ಪಾಪ್ಯುಲರ್ ಫ್ರಂಟ್ ನಾಯಕ ಮೌಲಾನಾ ಉಸ್ಮಾನ್ ಬೇಗ್ ರಶಾದಿಯವರ ನಿಧನಕ್ಕೆ ಪಾಪ್ಯುಲರ್ ಫ್ರಂಟ್ ಸಂತಾಪ

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ನಾಯಕ, ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ನ ಸ್ಥಾಪಕಾಧ್ಯಕ್ಷ ಮೌಲಾನಾ ಉಸ್ಮಾನ್ ಬೇಗ್ ರಶಾದಿ(61)ಯವರ ನಿಧನಕ್ಕೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಯಾಸಿರ್ ಹಸನ್, ರಾಜ್ಯ ಪ್ರಧಾನ ಕಾರ್ಯದರ್ಶಿ ನಾಸಿರ್ ಪಾಶ ತೀವ್ರ ಸಂತಾಪ

ಅಪ್ರಾಪ್ತೆಯ ಅತ್ಯಾಚಾರ ಯತ್ನದ ಆರೋಪಿ ಪೊಲೀಸ್ ಠಾಣೆಯಿಂದ ಪರಾರಿ

ಅಪ್ರಾಪ್ತೆಯ ಅತ್ಯಾಚಾರ ನಡೆಸಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಪೋಕ್ಸೋ ಆರೋಪಿಯೊಬ್ಬ ಪೊಲೀಸ್ ಠಾಣೆಯ ಲಾಕಪ್ ನ ಚಿಲಕ ತೆಗೆದು ಪರಾರಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ನಡೆದಿದೆ.ಎನ್.ಆರ್. ಪುರ ತಾಲೂಕಿನ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ

ವಿಟ್ಲ : ಕೆರೆಗೆ ಹಾರಿ ಯುವತಿ ಆತ್ಮಹತ್ಯೆ | ಡೆತ್‌ನೋಟ್ ಪತ್ತೆ,ಸಾವಿಗೆ ಕಾರಣರಾದವರ ಹೆಸರು ಉಲ್ಲೇಖ

ಬಂಟ್ವಾಳ : ಡೆತ್ ನೋಟ್ ಬರೆದಿಟ್ಟು ಯುವತಿಯೋರ್ವಳು ವಿಟ್ಲ ಪಂಚಲಿಂಗೇಶ್ವರ ದೇಗುಲದ ಸಮೀಪದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ.11 ರಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.ಯುವತಿಯನ್ನು ವಿಟ್ಲ ಕಸಬಾ ಗ್ರಾಮದ ನೆತ್ರಕೆರೆ ನಿವಾಸಿ ಬಾಬು ನಾಯ್ಕ ರವರ ಮಗಳು, ವಿಟ್ಲದ ಡೆಂಟಲ್

ಮಂಗಳೂರು | ವಿವಾಹಿತ ಮಹಿಳೆ ನಾಪತ್ತೆ, ದೂರು ದಾಖಲು

ಮಂಗಳೂರಿನ ಅಪಾರ್ಟೆಂಟ್ ಒಂದರಲ್ಲಿ ಕಾವಲುಗಾರರಾಗಿ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಯೋರ್ವಳು ನಾಪತ್ತೆಯಾದ ಬಗ್ಗೆ ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ವೆಲೆನ್ಸಿಯ ನಿವಾಸಿ ವಿಜಯಲಕ್ಷ್ಮಿ (26) ನಾಪತ್ತೆಯಾದ ಯುವತಿ. ಇವರು ಎಂಟು ವರ್ಷಗಳಿಂದ ಪತಿ ನಾಗೇಶ್, ಇಬ್ಬರು

ಬಿಜೆಪಿ ಯಲ್ಲಿ ಬೂತ್ ಸಮಿತಿ ಅಧ್ಯಕ್ಷರಿಗೂ ಗೌರವದ ಸ್ಥಾನ-ನಳಿನ್ ಕುಮಾರ್

ಕಾಣಿಯೂರು : ಬಿಜೆಪಿಯಲ್ಲಿ ಕೇಂದ್ರದಲ್ಲಿ ರಾಷ್ಟ್ರೀಯ ಅಧ್ಯಕ್ಷರಿಗಿರುವಷ್ಟೇ ಗೌರವ ಬೂತ್ ಸಮಿತಿ ಅಧ್ಯಕ್ಷರಿಗೂ ಇದೆ.ರಾಷ್ಟ್ರೀಯ ಅಧ್ಯಕ್ಷರ ಯೋಚನೆ ಎಲ್ಲೆಡೆ ಅನುಷ್ಠಾನ ಮಾಡಲಾಗಿದೆ.ಪಕ್ಷ ನಿಷ್ಟೆಯ ಕಾರ್ಯಕರ್ತರೇ ಬಿಜೆಪಿಯ ಆಸ್ತಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ಅನಿವಾಸಿ ಕನ್ನಡಿಗ, ದುಬೈ ವಕೀಲ ಸುನೀಲ್ ಅಂಬಲವೆಲೀಲ್ ಅವರಿಗೆ ದುಬೈ ಗೋಲ್ಡನ್ ವಿಸಾ ಗೌರವ

