Home Breaking Entertainment News Kannada Zeenat aman: ಜನ ನನ್ನ ಟ್ಯಾಲೆಂಟ್ ಬದಲು ‘ಅದನ್ನು’ ನೋಡೋದೇ ಜಾಸ್ತಿ, ನಾನೂ ಅದನ್ನೇ ಬಂಡವಾಳ...

Zeenat aman: ಜನ ನನ್ನ ಟ್ಯಾಲೆಂಟ್ ಬದಲು ‘ಅದನ್ನು’ ನೋಡೋದೇ ಜಾಸ್ತಿ, ನಾನೂ ಅದನ್ನೇ ಬಂಡವಾಳ ಮಾಡಿಕೊಂಡೆ – ಸಂಚಲನ ಮೂಡಸಿದ ನಟಿಯ ಹೇಳಿಕೆ

Zeenat aman
Image source- Times of india

Hindu neighbor gifts plot of land

Hindu neighbour gifts land to Muslim journalist

Zeenat aman: ಇತ್ತೀಚಿನ ದಿನಗಳಲ್ಲಿ ಕೆಲವು ಸಿನಿಮಾ ತಾರೆಯರು ಬೋಲ್ಡ್(Bold) ಸಿನಿಮಾಗಳಲ್ಲೇ ಹೆಚ್ಚು ನಟಿಸೋದು ಕಾಮನ್ ಆಗಿಬಿಟ್ಟಿದೆ. ಇನ್ನು ಕೆಲವರು ನಟನೆ ಮಾತ್ರವಲ್ಲ ತಮ್ಮ ಸ್ಟೇಟ್ಮೆಂಟ್ ಗಳನ್ನೂ ಬೋಲ್ಡ್ ಆಗೇ ನೀಡುತ್ತಾರೆ. ಅಂತೆಯೇ ಇದೀಗ ಹಿಂದಿ ನಟಿಯೊಬ್ಬರು(Hindi acter) ಹೇಳಿದ ಹೇಕೆಯೊಂದು ಸಖತ್ ವೈರಲ್ ಆಗ್ತಿದೆ.

ಹೌದು, ಒಂದಾನೊಂದು ಕಾಲದಲ್ಲಿ ಹಿಂದಿ ಚಿತ್ರರಂಗದಲ್ಲಿ ಭಾರೀ ಖ್ಯಾತಿ ಗಳಿಸಿದ್ದ ಜೀನತ್ ಅಮಾನ್(Zeenat aman) ಸದ್ಯ ತಾವು ನೀಡಿರೋ ಹೇಳಿಕೆಯೊಂದರಿಂದ ಭಾರೀ ಸುದೂಧಿಯಾಗುತ್ತಿದ್ದಾರೆ. ಅಮಿತಾಬ್ ಬಚ್ಚನ್‌ನಿಂದ(Amitab bhaccan) ಹಿಡಿದು ಫಿರೋಜ್ ಖಾನ್‌(Firoz khanlವರೆಗಿನ ಸೂಪರ್‌ಸ್ಟಾರ್‌ಗಳೊಂದಿಗೆ ನಟಿಸಿ ಸೈ ಎನಿಸಿಕೊಂಡು, ನಾಯಕ ನಟಿಯಾಗಿ ಸೂಪರ್‌ಹಿಟ್ ಚಿತ್ರಗಳನ್ನು ನೀಡಿರೋ ಈ ಚೆಲುವೆ ಇತ್ತೀಚಿಗೆ ನೀಡಿರುವ ಹೇಳಿಕೆಯೊಂದು ಸಂಚಲನ ಮೂಡಿಸಿದೆ.

