Home Business UPI Payment ನಿಯಮದಲ್ಲಿ ಮಹತ್ವದ ಬದಲಾವಣೆ ! ಇನ್ನು ಇಷ್ಟು ಹಣ ಮಾತ್ರ ವರ್ಗಾವಣೆ ಸಾಧ್ಯ...

UPI Payment ನಿಯಮದಲ್ಲಿ ಮಹತ್ವದ ಬದಲಾವಣೆ ! ಇನ್ನು ಇಷ್ಟು ಹಣ ಮಾತ್ರ ವರ್ಗಾವಣೆ ಸಾಧ್ಯ !!

UPI Payment Transaction Rules
Image credit: Psu connect

Hindu neighbor gifts plot of land

Hindu neighbour gifts land to Muslim journalist

UPI Payment Transaction Rules: ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಆನ್‌ಲೈನ್ ಪಾವತಿ ವಂಚನೆಯನ್ನು ತಡೆಯುವ ನಿಟ್ಟಿನಲ್ಲಿ ಕೆಲವು ನಿಯಮಗಳನ್ನು (UPI Payment Transaction Rules) ತರಲು ಸರ್ಕಾರ ನಿರ್ಧರಿಸಿದೆ. ಹೌದು, ವಂಚನೆ ಪ್ರಕರಣಗಳನ್ನು ತಡೆಯಲು ಸರ್ಕಾರವು ಕೆಲವು ನಿಯಮಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ, ಮೊದಲ ಬಾರಿಗೆ ಇಬ್ಬರು ವ್ಯಕ್ತಿಗಳ ನಡುವೆ ಆನ್‌ಲೈನ್ ವಹಿವಾಟು ನಡೆದರೆ, ಈ ಪ್ರಕ್ರಿಯೆ ಪೂರ್ಣಗೊಳ್ಳಲು 4 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಇಷ್ಟು ಮಾತ್ರವಲ್ಲದೆ ಕನಿಷ್ಠ ಸಮಯ ಮಿತಿಯನ್ನು ವಿಧಿಸುವ ಯೋಜನೆ ತರಲಿದೆ ಎನ್ನಲಾಗಿದೆ.

ಆನ್‌ಲೈನ್ ಪಾವತಿ ವಂಚನೆ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಅಂದರೆ ಯಾವುದೇ ಇಬ್ಬರು ವ್ಯಕ್ತಿಗಳ ನಡುವಿನ ಮೊದಲ ಬಾರಿಯ ವಹಿವಾಟಿನಲ್ಲಿ ಸರ್ಕಾರವು ಕೆಲವು ಬದಲಾವಣೆಗಳನ್ನು ಮಾಡಲಿದೆ ಎಂದು ಸರ್ಕಾರಿ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದರ ಅಡಿಯಲ್ಲಿ ನಿರ್ದಿಷ್ಟ ಮೊತ್ತಕ್ಕಿಂತ ಹೆಚ್ಚಿನ ವಹಿವಾಟುಗಳಿಗೆ ಕನಿಷ್ಠ ಕಾಲಮಿತಿ ವಿಧಿಸುವ ಯೋಜನೆ ಇದೆ. 2,000 ಕ್ಕಿಂತ ಹೆಚ್ಚಿನ ವಹಿವಾಟುಗಳು ನಡೆದಾಗ ಇಬ್ಬರು ಬಳಕೆದಾರರ ನಡುವಿನ ಮೊದಲ ವಹಿವಾಟು ಪೂರ್ಣಗೊಳ್ಳಲು 4-ಗಂಟೆಗಳ ಸಮಯಾವಕಾಶವಿರುತ್ತದೆ.

ಇದನ್ನು ಓದಿ: Girl Kidanap In Kerala: ಕೇರಳದಲ್ಲಿ ಕಿಡ್ನ್ಯಾಪ್‌ ಪ್ರಕರಣ; ಆರು ವರ್ಷದ ಬಾಲಕಿಯ ಅಪಹರಣ, ಅಣ್ಣ ಎಸ್ಕೇಪ್‌, ಲಕ್ಷಗಟ್ಟಲೆ ಹಣಕ್ಕೆ ಬೇಡಿಕೆ! ರಾಜ್ಯಾದ್ಯಂತ ಶೋಧ!!!

4 ಗಂಟೆಗಳ ಪ್ರಕ್ರಿಯೆಯನ್ನು ಸೇರಿಸುವುದರಿಂದ ಡಿಜಿಟಲ್ ಪಾವತಿಗಳಲ್ಲಿ ಕೆಲವು ಅಡ್ಡಿ ಉಂಟಾಗಬಹುದು ಎನ್ನುವ ನಿಟ್ಟಿನಲ್ಲಿ, ಈ ಸಂದರ್ಭದಲ್ಲಿ ಗ್ರಾಹಕರು ತ್ವರಿತ ಪಾವತಿ ಸೇವೆ (IMPS), ಏಕೀಕೃತ ಪಾವತಿ ಇಂಟರ್ಫೇಸ್ (UPI) ಮತ್ತು ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್ (RTGS) ಮೂಲಕ ಪಾವತಿಗಳನ್ನು ಮಾಡಲು ಈ ವಿಧಾನವನ್ನು ಅಳವಡಿಸಿಕೊಳ್ಳಬಹುದು.

ಅದಕ್ಕಾಗಿ ಬಳಕೆದಾರರು ಆನ್‌ಲೈನ್ ವಹಿವಾಟುಗಳಿಗಾಗಿ ಹೊಸ UPI ಖಾತೆಯನ್ನು ರಚಿಸಿದರೆ, ಅವರು 24 ಗಂಟೆಗಳಲ್ಲಿ ಗರಿಷ್ಠ 5,000 ರೂ.ವರೆಗೆ ಮೊದಲ ವಹಿವಾಟು ಮಾಡಬಹುದು. ಅದೇ ರೀತಿ, ಇದು ರಾಷ್ಟ್ರೀಯ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್‌ಫರ್ (NEFT)ಗೂ ಅನ್ವಯಿಸುತ್ತದೆ. ಮೊದಲ ಬಾರಿಗೆ ಖಾತೆಯನ್ನು ರಚಿಸಿದರೆ, 24 ಗಂಟೆಗಳಲ್ಲಿ 50 ಸಾವಿರ ರೂ. ವಹಿವಾಟು ನಡೆಸಬಹುದು. ಮುಖ್ಯವಾಗಿ ಇಂದು ಕೇಂದ್ರ ಹಣಕಾಸು ಸಚಿವಾಲಯದ ಸಭೆಯಲ್ಲಿ UPI ಮೂಲಕ ಮಾಡಲಾಗುವ ಮೊದಲ ವಹಿವಾಟಿಗೆ ಸಮಯದ ಮಿತಿ ವಿಧಿಸುವ ಬಗ್ಗೆ ನಿರ್ಣಯ ಕೈಗೊಳ್ಳಬಹುದು ಎನ್ನಲಾಗಿದೆ.

ಇದನ್ನೂ ಓದಿ: ಮಹಾತ್ಮ ಗಾಂಧಿ, ಪ್ರಧಾನಿ ಮೋದಿ ಕುರಿತು ಅಚ್ಚರಿ ಸ್ಟೇಟ್ಮೆಂಟ್ ಕೊಟ್ಟ ಉಪರಾಷ್ಟ್ರಪತಿ – ಹೀಗೇಕಂದ್ರು ಧನ್ ಕರ್?