ನೇತ್ರಾವದಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ | ಗುರುತು ಪತ್ತೆಗೆ ಪೊಲೀಸರ ಮನವಿ

ಮಂಗಳೂರು : ಬಂಟ್ವಾಳ ತಾಲೂಕಿನ ಸುಜೀರ್ ಎಂಬಲ್ಲಿನ ನೇತ್ರಾವತಿ ನದಿಯಲ್ಲಿ ಸುಮಾರು 45-50 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹ ಪತ್ತೆಯಾಗಿದ್ದು ಮೃತದೇಹವನ್ನು ಬಂಟ್ವಾಳ ತಾಲೂಕು ಆಸ್ಪತ್ರೆಯ ಶೈತಲೀಕರಣ ಕೇಂದ್ರದಲ್ಲಿ ಇಡಲಾಗಿದೆ. ನೇತ್ರಾವತಿ ನದಿಯಲ್ಲಿ ತೇಲಾಡುತ್ತಿದ್ದ ಮೃತದೇಹದ ಬಗ್ಗೆ

ದ.ಕ.ಜಿಲ್ಲೆಯ ಸರಕಾರಿ ಶಾಲೆಗಳಲ್ಲಿ 608 ಶಿಕ್ಷಕರ ಹುದ್ದೆಗಳು ಖಾಲಿ

ದ.ಕ.ಜಿಲ್ಲೆಯಲ್ಲಿ ಕಿರಿಯಮತ್ತು ಹಿರಿಯ ಪ್ರಾಥಮಿಕ ಶಾಲೆ,ಪ್ರೌಢಶಾಲೆಗಳಲ್ಲಿ ಸುಮಾರು 608 ಶಿಕ್ಷಕರ ಹುದ್ದೆಗಳು ಕಳೆದ ಹಲವು ವರ್ಷಗಳಿಂದ ಖಾಲಿ ಬಿದ್ದಿವೆ. ಈ ಕುರಿತು ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಆಂದೋಲನವನ್ನು ಮುನ್ನಡೆಸುತ್ತಿರುವ ಪ್ರಕಾಶ್ ಅಂಚನ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ

ಮುಖ್ಯಮಂತ್ರಿ ಅಮೃತ ಜೀವನ ಯೋಜನೆಯಡಿ ಹಸು ಘಟಕಕ್ಕೆ ಅರ್ಜಿ ಆಹ್ವಾನ

ಪ್ರಸಕ್ತ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಮುಖ್ಯಮಂತ್ರಿಗಳ 'ಅಮೃತ ಜೀವನ ಯೊಜನೆ'ಯಡಿ ಪ.ಜಾತಿ ಮತ್ತು ಪ.ಪಂಗಡ ಫಲಾನುಭವಿಗಳಿಗೆ ಶೇ.33.33 ಹಾಗೂ ಇತರೆ ಫಲಾನುಭವಿಗಳಿಗೆ ಶೇ.25ರಷ್ಟು ಸಹಾಯಧನದಡಿ, ಒಂದು ಮಿಶ್ರತಳಿ ಹಾಲು ಕರೆಯುವ ಹಸು ಘಟಕ ಆರಂಭಿಸಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ

ಕಡಬ : ತಾಲೂಕು ಕೇಂದ್ರದಲ್ಲಿ ನ್ಯಾಯಾಲಯ ಸ್ಥಾಪಿಸುವಂತೆ ಮನವಿ

ಕಡಬ : ತಾಲೂಕು ಕೇಂದ್ರವಾಗಿರುವ ಕಡಬದಲ್ಲಿ ಈಗಾಗಲೇ ಸರಕಾರಿ ಕಛೇರಿಗಳು ಅನುಷ್ಠಾನವಾಗುತಿದ್ದು ಶೀಘ್ರವಾಗಿ ನ್ಯಾಯಾಲಯ ಸ್ಥಾಪನೆಯಾಗಬೇಕು ಎಂದು ಕಡಬದ ವಕೀಲರ ನಿಯೋಗವೊಂದು ದ.ಕ ಜಿಲ್ಲಾ ಮುಖ್ಯ ನ್ಯಾಯಾಧೀಶರಿಗೆ ಮನವಿ ಸಲ್ಲಿಸಿದೆ. ಕಡಬ ತಾಲೂಕು ಕೇಂದ್ರವಾಗಿ ಎರಡು ವರ್ಷ ಕಳೆದಿದೆ, ಇಷ್ಟಾದರೂ

