ಪುತ್ತೂರು : ಪತಿ ಮಾತನಾಡಿದಾಗ ಸುಮ್ಮನಿದ್ದ ಪತ್ನಿ‌,ಕೋಪಗೊಂಡ ಪತಿರಾಯನಿಂದ ಪತ್ನಿಯ ಮೇಲೆ ಚಾಕುವಿನಿಂದ ಹಲ್ಲೆ

Share the Article

ಪುತ್ತೂರು: ಮಾತನಾಡಿದಾಗ ಹೆಂಡತಿ ಸರಿಯಾಗಿ ಸ್ಪಂದಿಸಲಿಲ್ಲವೆಂದು ಕೋಪಗೊಂಡ ಗಂಡ ಹೆಂಡತಿ ಮೇಲೆ ಚಾಕುವಿನಿಂದ ಹಲ್ಲೆಗೈದ ಘಟನೆ ಬನ್ನೂರು ಗ್ರಾಮದ ಕಜೆ ಸೇಡಿಯಾಪುವಿನಲ್ಲಿ ನಡೆದಿದೆ.

ಹಲ್ಲೆಗೊಳಗಾದವರನ್ನು ಬನ್ನೂರು ಗ್ರಾಮದ ಕಜೆ ಸೇಡಿಯಾಪು ನಿವಾಸಿ ದಾಮೋದರ ರವರ ಪತ್ನಿ ಪವಿತ್ರ ಎನ್ನಲಾಗಿದೆ.

ನ.13 ರಂದು ಪವಿತ್ರ ರವರು ಮನೆಯಲ್ಲಿ ಕೆಲಸ ಮಾಡುತಿದ್ದ ವೇಳೆ ಪತಿ ದಾಮೋದರ ಅವರ ಬಳಿಗೆ ಬಂದು ‘ನಾನು ಸತ್ತರೆ ನೀನು ಏನೂ ಮಾಡುವೆ..?’ ಎಂದು ಕೇಳಿದ್ದು, ಇದಕ್ಕೆ ಪವಿತ್ರ ಯಾವುದೇ ಸ್ಪಂದನೆ ನೀಡದಿದ್ದಾಗ ಕೋಪಗೊಂಡ ದಾಮೋದರ್ ಚಾಕುವಿನಿಂದ ಅವರ ಮೇಲೆ ಹಲ್ಲೆ ನಡೆಸಿದ್ದು, ಈ ಸಂದರ್ಭದಲ್ಲಿ ಪವಿತ್ರ ಬೊಬ್ಬೆ ಹಾಕಿದಾಗ ಮನೆಯವರೆಲ್ಲ ಬಂದು ತಡೆದಿದ್ದು, ಗಾಯಗೊಂಡ ಪವಿತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ. ದಾಮೋದರ್ ಕೆಲ ದಿನಗಳಿಂದ ಅನಾರೋಗ್ಯದಿಂದಿದ್ದು ಅದೇ ಚಿಂತೆಯಲ್ಲಿ ಪತ್ನಿ ಜೊತೆ ಮಾತನಾಡಿದಾಗ ಸರಿಯಾಗಿ ಮಾತನಾಡದೇ ಇದ್ದ ಕಾರಣಕ್ಕೆ ಕೋಪಗೊಂಡು ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಪುತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply