Home Entertainment ಡಿಫರೆಂಟ್ ಆಗಿ ಮದುವೆ ವೇದಿಕೆಗೆ ಎಂಟ್ರಿ ನೀಡಬೇಕಾಗಿದ್ದ ಜೋಡಿಯ ಐಡಿಯಾ ಫುಲ್ ಫ್ಲಾಪ್!! | ಹೊಸ...

ಡಿಫರೆಂಟ್ ಆಗಿ ಮದುವೆ ವೇದಿಕೆಗೆ ಎಂಟ್ರಿ ನೀಡಬೇಕಾಗಿದ್ದ ಜೋಡಿಯ ಐಡಿಯಾ ಫುಲ್ ಫ್ಲಾಪ್!! | ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡಲು ಹೊರಟಿದ್ದ ಜೋಡಿಯ ಈ ಫಜೀತಿಯಿಂದ ನಗೆಗಡಲಲ್ಲಿ ತೇಲಾಡಿದ ಅತಿಥಿಗಳು!!

Hindu neighbor gifts plot of land

Hindu neighbour gifts land to Muslim journalist

ಮದುವೆ ಎಂಬುದು ಪ್ರತಿಯೊಬ್ಬರ ಜೀವನದ ಅತ್ಯಂತ ಪ್ರಮುಖ ಘಟ್ಟ. ಎಲ್ಲರಿಗಿಂತ ಡಿಫರೆಂಟಾಗಿ ಮದುವೆ ಆಗಬೇಕೆಂಬುದು ಈಗಿನ ಯುವ ಜನತೆಯ ಅಪೇಕ್ಷೆ. ಹಾಗಾಗಿ ಇತ್ತೀಚಿನ ಮದುವೆಗಳಲ್ಲಿ ಏನಾದರೊಂದು ಸ್ಪೆಷಲ್ ಪ್ಲಾನ್ ಇದ್ದೇ ಇರುತ್ತದೆ. ಹಾಗೆಯೇ ಇಲ್ಲೊಂದು ಕಡೆ ಡಿಫರೆಂಟ್ ಆಗಿ ವೇದಿಕೆಗೆ ಎಂಟ್ರಿ ನೀಡಬೇಕಾಗಿದ್ದ ವಧು-ವರರು ಫಜೀತಿಗೆ ಸಿಲುಕಿದ ಘಟನೆ ನಡೆದಿದೆ.

ಡಿಫರೆಂಟಾಗಿ ವೇದಿಕೆಗೆ ಎಂಟ್ರಿ ಕೊಡೋಕೆ ಸಿದ್ಧರಾಗಿದ್ದ ವಧು ವರರಿಗೆ ಆ ವೇಳೆ ಆಗಿದ್ದೇ ಬೇರೆ!! ಆ ತಮಾಷೆಯ ವೀಡಿಯೋ ಇದೀಗ ಸಖತ್ ವೈರಲ್ ಆಗಿದೆ. ಏನೋ ಅಂದುಕೊಂಡಿದ್ದ ವಧು ವರರಿಗೆ ಮತ್ತೇನೋ ಆಗಿದೆ. ಅತಿಥಿಗಳೆಲ್ಲಾ ಕುರ್ಚಿಯಿಂದ ಎದ್ದು ನಿಂತು ಕಣ್ಣು ಬಾಯಿ ಬಿಟ್ಟುಕೊಂಡು ಅವರನ್ನೇ ನೋಡುತ್ತಿದ್ದಾರೆ.

ಮದುವೆಯಲ್ಲಿ ಏನಾದರೂ ಯುನಿಕ್​ ಐಡಿಯಾಗಳನ್ನು ಮಾಡುವುದು ಮಾಮೂಲಿಯಾಗಿಬಿಟ್ಟಿದೆ. ಹೊಸ ಸ್ಟೈಲ್​ನಲ್ಲಿ ಡಿಫರೆಂಟಾಗಿ ವಧು ವರರು ವೇದಿಗೆ ಆಗಮಿಸಲು ಯೋಚಿಸಿದ್ದಾರೆ. ಆದರೆ ಎಡವಟ್ಟಾಗಿ ಇಬ್ಬರೂ ಸಹ ಕೆಳಗೆ ಬಿದ್ದಿದ್ದಾರೆ. ಬಳಿಕ ಇಬ್ಬರೂ ಎದ್ದು ನಿಂತುಕೊಂಡಿರುವುದನ್ನು ಕೂಡ ವೀಡಿಯೋದಲ್ಲಿ ಗಮನಿಸಬಹುದು. ವೀಡಿಯೋ ಸಖತ್ ವೈರಲ್ ಆಗಿದ್ದು ನೆಟ್ಟಿಗರು ತಮಾಷೆಯ ಎಮೊಜಿಗಳನ್ನು ಕಳುಹಿಸುವ ಮೂಲಕ ಪ್ರತಿಕ್ರಿಯಿಸಿದ್ದಾರೆ.

https://www.instagram.com/reel/CWF9TjWl6M3/?utm_source=ig_web_copy_link

ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ತಮಾಷೆಯ ವೀಡಿಯೋಗಳು ಹರಿದಾಡುತ್ತವೆ. ಅವುಗಳಲ್ಲಿ ಎಚ್ಚರಿಕೆ ನೀಡುವ ಸಂದೇಶಗಳು ಸಹ ಇರುತ್ತವೆ. ಏನೋ ಮಾಡೋಕೆ ಹೋಗಿ ಇದೇನಾಯ್ತಪ್ಪಾ! ಎಂದೊಬ್ಬರು ಪ್ರತಿಕ್ರಿಯಿಸಿದ್ದಾರೆ. ಜಾಸ್ತಿ ಶೋಕಿ ಮಾಡಲು ಹೋದರೆ ಹೀಗೆ ಆಗುವುದು ಎಂದು ನೆಟ್ಟಿಗರೊಬ್ಬರು ಕಾಲೆಳೆದಿದ್ದಾರೆ. ಇದೇ ರೀತಿ ಹಲವರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ.