Home Business Fixed deposit: ಫಿಕ್ಸೆಡ್ ಡೆಪಾಸಿಟ್‌ ಮಾಡಲು ಬೆಸ್ಟ್ ಬ್ಯಾಂಕ್ ಯಾವುದು ?! ಆರ್‌ಬಿಐ ನೀಡಿದೆ ನೋಡಿ...

Fixed deposit: ಫಿಕ್ಸೆಡ್ ಡೆಪಾಸಿಟ್‌ ಮಾಡಲು ಬೆಸ್ಟ್ ಬ್ಯಾಂಕ್ ಯಾವುದು ?! ಆರ್‌ಬಿಐ ನೀಡಿದೆ ನೋಡಿ ಹೊಸ ಲಿಸ್ಟ್

Fixed deposit

Hindu neighbor gifts plot of land

Hindu neighbour gifts land to Muslim journalist

Fixed deposit: ಹಣದ ಹೂಡಿಕೆ ಎಂದಾಗ ಎಲ್ಲರೂ ಫಿಕ್ಸಿಡ್ ಡೆಪಾಸಿಟ್ ನ್ನು (Fixed deposit) ಆಯ್ಕೆ ಮಾಡುತ್ತಾರೆ. ಆದರೆ ಠೇವಣಿಗಳನು ಹೇಗೆ ಎಲ್ಲಿ ಇಡಬೇಕು , ಎಲ್ಲಿ ಹೆಚ್ಚು ಲಾಭ ದೊರೆಯುತ್ತದೆ ಎನ್ನುವುದು ತಿಳಿದಿಲ್ಲ.
ಇದೀಗ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಣಕಾಸು ವರ್ಷದ 2022 ರ ಮಾಹಿತಿಯ ಪ್ರಕಾರ, ಒಟ್ಟು ಠೇವಣಿಗಳ ಪೈಕಿ ಶೇಕಡ 76 ರಷ್ಟು ಠೇವಣಿಯು ಸಾರ್ವಜನಿಕ ವಲಯದ 7 ಬ್ಯಾಂಕುಗಳು ಮತ್ತು ಖಾಸಗಿ ವಲಯದ 3 ಬ್ಯಾಂಕುಗಳಲ್ಲಿವೆ. ಅದಲ್ಲದೆ ಸಣ್ಣ ಖಾಸಗಿ ಬ್ಯಾಂಕ್‌ಗಳು ಮತ್ತು ಸಣ್ಣ ಹಣಕಾಸು ಬ್ಯಾಂಕ್‌ಗಳು ಹೊಸ ಠೇವಣಿಗಳನ್ನು ಪಡೆಯಲು ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತಿವೆ. ಆದರೂ, ಹೂಡಿಕೆದಾರರು ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮತ್ತು ಖಾಸಗಿ ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ.

ಮುಖ್ಯವಾಗಿ ಫಿಕ್ಸೆಡ್ ಡೆಪಾಸಿಟ್ ಅಥವಾ ಸ್ಥಿರ ಠೇವಣಿ ವಿಚಾರದಲ್ಲಿ ಹೂಡಿಕೆದಾರರು ಮೊದಲ ಆಯ್ಕೆ ಸ್ಟೇಟ್‌ ಬ್ಯಾಂಕ್ ಆಫ್‌ ಇಂಡಿಯಾ (ಎಸ್‌ಬಿಐ) ಆಗಿದೆ . ಬ್ಯಾಂಕಿಂಗ್ ವಲಯದ ಒಟ್ಟು ಸ್ಥಿರ ಠೇವಣಿ ಹೂಡಿಕೆಯ ಶೇಕಡ 23 ಪಾಲು ಎಸ್‌ಬಿಐನಲ್ಲಿ ಹೂಡಿಕೆಯಾಗಿದೆ. ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿವ ಸ್ಥಿರ ಠೇವಣಿ ಹೂಡಿಕೆ ಮಾರುಕಟ್ಟೆಯಲ್ಲಿ ಎಸ್‌ಬಿಐ ಪಾಲು ಶೇಕಡ 36 ಎಂದು ವರದಿ ಹೇಳಿದೆ.

ಇನ್ನು ಕೆನರಾ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ. ಈ ಎರಡೂ ಬ್ಯಾಂಕುಗಳು ಒಟ್ಟು ಬ್ಯಾಂಕುಗಳ ಸ್ಥಿರ ಠೇವಣಿ ಮಾರುಕಟ್ಟೆಯಲ್ಲಿ ಶೇಕಡ 7 ಪಾಲು ಹೊಂದಿವೆ. ಸಾರ್ವಜನಿಕ ವಲಯದ ಬ್ಯಾಂಕುಗಳ ಮಾರುಕಟ್ಟೆಯಲ್ಲಿ ಶೇಕಡ 12 ಮತ್ತು ಶೇಕಡ 11 ಪಾಲು ಹೊಂದಿವೆ.

