Sullia: ಸುಳ್ಯ: 3 ವರ್ಷಗಳಿಂದ ತಲೆಮರೆಸಿಕೊಂಡಿದ್ದ ದರೋಡೆ ಪ್ರಕರಣದ ಆರೋಪಿಯ ಬಂಧನ!

Sullia: 2022 ಮಾರ್ಚ್ ನಲ್ಲಿ ಸುಳ್ಯ (Sullia) ಪೊಲೀಸ್ ಠಾಣಾ ವ್ಯಾಪ್ತಿಯ ಸಂಪಾಜೆ ಗ್ರಾಮದ ಚೆಟ್ಟೆಕಲ್ಲು ಎಂಬಲ್ಲಿನ ಮನೆಯೊಂದರಲ್ಲಿ ನಡೆದ ರೂ 1,50,000/-ನಗದು ಹಾಗೂ 01 ಮೊಬೈಲ್ ಫೋನ್ ದರೋಡೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Bantwala: ಬಂಟ್ವಾಳ: ಕರ್ತವ್ಯ ನಿರತ ಪೊಲೀಸ್‌ ಸಿಬ್ಬಂದಿ ಮೇಲೆ ಹಲ್ಲೆ; ಆರೋಪಿಯ ಬಂಧನ

Bantwala: ಫರಂಗಿಪೇಟೆಯ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮಾಡುತ್ತಿದ್ದ ವ್ಯಕ್ತಿಯನ್ನು ಪ್ರಶ್ನಿಸಿದ ರಾತ್ರಿ ಪಾಳಿಯ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಗೆ ಹಲ್ಲೆ ನಡೆಸಿದ ವ್ಯಕ್ತಿಯೋರ್ವನನ್ನು ಬಂಟ್ವಾಳ (Bantwala) ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

Belthangady: ಬೆಳ್ತಂಗಡಿ: ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ!

Belthangady: ಯುವಕನೋರ್ವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಲ್ಕೆರಿ ಯಲ್ಲಿ ನಡೆದಿದೆ. ಮೃತ ಯುವಕನನ್ನು ಸುಲ್ಕೆರಿ ಗ್ರಾಮದ ಮುಡಿಪಿರೆ ನಿವಾಸಿ ಕಿಶೋರ್ (25) ಎಂದು ಗುರುತಿಸಲಾಗಿದೆ.

Mangaluru: ಮಂಗಳೂರು ಮಗು ಮಾರಾಟ ಪ್ರಕರಣ: ಮೂವರಿಗೆ 10 ವರ್ಷ ಜೈಲು

Mangaluru: ಮಗು ಮಾರಾಟ (ಮಾನವ ಕಳ್ಳಸಾಗಣೆ) ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ ವಿ.ಎನ್. ಅವರು ಮೂವರು ಆರೋಪಿಗಳಿಗೆ 10 ವರ್ಷಗಳ ಕಠಿಣ ಸಜೆ ಮತ್ತು ತಲಾ 5,000 ರೂ. ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದ್ದಾರೆ.

Bengaluru: ನಮ್ಮ ಮೆಟ್ರೋ ಗುಡ್ ನ್ಯೂಸ್ : ಹಳದಿ ಮಾರ್ಗಕ್ಕೆ ಆ.15 ರೊಳಗೆ ಚಾಲನೆ

Bengaluru: ಸಿಲಿಕಾನ್ ಸಿಟಿ ಮಂದಿಗೆ ನಮ್ಮ ಮೆಟ್ರೋ ಗುಡ್ ನ್ಯೂಸ್ ಕೊಟ್ಟಿದೆ. ಆಗಸ್ಟ್ 15ರ ಒಳಗೆ ಹಳದಿ ಮಾರ್ಗಕ್ಕೆ (Yellow Line) ಚಾಲನೆ ನೀಡಲಾಗುವುದು ಎಂದು ಬಿಎಂಆರ್‌ಸಿಎಲ್ (BMRCL) ಎಂಡಿ ಮಹೇಶ್ವರ್ ರಾವ್ ತಿಳಿಸಿದ್ದಾರೆ.

Crime: ಪತಿಯಿಂದಲೇ ಮಹಿಳಾ ಪುರಸಭೆ ಕೌನ್ಸಿಲರ್‌’ನ ಹತ್ಯೆ!

Crime: ಪುರಸಭೆಯ ಮಹಿಳಾ ಕೌನ್ಸಿಲರ್‌ ಒಬ್ಬರನ್ನು ಅವರ ಪತಿಯೇ ಬರ್ಬರವಾಗಿ ಕೊಂದಿರುವ ಘಟನೆ ಚೆನ್ನೈನ ಪಶ್ಚಿಮ ಉಪನಗರದಲ್ಲಿರುವ ತಿರುನಿಂದ್ರವೂರ್’ನಲ್ಲಿ ನಡೆದಿದೆ.

Puttur: ನಾಪತ್ತೆಯಾಗಿದ್ದ ಪುತ್ತೂರಿನ ವಿದ್ಯಾರ್ಥಿನಿ ಬೆಂಗಳೂರಿನಲ್ಲಿ ಪತ್ತೆ!

Puttur: ಪುತ್ತೂರು (Puttur) ಮುಂಡಾಜೆ ನಿವಾಸಿ ಗಿರಿಜಾ ದೇವಿ, ಮಂಟು ಪಾಸ್ನಾನ ದಂಪತಿ ಪುತ್ರಿ ರೂಪ (19ವ) ಜು.1ರಂದು ನಾಪತ್ತೆಯಾಗಿದ್ದರು. ಇದೀಗ ಅವರು ಬೆಂಗಳೂರಿನಲ್ಲಿ ಪತ್ತೆಯಾಗಿರುವ ಕುರಿತು ತಿಳಿದು ಬಂದಿದೆ.