

Rakhi sawant: ತಮ್ಮ ನಟನೆಗಿಂತಲೂ, ವಿವಾದಗಳ ಮೂಲಕವೇ ಸಾಕಷ್ಟು ಸುದ್ದಿಯಾಗೋ ನಟಿಯರಲ್ಲಿ ಬಾಲಿವುಡ್ ಹಾಟ್ ಬಾಂಬ್ ರಾಖಿ ಸಾವಂತ್(Rakhi sawant) ಒಬ್ಬರಾಗಿದ್ದಾರೆ. ಆಕೆ ಸಿನೆಮಾಗಳಿಗಿಂತ ಹೆಚ್ಚು ವೈಯುಕ್ತಿಕ ವಿಚಾರಗಳಿಂದ ಸುದ್ದಿಯಾದರು. ಅವರ ಲವ್ ಸ್ಟೋರಿ, ಮದುವೆ, ಬ್ರೇಕಪ್ ಯಾವುದೇ ಸಿನೆಮಾ ಸ್ಟೋರಿಗಿಂತಲೂ ಕಡಿಮೆಯಿಲ್ಲ ಎಂದು ಹೇಳಬಹುದು. ಅಂತೆಯೇ ಈ ರಾಖಿ ಇದೀಗ ಮತ್ತೊಂದು ವಿಡಿಯೋ ಮೂಲಕ ಸುದ್ದಿಯಾಗಿದ್ದು, ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ.
ಹೌದು, ಇದೀಗ ತಾನೆ ರಾಖಿ ಮೆಕ್ಕಾ-ಮದೀನಾಕ್ಕೆ ಹೋಗಿ ಉಮ್ರಾ ನೆರವೇರಿಸಿ ವಾಪಸಾಗಿದ್ದಾರೆ. ತಾವು ಪವಿತ್ರರಾಗಿದ್ದು, ಯಾರೂ ಪುರುಷರು ತಮ್ಮನ್ನು ಮುಟ್ಟಬಾರದು ಎಂದು ಹೇಳಿದ್ದಾರೆ. ಆದರೆ ಇದರ ಬೆನ್ನಲ್ಲೇ ರಾಖಿ ಸಾವಂತ್ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದ್ದು ನಟಿ ತನುಶ್ರೀ ದತ್ತಾ ತಮ್ಮ ಮೇಲೆ ಪದೇ ಪದೇ ಅತ್ಯಾಚಾರ ಮಾಡಿರುವುದಾಗಿ ಹೇಳಿದ್ದಾರೆ. ತನುಶ್ರೀ ದತ್ತಾ(Tanushree datta) ಲೆಸ್‌ಬಿಯನ್. ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಮಾತನಾಡಿರೋ ರಾಖಿ ‘ತನುಶ್ರೀ ದತ್ತಾ ವಿರುದ್ದ ಸಲಿಂಗಕಾಮದ ಆರೋಪವನ್ನು ಮಾಡಿದ್ದಾರೆ. ತನುಶ್ರೀ ಸಲಿಂಗಕಾಮಿ, ನಾನು ಆಕೆಯ ಸ್ನೇಹಿತೆಯಾಗಿದ್ದೆ. ಆಕೆ ನನ್ನ ಮೇಲೆ ಪದೇ ಪದೇ ಅತ್ಯಾಚಾರ ನಡೆಸಿದ್ದಾರೆ ಎಂದು ರಾಖಿ ವಿಡಿಯೋದಲ್ಲಿ ಹೇಳಿದ್ದಾರೆ. ಇದು ಸುಮಾರು ವರ್ಷಗಳ ಹಿಂದಿನ ಮಾತು. ನಾನು ತನುಶ್ರೀ ಮನೆಗೆ ಹೋಗಿದ್ದಾಗ ಆಕೆ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಅದಕ್ಕೆ ಸಂಬಂಧಿಸಿದ ಸಾಕ್ಷಿಗಳು ಸಹ ನನ್ನ ಬಳಿಯಿದೆ’ ಎಂದಿದ್ದಾರೆ. ಮಿಟೂ ಅಭಿಯಾನ ದೇಶದಲ್ಲಿ ಸದ್ದು ಮಾಡುತ್ತಿದ್ದ ಸಮಯದಲ್ಲಿ ರಾಖಿ ಈ ವಿಡಿಯೋ ಮೂಲಕ ಹೇಳಿಕೆ ನೀಡಿದ್ದರು. ಇದೀಗ ಮತ್ತೆ ಈ ವಿಡಿಯೋ ವೈರಲ್ ಆಗುತ್ತಿದೆ.
ತನುಶ್ರೀ ದತ್ತಾ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿರುವ ವೀಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು, #MeToo ಅಭಿಯಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೆಚ್ಚಿನವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಯಾರು ತನುಶ್ರೀ ದತ್ತಾ?
ತನುಶ್ರೀ ದತ್ತಾ ಅವರ ಕುರಿತು ಹೇಳುವುದಾದರೆ, ಇವರು 2003 ರಲ್ಲಿ ಮುಂಬೈನಲ್ಲಿ ನಡೆದ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ದತ್ತಾ ಗೆದ್ದವರು. ಈಕ್ವೆಡಾರ್‌ನ ಕ್ವಿಟೊದಲ್ಲಿ ನಡೆದ ಮಿಸ್ ಯೂನಿವರ್ಸ್ 2004 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಅಲ್ಲಿ ಅವರು ಆರನೇ ರನ್ನರ್-ಅಪ್ ಆಗಿ ಸ್ಥಾನ ಪಡೆದಿದ್ದಾರೆ. ಇನ್ನು ಇವರ ಸಿನಿಮಾದ ವಿಷಯದ ಕುರಿತು ಹೇಳುವುದಾದರೆ, ಅವರು ತೀರತ ವಿಲಯಾಟ್ಟು ಪಿಳ್ಳೈ ಚಿತ್ರದಲ್ಲಿ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು ಮತ್ತು 2005 ರಲ್ಲಿ ಬಾಲಿವುಡ್‌ಗೆ ಹೆಜ್ಜೆ ಇಟ್ಟು, ಚಾಕೊಲೇಟ್ ಮತ್ತು ಆಶಿಕ್ ಬನಾಯಾ ಆಪ್ನೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಅಂದಹಾಗೆ #MeToo ಅಭಿಯಾನದ ಮೂಲಕ ನಟಿ ತುನುಶ್ರೀ ದತ್ತಾ, ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಅವರ ಮೇಲೆ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದರು. 10 ವರ್ಷಗಳ ಹಿಂದೆ ಸಿನಿಮಾ ಚಿತ್ರೀಕರಣದ ವೇಳೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಿದ್ದರು. ನಂತರ ಹಲವಾರು ಚಿತ್ರ ನಟಿಯರು ತಮ್ಮ ಮೇಲಾದ ಲೈಂಗಿಕ ದೌರ್ಜನ್ಯದ ಬಗ್ಗೆ ಬಹಿರಂಗಗೊಳಿಸಿದ್ದರು.













