ಗಾಂಧಿ ಅವರ ರಾಮರಾಜ್ಯವನ್ನು ಸಾಕಾರ ಮಾಡುವುದು ಬಿಜೆಪಿಯ ಗುರಿ-ಬಿ.ಎಲ್‌.ಸಂತೋಷ್

Share the Article

ದೀನ್‌ ದಯಾಳ್‌ ಉಪಾಧ್ಯಾಯರ ಅಂತ್ಯೋ ದಯ, ಆಚಾರ್ಯ ವಿನೋಬಾ ಭಾವೆ ಅವರ ಸರ್ವೋದಯ ಹಾಗೂ ಮಹಾತ್ಮಾ ಗಾಂಧಿ ಅವರ ರಾಮ ರಾಜ್ಯವನ್ನು ಸಾಕಾರ ಮಾಡುವುದು ಬಿಜೆಪಿಯ ಗುರಿ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಹೇಳಿದರು.

ಮಂಗಳೂರಿನ ಟಿ.ವಿ. ರಮಣ್‌ ಪೈ ಹಾಲ್‌ನಲ್ಲಿ ಶನಿವಾರ ನಡೆದ ಬಿಜೆಪಿ ಕರ್ನಾಟಕ ಪ್ರಕೋಷ್ಠಗಳ 2 ದಿನಗಳ ಚಿಂತನ ವರ್ಗದ ಸಮಾರೋಪದಲ್ಲಿ ಅವರು ಮಾತನಾಡಿದರು.

ಚುನಾವಣೆಯಲ್ಲಿ ಗೆಲ್ಲುತ್ತಿದ್ದ ಕ್ಷೇತ್ರ ಗಳಲ್ಲಿ ಬಿಜೆಪಿಗೆ ಸೋಲಾಗುತ್ತಿದೆ. ಇನ್ನು ಕೆಲವೆಡೆ ಇಡೀ ಜಿಲ್ಲೆಯಲ್ಲಿ ಗೆದ್ದರೂ ನಡುವೆ ಒಂದೊಂದು ಕ್ಷೇತ್ರ ಗಳಲ್ಲಿ ಗೆಲ್ಲುವುದು ಕಷ್ಟವಾಗಿದೆ. ಎಲ್ಲ ಕಡೆಗಳಲ್ಲೂ ಬಿಜೆಪಿಯು ರಾಜಕೀಯ ಪ್ರಾಬಲ್ಯ ಸ್ಥಾಪಿಸಬೇಕಿದೆ. ಇಡೀ ಕರಾವಳಿಯಲ್ಲಿ ಬಿಜೆಪಿ ಗೆದ್ದರೂ ಉಳ್ಳಾಲದಲ್ಲಿ ಆಗಿಲ್ಲ. ಇಂತಹ ಕ್ಷೇತ್ರಗಳಲ್ಲೂ ಗೆಲುವು ಸಾಧ್ಯವಾಗ ಬೇಕಾದರೆ ಸಂಘಟನೆಯ ಶಕ್ತಿಯನ್ನು ಕಡೇ ಬೂತ್‌ವರೆಗೂ ಕೊಂಡೊಯ್ಯಬೇಕೆಂದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ಸಚಿವರಾದ ಎಸ್‌.ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸುದರ್ಶನ್‌ ಮೂಡುಬಿದಿರೆ, ಪ್ರಕೋಷ್ಠಗಳ ರಾಜ್ಯ ಸಂಯೋಜಕ ಭಾನು ಪ್ರಕಾಶ್‌, ಸಹ ಸಂಯೋಜಕ ಡಾ| ಶಿವಯೋಗಿಸ್ವಾಮಿ ಉಪಸ್ಥಿತರಿದ್ದರು

ವೃತ್ತಿಪರ ಪ್ರಕೋಷ್ಠ ಸಂಚಾಲಕ ಚೆನ್ನಮಲ್ಲಿಕಾರ್ಜುನ ಸ್ವಾಗತಿಸಿ, ಕಾನೂನು ಪ್ರಕೋಷ್ಠದ ಸಂಚಾಲಕ ಯೋಗೇಂದ್ರ ಕುಮಾರ್‌ ವಂದಿಸಿದರು

Leave A Reply