ಅಂದಹಾಗೆ ಈಚೆಗೆ ಜನರು ಪ್ರತಿಭೆಗಿಂತ ಹೆಚ್ಚಾಗಿ ನಾಯಕಿಯ ಎದೆ, ಸೊಂಟ, ಮುಖ ಮತ್ತು ಆಕೃತಿಯಲ್ಲಿ ಆಸಕ್ತಿ ಹೊಂದಿದ್ದಾರೆ ಎಂಬ ಮಾತನ್ನು ಹೇಳುವ ಮೂಲಕ ಜೀನತ್‌ ಸುದ್ದಿಯಲ್ಲಿದ್ದಾರೆ. ಹೌದು, ತನ್ನನ್ನೇ ಉದಾಹರಣೆಯಾಗಿಟ್ಟುಕೊಂಡು ಹೇಳಿದ ಅಮಾನ್ ಅವರು ‘ಜನರು ನನ್ನ ಮುಖ ಮತ್ತು ಆಕೃತಿಯಲ್ಲಿ ಆಸಕ್ತಿ ಹೊಂದಿದ್ದಾರೆಯೇ ಹೊರತು ನನ್ನ ಪ್ರತಿಭೆಯಲ್ಲಿ ಅಲ್ಲ. ಅದಕ್ಕಾಗಿ ಸ್ಲಿಮ್ ವೇಸ್ಟ್ ಮತ್ತು ಸೆಕ್ಸಿ ಫಿಗರ್ ಹೊಂದಿರುವ ಹಾಟ್ ಹುಡುಗಿಯರಿಗೆ ಮಾತ್ರ ಇಲ್ಲಿ ಅವಕಾಶ ನೀಡಲಾಗುತ್ತದೆ. ಉದ್ಯಮದ ಈ ವಾಸ್ತವತೆಯನ್ನು ಕಲಿತ ನಂತರ ನಾನು ನನ್ನ ನೋಟವನ್ನು ಬಂಡವಾಳ ಮಾಡಿಕೊಂಡೆ. ಅಂತಹ ಪಾತ್ರಗಳನ್ನು ಆಯ್ಕೆ ಮಾಡಿಕೊಂಡೆ. ಎಂದು ತಮ್ಮ ನಟನೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ

ಅಷ್ಟೇ ಅಲ್ಲ ನಾಯಕಿ ಇಂಡಸ್ಟ್ರಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಸಾಕಷ್ಟು ಹರಸಾಹಸ ಪಡಬೇಕಾಗುತ್ತದೆ. ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್(Casting couch)ಯಾವಾಗಲೂ ಚಾಲ್ತಿಯಲ್ಲಿದೆ ಎಂದು ಹೇಳುವ ಮೂಲಕ ಇಂದಿಗೂ ಕಾಸ್ಟಿಂಗ್‌ ಕೌಚ್‌ ಜಾರಿಯಲ್ಲಿದೆ ಎಂಬ ನಿಗೂಢ ಸತ್ಯ ಬಿಚ್ಚಿಟ್ಟಿದ್ದಾರೆ. ಅಲ್ಲದೆ ಚಲನಚಿತ್ರಗಳಲ್ಲಿ ಕೆಲಸ ಮಾಡಲು, ನಟಿಯರು ನಾಯಕರು, ನಿರ್ದೇಶಕರು(Director), ನಿರ್ಮಾಪಕರು ಸೇರಿದಂತೆ ಅನೇಕರ ಜೊತೆ ಸರಿದೂಗಿಸಿಕೊಂಡು ಹೋಗಬೇಕಾಗುತ್ತದೆ. ಅದರ ನಂತರ ಅವರಿಗೆ ಚಿತ್ರದಲ್ಲಿ ಅವಕಾಶ ಸಿಗುತ್ತದೆ ಎಂಬುದನ್ನೂ ಬಾಯಿಬಿಟ್ಟಿದ್ದಾರೆ.

ಅಂದಹಾಗೆ ಜೀನತ್ 1971 ರಲ್ಲಿ ‘ಹಲ್ಚಲ್’ ಚಿತ್ರದೊಂದಿಗೆ ಬಾಲಿವುಡ್‌ನಲ್ಲಿ(Bollywood) ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅದೃಷ್ಟವೆಂಬಂತೆ ಅದೇ ವರ್ಷದಲ್ಲಿ ಅವರು ‘ಹರೇ ರಾಮ ಹರೇ ಕೃಷ್ಣ’ ಮೂಲಕ ಸ್ಟಾರ್‌ ನಟಿಯಾಗಿ ಮಿಂಚಿದರು. ಸದ್ಯ ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಆಗಾಗ್ಗೆ ತಮ್ಮ ಜೀವನಕ್ಕೆ ಸಂಬಂಧಿಸಿದ ಆಸಕ್ತಿದಾಯಕ ಮಾಹಿತಿಯನ್ನು ಹಂಚಿಕೊಳ್ಳುತ್ತಿರುತ್ತಾರೆ.

 

ಇದನ್ನು ಓದಿ: IND vs WI: ಮೊದಲ ಟೆಸ್ಟ್’ಗೆ ಟೀಂ ಇಂಡಿಯಾದ ಈ ದೈತ್ಯ ಪ್ರತಿಭೆ ಕೂಡಾ ಔಟ್ ?