ಬ್ಯಾಂಕ್ ಆಫ್ ಬರೋಡಾ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗಳು ಒಟ್ಟು ಬ್ಯಾಂಕ್ ಠೇವಣಿಗಳಲ್ಲಿ ತಲಾ 6 ಪ್ರತಿಶತವನ್ನು ಹೊಂದಿವೆ. ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಪೈಕಿ ಬ್ಯಾಂಕ್ ಆಫ್ ಬರೋಡಾ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕುಗಳು ಅವಧಿಯ ಠೇವಣಿಗಳಲ್ಲಿ 10 ಪ್ರತಿಶತದಷ್ಟು ಮಾರುಕಟ್ಟೆ ಪಾಲನ್ನು ಹೊಂದಿವೆ.

ಖಾಸಗಿ ಬ್ಯಾಂಕುಗಳ ಪೈಕಿ ಎಚ್‌ಡಿಎಫ್‌ಸಿಯಲ್ಲಿ ಸ್ಥಿರ ಠೇವಣಿಗೆ ಎರಡನೇ ಆಯ್ಕೆ ಎಚ್‌ಡಿಎಫ್‌ಸಿ ಆಗಿದ್ದು ಶೇಕಡ 8 ಮಾರುಕಟ್ಟೆ ಪಾಲು ಹೊಂದಿದೆ. ಇದೇ ರೀತಿ ಖಾಸಗಿ ಬ್ಯಾಂಕುಗಳ ವಿಚಾರಕ್ಕೆ ಬಂದರೆ ಶೇಕಡ 28 ಮಾರುಕಟ್ಟೆ ಪಾಲು ಎಚ್‌ಡಿಎಫ್‌ಸಿ ಬಳಿ ಇದೆ.

ಖಾಸಗಿ ಬ್ಯಾಂಕ್‌ಗಳಲ್ಲಿ ಐಸಿಐಸಿಐ ಬ್ಯಾಂಕ್ ನಲ್ಲಿ ಒಟ್ಟು ಬ್ಯಾಂಕ್ ಠೇವಣಿಗಳಲ್ಲಿ 6 ಪ್ರತಿಶತ ಮತ್ತು ಅವಧಿಯ ಠೇವಣಿಗಳಲ್ಲಿ ಖಾಸಗಿ ಬ್ಯಾಂಕ್‌ಗಳಲ್ಲಿ 19 ಪ್ರತಿಶತ ಮಾರುಕಟ್ಟೆ ಪಾಲನ್ನು ಹೊಂದಿದೆ.

ಹೂಡಿಕೆದಾರರು ಎಫ್‌ಡಿಯಲ್ಲಿ ಹೂಡಿಕೆ ಮಾಡಲು ಆದ್ಯತೆ ನೀಡುವ ಬ್ಯಾಂಕ್‌ಗಳ ಮೊದಲ ಹತ್ತು ಬ್ಯಾಂಕುಗಳ ಪಟ್ಟಿಯಲ್ಲಿ ಆಕ್ಸಿಸ್ ಬ್ಯಾಂಕ್ ಮೂರನೇ ಖಾಸಗಿ ಬ್ಯಾಂಕ್. ಇದು ಒಟ್ಟು ಬ್ಯಾಂಕ್ ಠೇವಣಿಗಳಲ್ಲಿ 5 ಪ್ರತಿಶತ ಮತ್ತು ಅವಧಿಯ ಠೇವಣಿಗಳಲ್ಲಿ ಖಾಸಗಿ ಬ್ಯಾಂಕ್‌ಗಳಲ್ಲಿ 15 ಪ್ರತಿಶತದಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ.

ಈ ಪಟ್ಟಿಯಲ್ಲಿ ಕೊನೆಯ ಎರಡು ಬ್ಯಾಂಕ್‌ಗಳೆಂದರೆ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇಂಡಿಯನ್ ಬ್ಯಾಂಕ್. ಈ ಎರಡೂ ಬ್ಯಾಂಕುಗಳು ಒಟ್ಟು ಬ್ಯಾಂಕ್ ಠೇವಣಿಗಳಲ್ಲಿ 4 ಪ್ರತಿಶತ ಪಾಲನ್ನು ಹೊಂದಿವೆ. ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ, ಅವಧಿಯ ಠೇವಣಿ ಮಾರುಕಟ್ಟೆಯಲ್ಲಿ 6 ಪ್ರತಿಶತ ಪಾಲನ್ನು ಹೊಂದಿವೆ.

ಇದನ್ನೂ ಓದಿ: Gold Loan Limit: ಈ ಬ್ಯಾಂಕುಗಳಲ್ಲಿ ‘ಗೋಲ್ಡ್ ಲೋನ್’ ಅನ್ನು 2 ಪಟ್ಟು ಹೆಚ್ಚಿಸಿದ RBI , ಚಿನ್ನ ಇಟ್ಟು ಹಣ ಪಡೆಯಲು ಕ್ಯೂ ನಿಂತ ಜನ !!