ಅ.3 ರಂದು ಕ್ಯಾಂಪ್ಕೋ ಉದ್ಯೋಗ ಲಿಖಿತ ಪರೀಕ್ಷೆ

ಕ್ಯಾಂಪ್ಕೋ ಸಂಸ್ಥೆಯು 03/03/2021 ಮತ್ತು 17/04/2021 ರಂದು ಪ್ರಕಟಿಸಿದ ಅಧಿಸೂಚನೆಯ ಪ್ರಕಾರ, ಜೂನಿಯರ್ ಸಹಾಯಕ ಕಾರ್ಯನಿರ್ವಾಹಕ (ಎ / ಎಂ), ಜೂನಿಯರ್ ಗ್ರೇಡರ್, ಕಾರ್ಯನಿರ್ವಾಹಕ ಅಧಿಕಾರಿ ಎಚ್‌ಆರ್‌ಡಿ, ಕಾನೂನು ಅಧಿಕಾರಿ -ಐವಿ, ಸಹಾಯಕ ಮೆಕ್ಯಾನಿಕಲ್ ಎಂಜಿನಿಯರ್ ಮತ್ತು ಜೂನಿಯರ್

ಪುತ್ತೂರು : ರೆಸ್ಟೋರೆಂಟ್‌ನಲ್ಲಿ ಯುವತಿ ಹಾಗೂ ಇಬ್ಬರು ಯುವಕರಿದ್ದ ಪ್ರಕರಣ | ಯುವತಿಯಿಂದ ಐವರ ವಿರುದ್ದ ದೂರು,ಇಬ್ಬರ…

ಪುತ್ತೂರು: ಬೆಂಗಳೂರಿನ ಹಿಂದೂ ಯುವತಿ, ಯುವಕ ಮತ್ತು ಮುಸ್ಲಿಂ ಧರ್ಮದ ಯುವಕ ಬೈಪಾಸ್ ರಸ್ತೆಯ ಪ್ರತಿಷ್ಠಿತ ಹೊಟೇಲೊಂದರಲ್ಲಿ ಕಳೆದ ಮೂರು ದಿನಗಳಿಂದ ರೂಮ್ ಮಾಡಿ ತ೦ಗಿದ್ದ ಮಾಹಿತಿ ಪಡೆದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ ಮತ್ತು ಸ್ಥಳಕ್ಕೆ ತೆರಳಿದ ಪೊಲೀಸರು

ಡಿಜಿಟಲ್ ಪೇಮೆಂಟ್ ಅಂಚೆ ಇಲಾಖೆಯ ಡಾಕ್‌ ಪೇ ಮೂಲಕ ಇನ್ನಷ್ಟು ಸುಲಭ | ಯಾವುದೇ ಬ್ಯಾಂಕ್‌ನ ಖಾತೆಯಿದ್ದರೂ ಈ ಸೇವೆ…

ಪೋಸ್ಟಲ್ ಪೇಮೆಂಟ್ ಬ್ಯಾಂಕ್ ಆಗಿರುವ ಅಂಚೆ ಇಲಾಖೆಯು ಈಗಾಗಲೇ ಹಲವು ಕಾರ್ಯಗಳನ್ನು ಡಿಜಿಟಲೈಸ್ ಮಾಡಿದ್ದು,ಈಗ ಪೋನ್ ಪೇ,ಗೂಗ್ಲ್ ಪೇ ಮಾದರಿಯಲ್ಲೇ ಡಾಕ್ ಪೇ ಎಂಬ ಹೊಸ ಪೇಮೆಂಟ್ ಆ್ಯಪ್ ಆರಂಭಿಸಿದೆ. ಮಾಹಿತಿ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವ ಇಂದಿನ ದಿನಗಳಲ್ಲಿ ಅಂಚೆ ಇಲಾಖೆಯೂ

