ಸುಳ್ಯ : ಮನೆಯ ಆವರಣಗೋಡೆಗೆ ಲಾರಿ ಡಿಕ್ಕಿ

Share the Article

ಸುಳ್ಯ : ಸುಳ್ಯದ ಜಯನಗರ ಭಜನಾ ಮಂದಿರದ ಬಳಿ ಕೆಂಪುಕಲ್ಲು ಸಾಗಾಟ ಮಾಡುತ್ತಿದ್ದ ಈಚರ್ ಗಾಡಿಯೊಂದು ಬ್ರೇಕ್‌ ವೈಫಲ್ಯಗೊಂಡು ಇಳಿಜಾರು ಪ್ರದೇಶದಲ್ಲಿ ಮನೆಯೊಂದರ ಆವರಣ ಗೋಡೆಗೆ ಡಿಕ್ಕಿ ಹೊಡೆದ ಘಟನೆ ನ.16ರಂದುನಡೆದಿದೆ.

ಅಂಗನವಾಡಿ ಶಿಕ್ಷಕಿ ತಿರುಮಲೇಶ್ವರಿ ಅವರ ಮನೆಯ ಆವರಣ ಗೋಡೆಗೆ ವೇಗವಾಗಿ ಬಂದು ಡಿಕ್ಕಿ ಹೊಡೆದು ಲಾರಿ ನಿಂತಿದೆ.

ಆವರಣಗೋಡೆಗೆ ಹಾನಿಯಾಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Leave A Reply