Home Breaking Entertainment News Kannada ಬಿಗ್‌ಬಾಸ್‌ ದೀಪಿಕಾದಾಸ್‌ ಬೆಕ್ಕು ಮಂಗಳೂರಿನಲ್ಲಿ ಪತ್ತೆ, ಬಹುಮಾನ ಯಾರ ಕೈ ಸೇರಿತು?

ಬಿಗ್‌ಬಾಸ್‌ ದೀಪಿಕಾದಾಸ್‌ ಬೆಕ್ಕು ಮಂಗಳೂರಿನಲ್ಲಿ ಪತ್ತೆ, ಬಹುಮಾನ ಯಾರ ಕೈ ಸೇರಿತು?

Dipika Das

Hindu neighbor gifts plot of land

Hindu neighbour gifts land to Muslim journalist

Deepika Das: ಝೀ ಕನ್ನಡದ ಜನಪ್ರಿಯ ಧಾರಾವಾಹಿ ನಾಗಿಣಿ ಮೂಲಕ ಜನ ಮನ ಗೆದ್ದ ದೀಪಿಕಾ ದಾಸ್(Deepika Das) ಬಿಗ್ ಬಾಸ್ ಸೀಸನ್ 7ರಲ್ಲಿ (Bigg Boss Kannada season 7) ಹಾಗೂ ಬಿಗ್ ಬಾಸ್ ಸೀಸನ್ 9(Bigg Boss Kannada season 9) ಸಖತ್ ಟಫ್ ಸ್ಪರ್ಧಿ ಆಗಿದ್ದು ಗೊತ್ತಿರುವ ವಿಚಾರವೇ. ಹಾಲ್ಗೆನ್ನೆ ಚೆಲುವೆ ದೀಪಿಕಾ ದಾಸ್ ಮೊನ್ನೆಯಷ್ಟೇ ತನ್ನ ಹುಟ್ಟಿದ ಹಬ್ಬದ ಸಂಭ್ರಮವನ್ನು ಆಚರಿಸಿಕೊಂಡಿದ್ದರು. ಈ ನಡುವೆ ಹುಟ್ಟಿದ ದಿನವೇ ಕಹಿ ಸುದ್ದಿಯೊಂದು ನಟಿಗೆ ಎದುರು ನೋಡುತ್ತಿತ್ತು. ಇದೀಗ, ಈ ಕುರಿತ ರೋಚಕ ಮಾಹಿತಿ ಲಭ್ಯವಾಗಿದೆ. ಅದೇನು ಅಂತೀರಾ? ಹಾಗಿದ್ರೆ ಈ ಮಾಹಿತಿ ನೀವು ಓದಲೇಬೇಕು.

ದೀಪಿಕಾ ದಾಸ್ ಬರ್ತ್ಡೇ ದಿನವೇ ತನ್ನ ನೆಚ್ಚಿನ ಗಂಡು ಬೆಕ್ಕು ಶ್ಯಾಡೋ ಕಳ್ಳತನವಾಗಿರುವ ವಿಚಾರದ ಕುರಿತಂತೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡು ಅದರ ಶೋಧ ಕಾರ್ಯಕ್ಕೆ ಕೈ ಜೋಡಿಸುವಂತೆ ಮನವಿ ಮಾಡಿದ್ದರು. ಶ್ಯಾಡೋ ಪರ್ಷಿಯಮನ್ ಬ್ರೀಡ್‌ ಆಗಿದ್ದು ಕಪ್ಪು ಬಣ್ಣ ಹೊಂದಿದ್ದು (ಕತ್ತಿನ ಸುತ್ತ ಕಂದುಬಣ್ಣವನ್ನು ಒಳಗೊಂಡಿದೆ. ಇದಕ್ಕೆ ಕೇವಲ 9 ತಿಂಗಳು ಎಂದು ತನ್ನ ನೆಚ್ಚಿನ ಬೆಕ್ಕಿನ ಪತ್ತೆಗೆ ಪೂರಕ ಮಾಹಿತಿ ಕೂಡ ನೀಡಿದ್ದರು ದೀಪಿಕಾ ದಾಸ್. ಅಷ್ಟೇ ಅಲ್ಲದೆ, ಈ ಬೆಕ್ಕನ್ನು ಹುಡುಕಿ ಕೊಟ್ಟರೆ ಬಹುಮಾನ ನೀಡೋ ಆಫರ್ ಕೂಡ ಕೊಟ್ಟಿದ್ದಾರೆ. ದೀಪಿಕಾ ಮಾಹಿತಿ ನೀಡುವ ಸಲುವಾಗಿ ಮೂರ್ನಾಲ್ಕು ನಂಬರ್‌ಗಳನ್ನು ಕೂಡ ಕೊಟ್ಟಿದ್ದಾರೆ. ಬೆಕ್ಕನ್ನು ಹುಡುಕಿ ಕೊಟ್ಟವರಿಗೆ 10,000 ರಿಂದ 15, 000 ಬಹುಮಾನ ನೀಡುವುದಾಗಿ ಹೇಳಿದ್ದಾರೆ. ಇದೀಗ, ದೀಪಿಕಾ ದಾಸ್ ಗೆ ಶುಭ ಸುದ್ದಿ ಲಭ್ಯವಾಗಿದೆ. ಹೌದು!! ಕಳುವಾಗಿದ್ದ ತನ್ನ ನೆಚ್ಚಿನ ಬೆಕ್ಕು ಇದೀಗ ಮಂಗಳೂರಿನಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ.

ಸದ್ಯ ದೀಪಿಕಾ ತನ್ನ ಶ್ಯಾಡೋವನ್ನು ಹುಡುಕಲು ನೆರವಾದ ಪ್ರತಿಯೊಬ್ಬರಿಗೆ ಧನ್ಯವಾದ ತಿಳಿಸಿದ್ದು, ಬೆಕ್ಕನ್ನು ಕದ್ದು ಮಂಗಳೂರಿಗೆ ಕಳುಹಿಸಲಾಗಿದೆಯಂತೆ. ಇನ್ನು ನಟಿ ದೀಪಿಕಾ ದಾಸ್ ಶ್ಯಾಡೋ ವನ್ನು ಕಂಡ ಬಳಿಕವಷ್ಟೇ ಈ ಕುರಿತ ಹೆಚ್ಚಿನ ಮಾಹಿತಿ ಅತೀ ಶೀಘ್ರದಲ್ಲಿ ನೀಡುವುದಾಗಿ ಹೇಳಿಕೊಂಡಿದ್ದಾರೆ. ಇನ್ನು ಶ್ಯಾಡೋ ಹುಡುಕಾಟದಲ್ಲಿ ಭಾಗಿಯಾಗಿದ್ದು ಯಾರು?? ಶ್ಯಾಡೋ ಮಂಗಳೂರಿನಲ್ಲಿ ಇರುವ ಬಗ್ಗೆ ಮಾಹಿತಿ ಸಿಕ್ಕಿದ್ದು ಹೇಗೆ ಎಂಬ ಪ್ರಶ್ನೆ ಸಹಜವಾಗಿ ಎಲ್ಲರಲ್ಲೂ ಮನೆ ಮಾಡಿದ್ದು, ಸದ್ಯ, ದೀಪಿಕಾ ಅವರ ಉತ್ತರಕ್ಕೆ ಅಭಿಮಾನಿಗಳು ಕಾತುರದಿಂದ ಎದುರು ನೋಡುತ್ತಿದ್ದಾರೆ.