Home Breaking Entertainment News Kannada Actress Swara Bhaskar wedding: ಅಂದು ಅಣ್ಣನಾದವನು, ಇಂದು ಗಂಡನಾದ !ಸಹೋದರ ಎಂದಿದ್ದ ಮುಸ್ಲಿಂ ಯುವಕನನ್ನೇ...

Actress Swara Bhaskar wedding: ಅಂದು ಅಣ್ಣನಾದವನು, ಇಂದು ಗಂಡನಾದ !ಸಹೋದರ ಎಂದಿದ್ದ ಮುಸ್ಲಿಂ ಯುವಕನನ್ನೇ ಮದುವೆಯಾಗಿ ಟ್ರೋಲ್ ಆದ ನಟಿ ಸ್ವರಾ ಭಾಸ್ಕರ್!

Hindu neighbor gifts plot of land

Hindu neighbour gifts land to Muslim journalist

ಹೋರಾಟ, ಹೇಳಿಕೆಗಳ ಮೂಲಕ ಸದಾ ಸುದ್ದಿಯಲ್ಲಿರುವ ಸೆಲೆಬ್ರಿಟಿಗಳ ಪೈಕಿ ಬಾಲಿವುಡ್ ನಟಿ ಸ್ವರಭಾಸ್ಕರ್ ಯಾವಾಗಲೂ ಮುಂಚೂಣಿಯಲ್ಲಿರುತ್ತಾರೆ. ಸೋಷಿಯಲ್ನಲ್ಲಿ ಸದಾ ವೈಲೆಂಟ್ ಆಗಿರುವ ಈ ಬಾಲಿವುಡ್ ಬೆಡಗಿ ಇದೀಗ ಸೈಲೆಂಟಾಗಿ ಮದುವೆಯಾಗಿ ಎಲ್ಲರಿಗೂ ಸರ್ಪೈಸ್ ನೀಡಿದ್ದಾರೆ. ಅದರಲ್ಲೂ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಮುಸ್ಲಿಂ ಯುವಕನನ್ನು ರಿಜಿಸ್ಟರ್ ಮದುವೆಯಾಗಿ ಅಚ್ಚರಿ ಉಂಟುಮಾಡಿದ್ದಾರೆ. ಮದುವೆಯ ಬಳಿಕ ಸ್ವರಾ ಅವರು ತಮ್ಮ ಪತಿ ಜೊತೆಗಿನ ಫೋಟೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದು, ಇದೀಗ ಆ ಫೋಟೋಗಳೆಲ್ಲ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿವೆ.

ಕಳೆದ ತಿಂಗಳು, ಅಂದ್ರೆ ಜನವರಿ 8 ರಂದು ವ್ಯಕ್ತಿಯೊಬ್ಬನ ಜೊತೆಗಿರುವ ಫೋಟೋವೊಂದನ್ನು ಸ್ವರಾ ಭಾಸ್ಕರ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅದರಲ್ಲಿ ಸ್ವರಾ ಅವರನ್ನು ವ್ಯಕ್ತಿಯೊಬ್ಬರು ತಬ್ಬಿಕೊಂಡಿದ್ದರು. ಆದರೆ ಅವರ ಮುಖ ಕಾಣುತ್ತಿರಲಿಲ್ಲಲ್ಲ. ಆ ಫೋಟೋ ಜೊತೆಗೆ ‘ಇದು ಪ್ರೀತಿ ಇರಬಹುದು’ ಎಂದು ಬರೆದುಕೊಂಡಿದ್ದರು. ಇದೀಗ ಆ ಪ್ರೀತಿ ನಿಜವಾಗಿದೆ. ಸ್ವರಾ ಭಾಸ್ಕರ್ ಜೊತೆಗಿದ್ದ ಆ ನಿಗೂಢ ವ್ಯಕ್ತಿ ಯಾರು ಎಂಬ ಕುತೂಹಲವೀಗ ಎಲ್ಲರಿಗೂ ತಣಿದಂತಾಗಿದೆ. ಆ ವ್ಯಕ್ತಿ ಬೇರೆ ಯಾರೂ ಅಲ್ಲ ರಾಜಕಾರಣಿ ಫಹಾದ್ ಅಹ್ಮದ್!

