Home Business Airtel- Vodafone : ಏರ್ ಟೆಲ್ ಗೆ ಶಾಕ್ ನೀಡಿದ ವೋಡಾಫೋನ್ | ಅತೀ ಕಡಿಮೆ...

Airtel- Vodafone : ಏರ್ ಟೆಲ್ ಗೆ ಶಾಕ್ ನೀಡಿದ ವೋಡಾಫೋನ್ | ಅತೀ ಕಡಿಮೆ ಬೆಲೆಯ ರೀಚಾರ್ಜ್ ಪ್ಲ್ಯಾನ್ ಬಿಡುಗಡೆ!!!

Hindu neighbor gifts plot of land

Hindu neighbour gifts land to Muslim journalist

ದೇಶದ ಟೆಲಿಕಾಂ ವಲಯದಲ್ಲಿ ಜಿಯೋ , ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಸಂಸ್ಥೆಗಳು ತಮ್ಮ ಚಂದಾದಾರಿಗೆ ಆಕರ್ಷಕ ಯೋಜನೆಗಳನ್ನು ಪರಿಚಯಿಸುತ್ತಾ ಮುನ್ನಡೆದಿವೆ. ಇದೀಗ ಪಟ್ಟಕ್ಕೇರಲು ವೊಡಾಫೋನ್ ಐಡಿಯಾ ಹರಸಾಹಸ ಪಡುತ್ತಿದೆ . ಬಜೆಟ್ ಪ್ರಿಯರಿಗೆಂದೇ ಈ ಟೆಲಿಕಾಂ ಕಂಪನಿಗಳು ಕಡಿಮೆ ಬೆಲೆಗೆ ಆಕರ್ಷಕವಾದ ಯೋಜನೆಗಳನ್ನು ಕೂಡ ನೀಡಿದೆ. ಹೌದು ವೊಡಾಫೋನ್ ಐಡಿಯಾ ತನ್ನ ಗ್ರಾಹಕರಿಗೆ ಕೇವಲ 99 ರೂ. ಬೆಲೆಯಲ್ಲಿ ಪ್ರವೇಶ ಮಟ್ಟದ ಪ್ರೀಪೇಡ್ ರೀಚಾರ್ಜ್ ಒಂದನ್ನು ಪರಿಚಯಿಸಿದೆ.

ಪ್ರಸ್ತುತ 99 ರೂ. ಬೆಲೆಯಲ್ಲಿ 28 ದಿನಗಳ ಮಾನ್ಯತೆಯೊಂದಿಗೆ ಅನಿಯಮಿತ ಕರೆ ಮತ್ತು 200 ಎಂಬಿ ಡೇಟಾ ಹೊಂದಿರುವ ರೀಚಾರ್ಜ್ ಯೋಜನೆಯನ್ನು ವೊಡಾಫೋನ್ ಐಡಿಯಾ ಕಂಪೆನಿ ಬಿಡುಗಡೆಗೊಳಿಸಿದ್ದು, ಈ ಮೂಲಕ ದೇಶದಲ್ಲೇ ಅತ್ಯಂತ ಕಡಿಮೆ ಬೆಲೆಯಲ್ಲಿ ಮಿನಿಮಮ್ ರೀಚಾರ್ಜ್ ಪ್ಲ್ಯಾನ್ ಒದಗಿಸುತ್ತಿರುವ ಟೆಲಿಕಾಂ ಕಂಪೆನಿಯಾಗಿ ಹೊರಹೊಮ್ಮಿದೆ.

ವೊಡಾಫೋನ್ ಐಡಿಯಾದ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ಕ್ಲಸ್ಟರ್ ಬಿಸಿನೆಸ್ ಹೆಡ್ ಸಿದ್ಧಾರ್ಥ ಜೈನ್ ಅವರು ಈ ಬಗ್ಗೆ ಮಾಹಿತಿ ನೀಡಿ, ‘ಗ್ರಾಹಕರ ಕೈಗೆಟುಕುವಿಕೆಯನ್ನು ಪೂರೈಸುವ ಮೂಲಕ, ಅತ್ಯಂತ ಆಕರ್ಷಕ ಬೆಲೆಯಲ್ಲಿ ಅತ್ಯುತ್ತಮವಾದ ಮೊಬೈಲ್ ಸೇವೆಗಳನ್ನು ನೀಡಲು ವಿ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಮುಂದುವರೆಸಿದೆ. ಮೊಬೈಲ್ ಬಳಕೆದಾರರು ಮತ್ತು ಬಳಕೆದಾರರಲ್ಲದವರನ್ನು ಕೇವಲ ₹99ಕ್ಕೆ ಗರಿಷ್ಠ ವೇಗದ Vi ನೆಟ್‌ವರ್ಕ್‌ಗೆ ಸೇರಲು ನಾವು ಆಹ್ವಾನಿಸುತ್ತೇವೆ. ಡಿಜಿಟಲ್ ಯುಗದಲ್ಲಿ ಮೊಬೈಲ್ ಸಂಪರ್ಕದ ಗರಿಷ್ಠ ಪ್ರಯೋಜನಗಳನ್ನು ಆನಂದಿಸುವುದನ್ನು ಮುಂದುವರಿಸಿ. ಜೊತೆಗೆ ಹೆಚ್ಚಿನ ಬಳಕೆದಾರರು ಡಿಜಿಟಲ್ ಜಗತ್ತಿಗೆ ಸುಲಭವಾಗಿ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ’ ಎಂದು ತಿಳಿಸಿದ್ದಾರೆ .