ಅನಿವಾಸಿ ಕನ್ನಡಿಗ, ದುಬೈ ವಕೀಲ ಸುನೀಲ್ ಅಂಬಲವೆಲೀಲ್ ಅವರಿಗೆ ದುಬೈ ಗೋಲ್ಡನ್ ವಿಸಾ ಗೌರವ ಪಡೆದುಕೊಂಡಿದ್ದಾರೆ.ಗೋಲ್ಡನ್ ವಿಸಾ ಪಡೆದಿರುವ ಸುನೀಲ್ ಅವರು ಅಂತಾರಾಷ್ಟ್ರೀಯ ಕನ್ನಡಿಗಾಸ್ ಫೆಡರೇಷನ್ ನ ಸ್ಥಾಪಕಸದಸ್ಯ, ದುಬೈ ಕಾರ್ಪೊರೇಟ್ ವಕೀಲ, ಕಾನೂನು ಸಲಹೆಗಾರರಾಗಿದ್ದಾರೆ.

ಪುತ್ತೂರು: ಸಂತ ಫಿಲೋಮಿನಾ ಪ್ರೌಢಶಾಲಾ ನಿವೃತ್ತ ಶಿಕ್ಷಕ ಜೋಸೆಫ್ ಡಿ’ಮೆಲ್ಲೋ ಹೃದಯಾಘಾತದಿಂದ ನಿಧನ

ಪುತ್ತೂರು : ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ ಸುದೀರ್ಘ 37 ವರ್ಷಗಳ ಕಾಲ ಶಿಕ್ಷಕ ವೃತ್ತಿಯನ್ನು ನಿರ್ವಹಿಸಿ ಇತ್ತೀಚೆಗೆ ಸೇವಾ ನಿವೃತ್ತಿ ಹೊಂದಿದ ಜೋಸೆಫ್ ಡಿ'ಮೆಲ್ಲೋ(60ವ.)ರವರು ಹೃದಯಾಘಾತದಿಂದ ಅ.10 ರಂದು ಬೆಳಿಗ್ಗೆ ನಿಧನ ಹೊಂದಿದ್ದಾರೆ.ಪುತ್ತೂರು ತಾಲೂಕಿನ ಪರ್ಲಡ್ಕ ಎಂಬಲ್ಲಿ

ಗಾಂಜಾ ದಂಧೆಕೋರರಿಗೆ ಪೊಲೀಸರೇ ಸಾಥ್ | ಹಣ ಪಡೆದು ಆರೋಪಿಗಳನ್ನು ಬಿಟ್ಟು ಬಿಟ್ಟ ಪೊಲೀಸರು

ಪೊಲೀಸರೇ ಗಾಂಜಾ ದಂಧೆಕೋರರೊಂದಿಗೆ ಶಾಮೀಲಾಗಿ ಅವರಿಂದ ಹಣ ಪಡೆದು ವಶಪಡಿಸಿಕೊಂಡ ಗಾಂಜಾವನ್ನು ಮಾರಾಟ ಮಾಡಿ ಸಿಕ್ಕಿಬಿದ್ದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ಸ್ ಪೆಕ್ಟರ್ ಸೇರಿದಂತೆ 7 ಪೊಲೀಸ್ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ.ಖಚಿತ ಮಾಹಿತಿ

ಪುತ್ತೂರು : ಲಾರಿ-ಬೈಕ್ ಡಿಕ್ಕಿ | ಬೈಕ್ ಸವಾರ ಯುವ ಉದ್ಯಮಿ ಮೃತ್ಯು

ಪುತ್ತೂರು: ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ಬಳಿ ಗೊಬ್ಬರದ ಲಾರಿ ಮತ್ತು ಬೈಕ್ ನಡುವೆ ಅ.10 ರಂದು ಡಿಕ್ಕಿ ಸಂಭವಿಸಿ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ.ಮೃತಪಟ್ಟವರನ್ನು ಪುತ್ತೂರು ಬದ್ರಿಯಾ ಮಸೀದಿಗೆ ಹೋಗುವ ದಾರಿಯಲ್ಲಿರುವ ಗೋಲ್ಡನ್ ಬೇಕರಿಯ ಮಾಲೀಕ ಅಝೀಝ್ ಎಂದು

ಕನ್ನಡ ಚಿತ್ರರಂಗದ ಹಿರಿಯ ನಟ ಸತ್ಯಜಿತ್‌ ಇನ್ನಿಲ್ಲ

ಕನ್ನಡ ಚಿತ್ರರಂಗದ ಹಿರಿಯ ನಟ ಸತ್ಯಜಿತ್​ ಅವರು. ಬೆಂಗಳೂರಿನ ಬೌರಿಂಗ್​ ಆಸ್ಪತ್ರೆಯಲ್ಲಿ ನಿಧನರಾದರು.ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದ ಅವರು, ಹಲವು ದಿನಗಳಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದರು ಗ್ಯಾಂಗ್ರಿನ್​ನಿಂದಾಗಿ ಅವರ ಒಂದು ಕಾಲು