ಹೌದು, ಬಾಲಿವುಡ್ ನಟಿ ಸ್ವರಾ ಭಾಸ್ಕರ್ ನಿನ್ನೆ ತಾನೆ ರಾಜಕಾರಣಿ ಫಹಾದ್ ಅಹ್ಮದ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ದಿಢೀರ್ ಆಗಿ ಮದುವೆಯಾಗುವ ಮೂಲಕ ಸ್ವರಾ ಭಾಸ್ಕರ್, ಎಲ್ಲರಿಗೂ ಅಚ್ಚರಿ ಮೂಡಿಸವುದರೊಂದಿಗೆ ಮದುವೆ ಫೋಟೋಗಳನ್ನು ಶೇರ್ ಮಾಡಿ ತಮ್ಮ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಅಹ್ಮದ್ ಸಮಾಜವಾದಿ ಪಕ್ಷದ ಯುವ ಘಟಕ ರಾಜ್ಯಾಧ್ಯಕ್ಷರಾಗಿದ್ದು, ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಅಹ್ಮದ್ ಮತ್ತು ಸ್ವರಾ ಇಬ್ಬರೂ ರ‍್ಯಾಲಿಯಲ್ಲಿ ಭೇಟಿಯಾಗಿದ್ದರು. ಬಳಿಕ ಸ್ನೇಹಿತರಾಗಿ, ಪ್ರೇಮಿಗಳಾಗಿ ಇದೀಗ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ ಎನ್ನಲಾಗುತ್ತಿದೆ.

ಕಳೆದ 2019ರಿಂದ ಫಹಾದ್ ಮತ್ತು ಸ್ವರಾ ಡೇಟಿಂಗ್ ಮಾಡ್ತಿದ್ದರು. ಪೊಲಿಟಿಕಲ್‌ ರ‍್ಯಾಲಿವೊಂದರಲ್ಲಿ ಮೊದಲ ಬಾರಿಗೆ ಫಹಾದ್-‌ ಸ್ವರಾ ಭೇಟಿಯಾಗಿದ್ದರು. ಈ ಬಗ್ಗೆ ಎಲ್ಲೂ ಕೂಡ ರಿವೀಲ್ ಮಾಡಿರಲಿಲ್ಲ. ಆದರೀಗ ಹಲವು ವರ್ಷಗಳ ಪ್ರೀತಿಯನ್ನು ಮದುವೆಯಾಗುವ ಮೂಲಕ ಎಲ್ಲರಿಗೂ ತಿಳಿಸಿದ್ದಾರೆ. ಅಲ್ಲದೆ ಫಹಾದ್ ಅಹ್ಮದ್ ಅವರನ್ನ ಸ್ವರಾ ಭಾಸ್ಕರ್ ಭೇಟಿಯಾಗಿದ್ದು ಹೇಗೆ? ಇಬ್ಬರು ತಮ್ಮ ಮೊಟ್ಟಮೊದಲ ಸೆಲ್ಫಿಯನ್ನ ತೆಗೆದುಕೊಂಡಿದ್ದು ಎಲ್ಲಿ? ಇಬ್ಬರ ಮಧ್ಯೆ ಸ್ನೇಹ ಶುರುವಾಗಿದ್ದು ಹೇಗೆ? ಪ್ರೀತಿ ಚಿಗುರಿದ್ದು ಹೇಗೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ವಿಡಿಯೋ ಮೂಲಕ ಸ್ವರಾ ಮತ್ತು ಫಹಾದ್ ಅಹ್ಮದ್ ಉತ್ತರ ಕೊಟ್ಟಿದ್ದಾರೆ.

ಜನವರಿ 6, 2023 ರಂದು ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ತಮ್ಮ ವಿವಾಹವನ್ನು ನ್ಯಾಯಾಲಯದಲ್ಲಿ ನೋಂದಾಯಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಸ್ವರಾ ತಮ್ಮ ಪೋಷಕರೊಂದಿಗೆ ಹಾಜರಾಗಿ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆ ನೋಂದಾಯಿಸಿದ್ದಾರೆ. ಮದುವೆ ಫೋಟೋ ಜೊತೆಗೆ ಸ್ವರಾ, ‘ಕೆಲವೊಮ್ಮೆ ಹತ್ತಿರವೇ ಇರುವವರನ್ನು ದೂರೆಲ್ಲೋ ಹುಡುಕುತ್ತೇವೆ. ಆದರೆ ಫಹಾದ್​ ಅವರು ಹತ್ತಿರದಲ್ಲಿಯೇ ಇದ್ದಾಗ ಅವರೇ ನನ್ನ ಪ್ರೀತಿ ಎನ್ನುವುದು ತಿಳಿಯಲು ಹೆಚ್ಚುಹೊತ್ತು ಬೇಕಾಗಲಿಲ್ಲ’ ಎಂದು ಹೇಳಿದ್ದಾರೆ. ತಮ್ಮಿಬ್ಬರ ಸ್ನೇಹವು ಹಲವಾರು ಪ್ರತಿಭಟನೆಗಳಲ್ಲಿ ಭಾಗಿಯಾಗುವ ಮೂಲಕ ಆಗಿದೆ ಎಂದು ಫಹಾದ್​ ಕೂಡ ತಿಳಿಸಿದ್ದಾರೆ.

