ಕಾಲೇಜಿಗೆ ಹೊರಟಿದ್ದ ಯುವತಿಯನ್ನು ಅಪಹರಿಸಿದ ತಂಡ | ದೂರು ದಾಖಲು

Share the Article

ಕಾರವಾರ : ಕಾಲೇಜಿಗೆ ಹೊರಟಿದ್ದ ವಿದ್ಯಾರ್ಥಿನಿಯೋರ್ವಳನ್ನು‌ ಕಾರಿನಲ್ಲಿ ಬಂದು ಆಗಂತುಕರು ಅಪಹರಿಸಿದ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.

ಶಿರಸಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿನಿಯನ್ನು ಬನವಾಸಿ ರಸ್ತೆ ಟಿಪ್ಪು ನಗರ ಕ್ರಾಸ್ ಬಳಿ ಕಾರ್ ನಲ್ಲಿ ಬಂದು ಬಲವಂತವಾಗಿ ಮೂರು ಜನರು ಅಪಹರಿಸಿಕೊಂಡು ಹೋಗಿದ್ದಾರೆ ಎಂದು ಆಕೆಯ ತಾಯಿ ರೇಣುಕಾ ಪರಮೇಶ್ವರ ಮುಕ್ಕಣ್ಣನವರ್ ಗ್ರಾಮೀಣ ಠಾಣೆ ಯಲ್ಲಿ ದೂರು ನೀಡಿದ್ದಾರೆ.

Leave A Reply