದಾರೆ. ಈ ಸ್ಥಾನದಲ್ಲಿ ನೀವು ಇರುತ್ತೀರಿ ಎಂದು ನಾನು ಅಂದುಕೊಂಡಿರಲಿಲ್ಲ ಎಂದು ಅಚ್ಚರಿಯನ್ನೂ ವ್ಯಕ್ತ ಪಡಿಸಿದ್ದಾರೆ. ಅಲ್ಲದೇ, ನಿಮ್ಮ ಕಿರುಬೆರಳನ್ನು ಒಂದು ಸಲ ಚೀಪಬೇಕು ಎಂದು ಯತ್ವಾತದ್ವಾ ಹೊಗಳಿದ್ದಾರೆ ರಾಮ್ ಗೋಪಾಲ್ ವರ್ಮಾ.

ನಿರ್ದೇಶಕ ಎಸ್​ಎಸ್​ ರಾಜಮೌಳಿ ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳು ಇದ್ದಾರೆ. ಅವರು ವಿಶ್ವಮಟ್ಟದಲ್ಲಿ ಖ್ಯಾತಿ ಪಡೆದಿದ್ದಾರೆ. ‘ಬಾಹುಬಲಿ’, ‘ಆರ್​ಆರ್​ಆರ್​’ ಮುಂತಾದ ಸಿನಿಮಾಗಳಿಂದಾಗಿ ಅವರ ಜನಪ್ರಿಯತೆ ಹೆಚ್ಚಾಗಿದೆ. ಇತ್ತೀಚೆಗೆ ‘ಆರ್​ಆರ್​ಆರ್​’ ಸಿನಿಮಾದ ‘ನಾಟು ನಾಟು..’ ಹಾಡು ‘ಗೋಲ್ಡನ್​ ಗ್ಲೋಬ್​ 2023’ ಅವಾರ್ಡ್​ ಪಡೆದುಕೊಂಡ ನಂತರ ಬೇರೆ ಬೇರೆ ದೇಶಗಳ ಜನರು ತೆಲುಗು ಚಿತ್ರರಂಗದತ್ತ ತಿರುಗಿ ನೋಡುವಂತಾಗಿದೆ. ಇಷ್ಟೆಲ್ಲ ಜನಪ್ರಿಯತೆ ಸಿಕ್ಕಿರುವುದರಿಂದ ಕೆಲವು ನಿರ್ದೇಶಕರಿಗೆ ಹೊಟ್ಟೆಕಿಚ್ಚು ಆಗಿದೆಯಂತೆ. ಆದ್ದರಿಂದಲೇ ರಾಜಮೌಳಿ ಅವರನ್ನು ಹತ್ಯೆ ಮಾಡುವ ಸಂಚು ನಡೆದಿದೆ ಎಂದು ರಾಮ್​ ಗೋಪಾಲ್​ ವರ್ಮಾ ಅವರು ಟ್ವೀಟ್​ ಮಾಡಿದ್ದಾರೆ.