ತಮ್ಮ ಈ ಮದುವೆಯ ಸಿಹಿಸುದ್ದಿಯನ್ನು ಸ್ವರಾ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಸ್ವರಾ ಭಾಸ್ಕರ್ ಅವರ ಹಳೆಯ ಪೋಸ್ಟ್ ಒಂದು ವೈರಲ್ ಆಗಿದ್ದು ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ಸಹೋದರ ಎಂದು ಕರೆದವನ ಜೊತೆ ಸ್ವರಾ ಮದುವೆಯಾಗಿರುವುದರ ಬಗ್ಗೆ ನಟಿಗೆ ನೆಟ್ಟಿಗರು ಸೋಷಿಯಲ್‌ ಮೀಡಿಯಾದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಹೌದು, ಈ ಮೊದಲು ಪತಿ ಅಹ್ಮದ್ ಅವರನ್ನು ಸ್ವರಾ ಅಣ್ಣ ಎಂದು ಕರೆದಿದ್ದರು!. ಇದೀಗ ಅಣ್ಣ ಎಂದವನ ಜೊತೆಯೇ ಮದುವೆಯಾಗಿದ್ದಾರೆ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಮದುವೆಗೂ 10 ದಿನಗಳ ಹಿಂದೆ ಸ್ವರಾ ಭಾಸ್ಕರ್, ಅಹ್ಮದ್‌ಗೆ ಹುಟ್ಟುಹಬ್ಬಕ್ಕೆ ಟ್ವೀಟ್ ಮಾಡಿ ವಿಶ್ ಮಾಡಿದ್ದರು. ಅದರಲ್ಲಿ, ಹುಟ್ಟುಹಬ್ಬದ ಶುಭಾಶಯಗಳು ಫಹಾದ್ ಮಿಯಾನ್. ಸಹೋದರನ ವಿಶ್ವಾಸವು ಹಾಗೇ ಉಳಿಯಲಿ ಎಂದು ಹೇಳಿದ್ದರು. ಅಲ್ಲದೆ ನೀವು ಈಗ ಮದುವೆಯಾಗಿ, ಹುಟ್ಟುಹಬ್ಬದ ಶುಭಾಶಯಗಳು ಎಂದು ಹೇಳಿದ್ದರು. ಈ ಹಳೆಯ ಟ್ವೀಟ್ ಸದ್ಯ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಈ ನವ ದಂಪತಿಗಳಿಗೆ ತರಹೇವಾರಿ ಕಾಮೆಂಟ್ ಮಾಡುತ್ತಿರುವ ನೆಟ್ಟಿಗರು, ಸ್ವರಾ ಭಾಸ್ಕರ್ ಅವರ ಕಾಲೆಳೆಯುತ್ತಿದ್ದಾರೆ. ಸಹೋದರ ಮತ್ತು ಸಹೋದರಿ ಇಬ್ಬರಿಗೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದೀರಿ. ನಿಮಗೆ ಶುಭಾಶಯಗಳು ಎಂದು ಒಬ್ಬ ಕಾಮೆಂಟ್ ಮಾಡಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ ಕೇವಲ 13 ದಿನಗಳಲ್ಲಿ ಅಣ್ಣ ಪತಿಯಾಗಿದ್ದಾನೆ ಎಂದು ಹೇಳಿದ್ದಾರೆ. ಒಮ್ಮೆ ಅಣ್ಣ ಮತ್ತೊಮ್ಮೆ ಪ್ರೇಮಿ’ ಎಂದು ಮತ್ತೋರ್ವ ಹೇಳಿದ್ದಾರೆ. ಒಟ್ಟಿನಲ್ಲಿ ಬಗೆ ಬಗೆಯಾಗಿ ನೆಟ್ಟಿಗರು ಕಮೆಂಟಿಸುತ್ತಿದ್ದಾರೆ. ಸ್ವರಾ ಟ್ರೋಲ್ ಆಗುತ್ತಿರುವುದು ಇದೇ ಮೊದಲ್ಲ. ತನ್ನ ಹೇಳಿಕೆ ಹಾಗೂ ರಾಜಕೀಯ ದೃಷ್ಟಿಕೋನಗಳಿಗಾಗಿ ಸಿಕ್ಕಾಪಟ್ಟೆ ಟ್ರೋಲ್‌ ಆಗಿದ್ದರು. ಇದೀಗ ಮದುವೆ ವಿಚಾರಕ್ಕೂ ಟ್ರೋಲ್ ಆಗಿದ್ದಾರೆ.