94ಸಿ ಅವಧಿ ಮಾರ್ಚ್ 2023ರವರೆಗೆ ವಿಸ್ತರಣೆ | ಅಳತೆಗೂ ಮೀರಿ‌ ಮನೆ ನಿರ್ಮಿಸಿದರೆ ಪರಿಶೀಲಿಸಿ ಸಕ್ರಮ

ಸರಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ವಾಸದ ಮನೆಗಳನ್ನು ನಿರ್ಮಿಸಿರುವವರಿಗೆ ಅದನ್ನು ಸಕ್ರಮಗೊಳಿಸಲು ಭೂಕಂದಾಯ ಕಾಯ್ದೆ 1964ರ ಕಲಂ `94ಸಿ' ಅಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಅರ್ಜಿ ಸಲ್ಲಿಕೆ ಅವಧಿಯನ್ನು 2021ರ ಮಾರ್ಚ್ 31ರಿಂದ 2022ರ ಮಾಚ್ 31ರ ವರೆಗೆ ಅವಧಿ ವಿಸ್ತರಿಸಲಾಗಿದೆ ಎಂದು ಕಂದಾಯ

ಡೀಮ್ಡ್ ಫಾರೆಸ್ಟ್‌ನಲ್ಲಿ ಮನೆ ಮಾಡಿದವರಿಗೆ,ಕೃಷಿ ಮಾಡಿದವರಿಗೆ ಸಿಹಿ ಸುದ್ದಿ ನೀಡಿದ ಬಿಜೆಪಿ ಸರಕಾರ

ಡೀಮ್ಡ್ ಫಾರೆಸ್ಟ್‌ನಲ್ಲಿ ಮನೆ ಮಾಡಿದವರಿಗೆ,ಕೃಷಿ ಮಾಡಿದವರಿಗೆ ಬಿಜೆಪಿ ಸರಕಾರ ಸಿಹಿ ಸುದ್ದಿ ನೀಡಿದೆ. ರಾಜ್ಯದಲ್ಲಿನ ಡೀಮ್ಸ್ ಫಾರೆಸ್ಟ್ ಎಂದು ಗುರುತಿಸಲಾಗಿರುವ 9 ಲಕ್ಷ ಹೆಕ್ಟೇರ್ ಭೂಮಿಯ ಪೈಕಿ 6 ಲಕ್ಷ ಹೆಕ್ಟೇರ್ ಪ್ರದೇಶವನ್ನು ಕಂದಾಯ ಇಲಾಖೆಗೆ ವಾಪಸ್ ಕೊಡಲು ಅರಣ್ಯ ಇಲಾಖೆ

ಅಕ್ಟೋಬರ್ 1 ರ ನಂತರ ಡೆಬಿಟ್,ಕ್ರೆಡಿಟ್ ಕಾರ್ಡ್‌ ಅಟೊ ಡೆಬಿಟ್ ಕೆಲಸ ಮಾಡಲ್ಲ | ಬ್ಯಾಂಕ್ ಮೂಲಕ ಸ್ವಯಂ ಪಾವತಿ ಅಬಾಧಿತ

ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ ಅಟೋ ಡೆಬಿಟ್ ಮೂಲಕ ಪಾವತಿಯಾಗುತ್ತಿದ್ದ ವ್ಯವಹಾರ ಅಕ್ಟೋಬರ್ 1ರ ನಂತರ ಕೆಲಸ ಮಾಡುವುದಿಲ್ಲ. ಕಾರ್ಡ್ ಬಳಸಿ ನಿರ್ದಿಷ್ಟ ಅವಧಿ ಮುಗಿಯುತ್ತಲೇ ಮತ್ತೆ ನವೀಕರಣವಾಗುವಂತೆ, ನಿಮ್ಮ ಖಾತೆಯಿಂದ ಹಣ ಕಡಿತವಾಗುವಂಥ ವ್ಯವಸ್ಥೆ ಮಾಡಿಕೊಂಡವರಿಗೆ ಅಕ್ಟೋಬರ್ 1ರ