Home Breaking Entertainment News Kannada BIG NEWS | ಲವ್ ಬರ್ಡ್ಸ್ ಆಗಿದ್ದ ಪವಿತ್ರಾ ಲೋಕೇಶ್ ಮತ್ತು ನರೇಶ್ ಈಗ ಅಣ್ಣ...

BIG NEWS | ಲವ್ ಬರ್ಡ್ಸ್ ಆಗಿದ್ದ ಪವಿತ್ರಾ ಲೋಕೇಶ್ ಮತ್ತು ನರೇಶ್ ಈಗ ಅಣ್ಣ ತಂಗಿ !

Hindu neighbor gifts plot of land

Hindu neighbour gifts land to Muslim journalist

ಚಿತ್ರರಂಗದ ಅತ್ಯಂತ ಜನಪ್ರಿಯ ಜೋಡಿ ಸದ್ಯದ ಮಟ್ಟಿಗೆ ಯಾವುದು ಎಂಬ ಬಗ್ಗೆ ಜನರಿಗೆ ಈಗ ಅನುಮಾನ ಇರಲಿಕ್ಕಿಲ್ಲ. ಅವರು ಬೇರೆ ಯಾರೂ ಅಲ್ಲ, ನಮ್ಮ ನಿಮ್ಮೆಲ್ಲರ ಮೆಚ್ಚಿನ ಆಂಟಿ ಅಂಕಲ್ ಪವಿತ್ರಾ ಲೋಕೇಶ್ ಮತ್ತು ನರೇಶ್ ಅಂಕಲ್ !

ಅಷ್ಟರ ಮಟ್ಟಿಗೆ ಅವರಿಬ್ಬರೂ ಜನಪ್ರಿಯ ಅಷ್ಟೇ ಅಲ್ಲ, ಆನೋನ್ಯ. ಇಂತಹ ಜೋಡಿ ಈಗ ಮತ್ತೆ ಸುದ್ದಿಯಲ್ಲಿದೆ. ಮೊನ್ನೆ ಅವರಿಬ್ಬರ ಪ್ರೀತಿಯ ವಿಷಯದಲ್ಲಿ ಸುದ್ದಿಯಲ್ಲಿದ್ದರೆ, ಈಗ ಅವರಿಬ್ಬರೂ ಅಣ್ಣ ತಂಗಿ ಸಂಭಂದ. ಏನು, ಇಷ್ಟು ಬೇಗ ಅವರಿಬ್ಬರು ಮನಸ್ಸು ಮುರಿದುಕೊಂಡು ಅಣ್ಣ ತಂಗಿಯರು ಆಗಲು ಒಪ್ಪಿಕೊಂಡರಾ ಎನ್ನುವ ಬಗ್ಗೆ ಸಂದೇಹವೇ, ನೋ ಚಾನ್ಸ್ !

ಇದೀಗ ಮತ್ತೊಮ್ಮೆ ನರೇಶ್ ಮತ್ತು ಪವಿತ್ರಾ ವಿಚಾರ ಸದ್ದು ಮಾಡಲು ರವಿತೇಜಾ ನಟನೆಯ `ರಾಮ್‌ರಾವ್ ಆನ್‌ಡ್ಯೂಟಿ’ ಚಿತ್ರ. ನಿನ್ನೆಯಷ್ಟೆ ತೆರೆಕಂಡಿದೆ. ನಿಜಜೀವನದಲ್ಲಿ ಪ್ರೀತಿಯ ಪ್ರೇಮದ ಅಮಳಿನಲ್ಲಿರುವ ಜೋಡಿಯಾಗಿ ಗುರುತಿಸಿಕೊಳ್ತಿರುವ ನರೇಶ್ ಮತ್ತು ಪವಿತ್ರಾ ಈ ಚಿತ್ರದಲ್ಲಿ ಅಣ್ಣ ತಂಗಿ. ಅವರಿಬ್ಬರೂ ಒಡಹುಟ್ಟಿದವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಲ್ಲಿಂದ ಎಲ್ಲಿಗೆ ಸಂಬಂಧ ನೋಡಿ ಅಂತಾ ಸಿನಿಮಾ ನೋಡಿದವರು ತಮಾಷೆ ಮಾಡುತ್ತಿದ್ದಾರೆ. ಅವರಿಬ್ಬರನ್ನು ಅಣ್ಣ ತಂಗಿಯ ರೂಪದಲ್ಲಿ ನೋಡಿ ಒಪ್ಪಿಕೊಳ್ಳಲು ಯಾರಿಗೂ ಸಾಧ್ಯವಾಗುತ್ತಿಲ್ಲ. ಆಕೆ ‘ಅನ್ನಯ್ಯ ‘ ಅಂದ ಕೂಡಲೇ ಸಿನಿಮಾ ನೋಡಿದ ಪ್ರೇಕ್ಷಕರಲ್ಲಿ ದೊಡ್ಡ ನಗು. ಆತನನ್ನು ಅಣ್ಣನಾಗಿ ಮತ್ತು ಆಕೆಯನ್ನು ‘ ಚಿನ್ನ ಚೆಲ್ಲಿ’ ಯಾಗಿ ಒಪ್ಪಿಕೊಳ್ಳಲು ಯಾರೂ ತಯಾರಿಲ್ಲ. ಅವರಿಬ್ಬರ ಸಂಬಂಧ ಜನರ ಕಣ್ಣಿನ ಗೋಳಿಗಳಲ್ಲಿ ಫಿಕ್ಸ್ ಆಗಿರುವ ಕಾರಣ ಅವರಿಬ್ಬರು ಯಾವ ಪಾರ್ಟ್ ಆಡಿದರೂ, ಅದು ಚೆಲ್ಲಾಟ ದ ಥರಾನೇ ಕಾಣಿಸ್ತಿದೆ. ಈ ಚಿತ್ರವು ಇವರಿಬ್ಬರ ಲವ್ ಸ್ಟೋರಿ ಪಬ್ಲಿಕ್ ಆಗುವ ಮೊದಲೇ ಚಿತ್ರೀಕರಣ ಮುಗಿಸಿತ್ತು. ಈಗ ಅವರಿಬ್ಬರ ಕೆಮಿಸ್ಟ್ರಿಯನ್ನು ತೆಲುಗು ಮಂದಿ ರಿಜೆಕ್ಟ್ ಮಾಡಿದ ಕಾರಣ ಇನ್ಮುಂದೆ ಅವರಿಬ್ಬರಿಗೆ ಕೆಮಿಸ್ಟ್ರಿ ಮ್ಯಾಚ್ ಆಗುವ ಪಾತ್ರಗಳನ್ನೇ ಸೃಷ್ಟಿಸಬೇಕಿದೆ.