ಏರ್‌ಟೆಲ್ ಗ್ರಾಹಕರು ತಮ್ಮ ಸಿಮ್ ಸಕ್ರೀಯವಾಗಿ ಇಟ್ಟುಕೊಳ್ಳಲು ಈ ಮೊದಲು ಇದ್ದ 99 ರೂ.ಬೆಲೆಯ ಕನಿಷ್ಠ ರೀಚಾರ್ಜ್ ಪ್ಲ್ಯಾನ್ 28 ದಿನಗಳವರೆಗೆ ವ್ಯಾಲಿಡಿಟಿಯಲ್ಲಿ 200 MBಯ ಅತ್ಯಂತ ಸೀಮಿತ ಡೇಟಾವನ್ನು ಒದಗಿಸುತ್ತಿತ್ತು. ಆದರೆ, ಈ ಯೋಜನೆಯು ಇನ್ಮುಂದೆ ಬಳಕೆದಾರರಿಗೆ ಲಭ್ಯವಿರುವುದಿಲ್ಲ. ಇದಕ್ಕೆ ವಿರುದ್ಧವಾಗಿ ಈಗ ಏರ್‌ಟೆಲ್ ಪರಿಚಯಿಸಿರುವ ಹೊಸ 155 ರೂ. ಬೆಲೆಯ ಕನಿಷ್ಠ ರೀಚಾರ್ಜ್ ಪ್ಲ್ಯಾನ್ 28 ದಿನಗಳವರೆಗೆ ಅನಿಯಮಿತ ಧ್ವನಿ, 1GB ಡೇಟಾ ಮತ್ತು 300 ಎಸ್ಸೆಮ್ಮೆಸ್‌ಗಳನ್ನು ನೀಡುತ್ತದೆ. 99 ರೂ.ಗೆ ಹೋಲಿಸಿದರೆ ಇಲ್ಲಿ ಕನಿಷ್ಠ ರೀಚಾರ್ಜ್ ಮೌಲ್ಯದಲ್ಲಿ ಶೇಕಡಾ 57ರಷ್ಟು ಏರಿಕೆಯಾಗಿದೆ. ಏರ್‌ಟೆಲ್ ಗೆ ಹೋಲಿಸಿದರೆ ಸದ್ಯ 99 ರೂ. ಬೆಲೆಯಲ್ಲಿ 28 ದಿನಗಳ ಮಾನ್ಯತೆಯೊಂದಿಗೆ ಅನಿಯಮಿತ ಕರೆ ಮತ್ತು 200 ಎಂಬಿ ಡೇಟಾ ಹೊಂದಿರುವ ವೊಡಾಫೋನ್ ಐಡಿಯಾ ಕಂಪೆನಿ ಹೊಂದಿರುವ ರೀಚಾರ್ಜ್ ಯೋಜನೆ ಬೆಸ್ಟ್ ಎನ್ನಬಹುದು.

ಹೌದು ಇತ್ತೀಚಿಗಷ್ಟೇ ಏರ್‌ಟೆಲ್ ತನ್ನ ಗ್ರಾಹಕರಿಗೆ 99 ರೂ. ಬೆಲೆಯ ಕನಿಷ್ಠ ರಿಚಾರ್ಜ್ ಯೋಜನೆಯನ್ನು ರದ್ದುಪಡಿಸಿತ್ತು. ಆದರೆ ವೊಡಾಫೋನ್ ಐಡಿಯಾ ಇದೇ ರೀತಿಯ ಯೋಜನೆಯನ್ನು ಹೊಸದಾಗಿ ಪರಿಚಯಿಸುವ ಮೂಲಕ ಹೊಸ ಗ್ರಾಹಕರನ್ನು ಸೆಳೆಯಲು ಮುಂದಾಗಿದೆ. ಸದ್ಯ ವೊಡಾಫೋನ್ ಐಡಿಯಾ ಗ್ರಾಹಕರಿಗೆ ಇದೊಂದು ಖುಷಿಯ ವಿಚಾರವಾಗಿದೆ.