Home Breaking Entertainment News Kannada ಪುಷ್ಪ2 ಸಿನಿಮಾ ಆಫರ್‌ ರಿಜೆಕ್ಟ್‌ ಮಾಡಿದ ಸೌತ್‌ ಬ್ಯೂಟಿ ಸಮಂತಾ ! ಕಾರಣ?

ಪುಷ್ಪ2 ಸಿನಿಮಾ ಆಫರ್‌ ರಿಜೆಕ್ಟ್‌ ಮಾಡಿದ ಸೌತ್‌ ಬ್ಯೂಟಿ ಸಮಂತಾ ! ಕಾರಣ?

Hindu neighbor gifts plot of land

Hindu neighbour gifts land to Muslim journalist

ಇತ್ತೀಚೆಗೆ ಭಾರಿ ಸದ್ದು ಮಾಡಿದ ‘ಹೂ ಅಂತೀಯಾ ಮಾವ.. ಊಹೂ ಅಂತೀಯಾ ಮಾವ..’ ಹಾಡು ನಮಗೆ ಗೊತ್ತೇ ಇದೆ. ಸದ್ಯ ನಟಿ ಸಮಂತಾ ಅವರು ಈ ಹಾಡಿನಲ್ಲಿ ಡ್ಯಾನ್ಸ್​ ಮಾಡಿದ ಶೈಲಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಷ್ಟೇ ಅಲ್ಲ ಸೋಶಿಯಲ್​ ಮೀಡಿಯಾದಲ್ಲಿ ಈ ಹಾಡು ಸಖತ್​ ಧೂಳೆಬ್ಬಿಸುತ್ತಿದೆ. ಪುಷ್ಪ’ ಸಿನಿಮಾದ ಗೆಲುವಿಗೆ ಕಾರಣವಾದ ಮುಖ್ಯ ಅಂಶಗಳಲ್ಲಿ ಈ ಗೀತೆ ಕೂಡ ಪ್ರಮುಖವಾದದ್ದು. ಇದರಲ್ಲಿ ಡ್ಯಾನ್ಸ್​ ಮಾಡಲು ಸಮಂತಾ ಪಡೆದುಕೊಂಡಿದ್ದು ಬರೋಬ್ಬರಿ ಕೆಲವು ಕೋಟಿಗಳಷ್ಟು ಎಂಬ ಸುದ್ದಿ ಹರಡಿತ್ತು.

ಇದೀಗ ಪುಷ್ಪ 2’ ಚಿತ್ರದಲ್ಲಿನ ಐಟಂ ಸಾಂಗ್​ನಲ್ಲಿ ನಟಿಸೋಕೆ ನಿರ್ದೇಶಕ ಸುಕುಮಾರ್ ಅವರು ಸಮಂತಾಗೆ ಆಫರ್ ನೀಡಿದ್ದರು. ಆದರೆ, ಈ ಆಫರ್​​ನ ಅವರು​ ರಿಜೆಕ್ಟ್ ಮಾಡಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ನಟಿ ಸಮಂತಾ ಅವರು ‘ಪುಷ್ಪ’ ಸಿನಿಮಾದ ‘ಹೂ ಅಂತೀಯಾ ಮಾವ..’ ಹಾಡಿಗೆ ಡ್ಯಾನ್ಸ್ ಮಾಡಿ ಸಖತ್ ಫೇಮಸ್ ಆದರು. ಈಗ ಪುಷ್ಪ 2’ ಸಿನಿಮಾಗೆ ಸೀಕ್ವೆಲ್ ರೆಡಿ ಆಗುತ್ತಿದೆ. ಈ ಚಿತ್ರದಲ್ಲೂ ವಿಶೇಷ ಸಾಂಗ್ ಇರಲಿದೆ.
ಆದ್ದರಿಂದ ‘ಪುಷ್ಪ 2’ ಚಿತ್ರದಲ್ಲಿನ ಐಟಂ ಸಾಂಗ್​ನಲ್ಲಿ ನಟಿಸೋಕೆ ನಿರ್ದೇಶಕ ಸುಕುಮಾರ್ ಅವರು ಸಮಂತಾಗೆ ಆಫರ್ ನೀಡಿದ್ದರು. ಆದರೆ, ಈ ಆಫರ್​​ನ ಅವರು​ ರಿಜೆಕ್ಟ್ ಮಾಡಿದ್ದಾರಂತೆ.

ಸದ್ಯ ‘ಪುಷ್ಪ’ ಸಿನಿಮಾ ಹಿಂದಿಯಲ್ಲೂ ಹಿಟ್ ಆಯಿತು. ಇದರಿಂದ ಸಮಂತಾ ಜನಪ್ರಿಯತೆ ಮತ್ತಷ್ಟು ಹೆಚ್ಚಾಯಿತು. ಈಗ ಅವರು ಟಾಲಿವುಡ್ ಆಫರ್​ಗಳನ್ನು ರಿಜೆಕ್ಟ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಸಮಂತಾ ಅವರು ಮುಂಬೈನಲ್ಲಿ ಹೊಸ ಫ್ಲ್ಯಾಟ್ ಖರೀದಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಹೀಗಿರುವಾಗಲೇ ಅವರು ತೆಲುಗು ಆಫರ್​ಗಳನ್ನು ರಿಜೆಕ್ಟ್ ಮಾಡುತ್ತಿದ್ದಾರೆ. ಇದರಿಂದ ಅವರು ಟಾಲಿವುಡ್ ತೊರೆಯುತ್ತಾರಾ ಎನ್ನುವ ಪ್ರಶ್ನೆಗಳು ಜನರ ತಲೆ ಕೆಡಿಸಿದೆ. ಈ ಬಗ್ಗೆ ಸಮಂತಾ ಸ್ವತಃ ಉತ್ತರ ನೀಡುವವರೆಗೆ ಅಭಿಮಾನಿಗಳು ಕಾದು ನೋಡಬೇಕಿದೆ.