Home Business SBI hikes RD rates : ‘SBI’ ಗ್ರಾಹಕರಿಗೆ ಸಿಹಿ ಸುದ್ದಿ ! ‘RD’ ಮೇಲಿನ...

SBI hikes RD rates : ‘SBI’ ಗ್ರಾಹಕರಿಗೆ ಸಿಹಿ ಸುದ್ದಿ ! ‘RD’ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದ ಬ್ಯಾಂಕ್!

state bank of india

Hindu neighbor gifts plot of land

Hindu neighbour gifts land to Muslim journalist

ಸುರಕ್ಷಿತ ಹೂಡಿಕೆಗಳ ಪೈಕಿ ನಿಶ್ಚಿತ ಠೇವಣಿ (fixed deposits- FD) ಹಾಗೂ ಆರ್‌ಡಿ (recurring deposits – RD) ಗಳು ಈಗಾಗಲೇ ಜನಪ್ರಿಯ ಸಾಧನಗಳಾಗಿವೆ. ಒಬ್ಬ ವ್ಯಕ್ತಿಯು ತನ್ನ ಬಳಿ ದೊಡ್ಡ ಮೊತ್ತದ ಹಣವನ್ನು ಹೊಂದಿದ್ದರೆ, ಆತನು ಅದನ್ನು ನಿಶ್ಚಿತ ಠೇವಣಿ (FD)ಗಳಲ್ಲಿ ನಿಗದಿತ ಅವಧಿಗೆ ಹೂಡಿಕೆ ಮಾಡಬಹುದು. ಅದೇ, ತಿಂಗಳು ತಿಂಗಳು ಇಂತಿಷ್ಟು ಹಣ ಹೂಡಿಕೆ ಮಾಡುವ ಯೋಜನೆ ಹೊಂದಿರುವವರಿಗೆ ಆರ್‌ಡಿ (RD) ಅತ್ಯತ್ತಮ ಆಯ್ಕೆಯಾಗಿದೆ.

ಹಲವು ಬ್ಯಾಂಕುಗಳು ಆರ್‌ಡಿಗಳ ಮೇಲೆ ಆಕರ್ಷಕ ಬಡ್ಡಿದರ ನೀಡುತ್ತವೆ. ಇದೀಗ ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗ್ರಾಹಕರಿಗೆ ಶಾಕ್ ನೀಡಿದ ತಕ್ಷಣ ಭರ್ಜರಿ ಸುದ್ದಿ ನೀಡಿದೆ. ಬ್ಯಾಂಕ್ ಮರುಕಳಿಸುವ ಠೇವಣಿ (RD- recurring deposit) ಮೇಲಿನ ಬಡ್ಡಿ ದರವನ್ನು ಹೆಚ್ಚಿಸಿದೆ. ಅಲ್ಲದೆ ಹೊಸ ದರಗಳನ್ನು ಬ್ಯಾಂಕ್ ಫೆ. 15ರಿಂದ ಜಾರಿಗೆ ತರಲಿದೆ.

ಸಾಮಾನ್ಯ ಗ್ರಾಹಕರಿಗೆ, ಎಸ್‌ಬಿಐನ ಆರ್‌ಡಿ ಮೇಲಿನ ಬಡ್ಡಿ ದರವು ಶೇ. 6.5 ರಿಂದ ಶೇ. 7 ರ ನಡುವೆ ಇರುತ್ತದೆ. ಹಿರಿಯ ನಾಗರಿಕರಿಗೆ, ಬಡ್ಡಿದರವು 50 ಬೇಸಿಸ್ ಪಾಯಿಂಟ್‌ಗಳು ಹೆಚ್ಚಾಗಿದೆ. ಒಂದು ವರ್ಷಕ್ಕಿಂತ ಹೆಚ್ಚು ಮತ್ತು ಎರಡು ವರ್ಷಕ್ಕಿಂತ ಕಡಿಮೆ ಅವಧಿಯ ಆರ್‌ಡಿ ಮೇಲಿನ ಬಡ್ಡಿ ದರವು ಶೇಕಡಾ 6.8 ಆಗಿದೆ. ಈ ಹಿಂದೆ, ಎಸ್‌ಬಿಐನಿಂದ ಅಲ್ಪಾವಧಿ ಸಾಲಗಳ ಬಡ್ಡಿ ದರವನ್ನು ಶೇ. 0.10 ರಷ್ಟು ಹೆಚ್ಚಿಸಲಾಗಿತ್ತು. ಆರ್‌ಬಿಐ ರೆಪೋ ದರವನ್ನು ಹೆಚ್ಚಿಸಿದ ನಂತರ ಬ್ಯಾಂಕ್ ಬಡ್ಡಿದರವನ್ನು ಹೆಚ್ಚಿಸಿದೆ.

ಎಸ್‌ಬಿಐನ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ಬ್ಯಾಂಕ್ ಒಂದು ದಿನಕ್ಕೆ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಬೇಸ್ಡ್ ಲೆಂಡಿಂಗ್ ದರವನ್ನು (ಎಂಸಿಎಲ್‌ಆರ್) ಶೇ. 0.10 ರಿಂದ ಶೇಕಡಾ 7.95 ರಷ್ಟು ಹೆಚ್ಚಿಸಿದೆ. ಗ್ರಾಹಕರು ಬ್ಯಾಂಕ್ ನಲ್ಲಿ ಕನಿಷ್ಠ 100 ರೂ.ಗಳೊಂದಿಗೆ ಆರ್‌ಡಿ ಪ್ರಾರಂಭಿಸಬಹುದು. ನೀವು 12 ತಿಂಗಳಿಂದ 10 ವರ್ಷಗಳವರೆಗೆ RD ಖಾತೆಯನ್ನು ತೆರೆಯಬಹುದು. ಎಫ್‌ಡಿಯಂತೆ, ಹಿರಿಯ ನಾಗರಿಕರು ಆರ್‌ಡಿ ಖಾತೆಯಲ್ಲಿ ಹೆಚ್ಚಿನ ಬಡ್ಡಿಯನ್ನು ಪಡೆಯಬಹುದು.