Home Breaking Entertainment News Kannada ಹಿಂದೂ ಸಂಸ್ಕೃತಿಯನ್ನು ವಿದೇಶದಲ್ಲಿ ಎತ್ತಿ ಹಿಡಿದ ಬಾಲಿವುಡ್ ನಟಿ | ಭಗವದ್ಗೀತೆಯನ್ನು ಇಸ್ರೇಲ್ ಮಾಜಿ ಅಧ್ಯಕ್ಷನಿಗೆ...

ಹಿಂದೂ ಸಂಸ್ಕೃತಿಯನ್ನು ವಿದೇಶದಲ್ಲಿ ಎತ್ತಿ ಹಿಡಿದ ಬಾಲಿವುಡ್ ನಟಿ | ಭಗವದ್ಗೀತೆಯನ್ನು ಇಸ್ರೇಲ್ ಮಾಜಿ ಅಧ್ಯಕ್ಷನಿಗೆ ಉಡುಗೊರೆಯಾಗಿ ನೀಡುವ ಮೂಲಕ ಮನಗೆದ್ದ ‘ಐರಾವತ’ದ ಬೆಡಗಿ

Hindu neighbor gifts plot of land

Hindu neighbour gifts land to Muslim journalist

ಈಗಿನ ಕಾಲದ ನಟಿಯರು ನಮ್ಮ ದೇಶದ ಸಂಸ್ಕೃತಿ ಬಿಟ್ಟು ಪಾಶ್ಚಾತ್ಯ ಸಂಸ್ಕೃತಿಯನ್ನೇ ಹೆಚ್ಚಾಗಿ ಅನುಸರಿಸುತ್ತಾರೆ. ಆದರೆ ಇಲ್ಲೊಬ್ಬ ನಟಿ ವಿದೇಶದಲ್ಲಿ ನಮ್ಮ ಹಿಂದೂ ಸಂಸ್ಕೃತಿಯನ್ನು ಎತ್ತಿಹಿಡಿದಿದ್ದಾಳೆ. ಹಿಂದುತ್ವದ ಸಾರವನ್ನು ವಿದೇಶದಲ್ಲೂ ಪ್ರಜ್ವಲಿಸುವ ಹಾಗೆ ಮಾಡಿದ್ದಾಳೆ.

ಹೌದು,  ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅವರು ಇಸ್ರೇಲ್ ಮಾಜಿ ಅಧ್ಯಕ್ಷ ಬೆಂಜಮಿನ್ ನೆತಾನ್ಯಾಹು ಅವರಿಗೆ ಭಗವದ್ಗೀತೆ ನೀಡುವ ಮೂಲಕವಾಗಿ ಭಾರತೀಯರ ಮನಗೆದ್ದಿದ್ದಾರೆ.

ಊರ್ವಶಿ ಅವರು ಭಗವದ್ಗೀತೆಯ ಇಂಗ್ಲಿಷ್ ಪುಸ್ತಕವನ್ನು ಇಸ್ರೇಲ್ ಮಾಜಿ ಅಧ್ಯಕ್ಷನಿಗೆ ಉಡುಗೊರೆಯಾಗಿ ನೀಡಿದ್ದಾರೆ. ಹಾಗೆಯೇ ಅವರಿಗೆ ಹಿಂದಿಯ ಕೆಲವು ಪದಗಳನ್ನು ಕಲಿಸುವ ಪ್ರಯತ್ನವನ್ನು ಮಾಡಿದ್ದಾರೆ.

2015ರಲ್ಲಿ ಮಿಸ್ ದಿವಾ ಯೂನಿವರ್ಸ್ ಗೌರವವನ್ನು ಗಳಿಸಿದ್ದ ಊರ್ವಶಿ, ಇಸ್ರೇಲ್‍ನ ಐಲಾಟ್‍ನಲ್ಲಿ ನಡೆದ ವಿಶ್ವ ಸುಂದರಿ 2021 ಸ್ಪರ್ಧೆಯಲ್ಲಿ ಈ ವರ್ಷದ ತೀರ್ಪುಗಾರರಾಗಿದ್ದಾರೆ. ಇಂದು ನಡೆಯಲಿರುವ ಮಿಸ್ ಯೂನಿವರ್ಸ್‍ನ 70 ನೇ ಆವೃತ್ತಿಯಲ್ಲಿ ನಟಿ ಭಾರತವನ್ನು ಪ್ರತಿನಿಧಿಸುತ್ತಾರೆ. ಈ ಸಮಯದಲ್ಲಿ ಊರ್ವಶಿ ಮತ್ತು ಅವರ ಕುಟುಂಬವನ್ನು ಇಸ್ರೇಲ್ ಮಾಜಿ ಅಧ್ಯಕ್ಷ ಆಮಂತ್ರಿಸಿ ಊರ್ವಶಿ ಅವರನ್ನು ಗೌರವಿಸಿದ್ದಾರೆ. ಈ ಬಗ್ಗೆ ಊರ್ವಶಿ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡು ಧನ್ಯವಾದವನ್ನು ತಿಳಿಸಿದ್ದಾರೆ.

ನಮ್ಮ ಭಾಷೆಯಲ್ಲಿ ಎಲ್ಲಾ ಚೆನ್ನಾಗಿದೆ ಎನ್ನುವುದಕ್ಕೆ ಹಬಾಬಾ ಎನ್ನುತ್ತೇವೆ, ಹಿಂದಿಯಲ್ಲಿ ಏನು ಹೇಳುತ್ತೀರಾ? ಎಂದು ಬೆಂಜಮಿನ್ ನೆತಾನ್ಯಾಹು, ಊರ್ವಶಿ ಅವರನ್ನು ಕೇಳಿದ್ದಾರೆ. ಸಬ್ ಶಾಂದಾರ್ ಸಬ್ ಬಡಿಯಾ ಎಂದು ಹೇಳುತ್ತೇವೆ ಎಂದು ಊರ್ವಶಿ ಹೇಳಿದ್ದಾರೆ. ನೆತಾನ್ಯಾಹು ಅವರು ಸರಾಗಾವಾಗಿ ಹಿಂದಿ ಅದನ್ನು ಅನುಕರಣೆ ಮಾಡುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.

ಅಂದಹಾಗೆ ಊರ್ವಶಿ ಅವರು ಹಲವು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಐರಾವತ ಸಿನಿಮಾದಲ್ಲೂ ಕೂಡ ತೆರೆ ಹಂಚಿಕೊಂಡಿದ್ದಾರೆ.