ಮಂಗಳೂರು : ಖಾಸಗಿ ಬಸ್‌ಗೆ ಕಿಡಿಗೇಡಿಗಳಿಂದ ಕಲ್ಲೆಸೆತ

Share the Article

ಮಂಗಳೂರು : ಮಣಿಪಾಲ-ಉಡುಪಿಯಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಎಕ್ಸ್ ಪ್ರೆಸ್ ಬಸ್ಸಿಗೆ ಕಿಡಿಗೇಡಿಗಳು ಕಲ್ಲೆಸೆದು ಹಾನಿಗೊಳಿಸಿದ ಘಟನೆ ಸೋಮವಾರ ನಡೆದಿದೆ.

ಉಡುಪಿಯಿಂದ ಮಂಗಳೂರಿಗೆ ಬರುತ್ತಿದ್ದ ಎಕೆಎಂಎಸ್ ಎಕ್ಸ್‌ಪ್ರೆಸ್ ಬಸ್ ಕೋಡಿಕಲ್ ಕ್ರಾಸ್ ತಲುಪಿದಾಗ ದ್ವಿಚಕ್ರ ವಾಹನದಲ್ಲಿ ಬಂದ ಕಿಡಿಗೇಡಿಗಳು ಬಸ್ಸಿನ ಗಾಜಿಗೆ ಕಲ್ಲೆಸೆದು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಕಲ್ಲೆಸೆತದಿಂದ ಬಸ್ಸಿನ ಗಾಜಿಗೆ ಹಾನಿಯಾಗಿದೆ. ಕಿಡಿಗೇಡಿಗಳು ದ್ವಿಚಕ್ರ ವಾಹನದ ನಂಬರ್ ಪ್ಲೇಟ್ ಕಾಣದಂತೆ ಮರೆಮಾಚಿದ್ದಾರೆ. ಕಳೆದ ವಾರ ಪಣಂಬೂರು ಸಮೀಪ ಕಾಟಿಪಳ್ಳ ಕೈಕಂಬದಿಂದ ಮಂಗಳಾದೇವಿ ರೂಟ್‌ನತ್ತ ಬರುತ್ತಿದ್ದ ಖಾಸಗಿ ಸಿಟಿ ಬಸ್ಸಿಗೆ ಕಲ್ಲೆಸೆಯಲಾಗಿತ್ತು. ಇದೀಗ ಈ ಪರಿಸರದಲ್ಲಿ ಎರಡನೆಯ ಬಾರಿಗೆ ನಡೆದ ಘಟನೆ ಇದಾಗಿದೆ.

Leave A Reply