Home Breaking Entertainment News Kannada BBK 12: ಸೀಸನ್ 12ರ ಕನ್ನಡ ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆ ಯಾವಾಗ?

BBK 12: ಸೀಸನ್ 12ರ ಕನ್ನಡ ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆ ಯಾವಾಗ?

Hindu neighbor gifts plot of land

Hindu neighbour gifts land to Muslim journalist

BBK 12: ಕನ್ನಡ ಬಿಗ್‌ಬಾಸ್ 14ನೇ ವಾರಕ್ಕೆ ಕಾಲಿಟ್ಟಿದ್ದು, ಗ್ರ್ಯಾಂಡ್ ಫಿನಾಲೆ ದಿನಾಂಕದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಸದ್ಯ ಮನೆಯಲ್ಲಿ 9 ಸ್ಪರ್ಧಿಗಳಿದ್ದು, ಈ ವಾರ ನಾಲ್ವರು ನಾಮಿನೇಟ್ ಆಗಿದ್ದಾರೆ.

ಕನ್ನಡದ ಬಿಗ್‌ಬಾಸ್ ರಿಯಾಲಿಟಿ ಶೋ 14ನೇ ವಾರಕ್ಕೆ ಕಾಲಿಟ್ಟಿದ್ದು, ಸದ್ಯ ಮನೆಯಲ್ಲಿ 9 ಸ್ಪರ್ಧಿಗಳಿದ್ದಾರೆ. 9 ಜನರಲ್ಲಿ ಫಿನಾಲೆಗೆ ಐವರು ಎಂಟ್ರಿ ಕೊಡುತ್ತಾರೆ. ಸ್ಪರ್ಧಿಗಳು ಸಹ ಇನ್ನೇನು ಎರಡು ವಾರ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಈಗ ಗ್ರ್ಯಾಂಡ್ ಫಿನಾಲೆಗೆ ಯಾವಾಗ ಎಂಬ ಕುತೂಹಲ ವೀಕ್ಷಕರಲ್ಲಿ ಮನೆ ಮಾಡಿದೆ.ನಾಲ್ಕು ಜನ ನಾಮಿನೇಟ್9ರ ಸ್ಪರ್ಧಿಗಳ ಪೈಕಿ ಮನೆಯಿಂದ ಹೊರಗೆ ಹೋಗಲು ಅಶ್ವಿನಿ ಗೌಡ, ಧ್ರುವಂತ್, ರಾಶಿಕಾ ಶೆಟ್ಟಿ ಮತ್ತು ಸ್ಪಂದನಾ ಸೋಮಣ್ಣ ನಾಮಿನೇಟ್ ಆಗಿದ್ದಾರೆ. ರಘು, ಕಾವ್ಯಾ ಮತ್ತು ರಕ್ಷಿತಾ ಸೇವ್ ಆಗಿದ್ದಾರೆ. ಇನ್ನು ಕ್ಯಾಪ್ಟನ್ ಆಗಿರುವ ಕಾರಣ ಗಿಲ್ಲಿ ನಟ ಸಹ ಸೇಫ್ ಆಗಿದ್ದಾರೆ. ಮನೆಯ ಸ್ಪರ್ಧಿಗಳು 90 ದಿನಗಳನ್ನು ಪೂರೈಸಿದ್ದಾರೆ.

ಮುಂದಿನ ವೀಕೆಂಡ್‌ ಜನವರಿ 3 ಮತ್ತು 4 ರಂದು ನಡೆಯಲಿದ್ದು, ಅಂದಿಗೆ ಸೀಸನ್ 12 ಶೋ 100 ದಿನಗಳನ್ನು ಪೂರೈಸುತ್ತದೆ. ಹಾಗಾಗಿ ಈ ವಾರ ಫಿನಾಲೆ ನಡೆಯಲು ಸಾಧ್ಯವಿಲ್ಲ ಎಂದು ವೀಕ್ಷಕರು ಲೆಕ್ಕಾಚಾರ ಹಾಕುತ್ತಿದ್ದಾರೆ. ಶೋ ಚೆನ್ನಾಗಿ ಪ್ರಸಾರವಾಗಿ ದಾಖಲೆಯ ಟಿವಿಆರ್ ಪಡೆಯುತ್ತಿರುವ ಕಾರಣ 100 ದಿನಗಳ ಬಳಿಕ ಮತ್ತೆ ಎರಡು ವಾರಗಳ ಕಾಲ ವಿಸ್ತರಣೆ ಮಾಡಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.

ಜನವರಿ 17 ಮತ್ತು 18ಎರಡು ವಾರ ವಿಸ್ತರಣೆಯಾದ್ರೆ ಜನವರಿ 17 ಮತ್ತು 18ರಂದು ಸೀಸನ್ 12ರ ಫಿನಾಲೆ ನಡೆಯುವ ಸಾಧ್ಯತೆಗಳಿವೆ. ಈ ವಾರದ ಅಂತ್ಯಕ್ಕೆ ಒಬ್ಬರನ್ನು ಮತ್ತು ಮುಂದಿನ ವಾರದ ಅಂತ್ಯಕ್ಕೆ ಇಬ್ಬರು ಮನೆಯಿಂದ ಹೊರಗೆ ಹೋದ್ರೆ ಮನೆಯಲ್ಲಿ 6 ಸ್ಪರ್ಧಿಗಳು ಉಳಿಯುತ್ತಾರೆ. ಒಂದು ವೇಳೆ ಮಿಡ್‌ನೈಟ್ ಎಲಿಮಿನೇಷನ್ ನಡೆದ್ರೆ ಫಿನಾಲೆ ವಾರಕ್ಕೆ ಬಿಗ್‌ಬಾಸ್ ಮನೆಯಲ್ಲಿ ಐವರು ಸ್ಪರ್ಧಿಗಳು ಉಳಿಯಲಿದ್ದಾರೆ ಎಂದು ವೀಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ.