Home ದಕ್ಷಿಣ ಕನ್ನಡ ಪುತ್ತೂರಿನ ಮುಳಿಯ ಜುವೆಲ್ಲರ್ಸ್ ನ 45 ವರ್ಷಗಳ ಹಿಂದಿನ ಚಿನ್ನದ ನೆಕ್ಲೇಸ್ ಗೆ ಒಮ್ಮೆಲೆ ಭಾರಿ...

ಪುತ್ತೂರಿನ ಮುಳಿಯ ಜುವೆಲ್ಲರ್ಸ್ ನ 45 ವರ್ಷಗಳ ಹಿಂದಿನ ಚಿನ್ನದ ನೆಕ್ಲೇಸ್ ಗೆ ಒಮ್ಮೆಲೆ ಭಾರಿ ಬೇಡಿಕೆ !! | ದೇಶದ ವಿವಿಧೆಡೆಯಿಂದ ಆ ವಿನ್ಯಾಸದ ನೆಕ್ಲೆಸ್ ನ ಕುರಿತು ವಿಚಾರಣೆ

Hindu neighbor gifts plot of land

Hindu neighbour gifts land to Muslim journalist

ಒಡವೆ ಎಂದ ತಕ್ಷಣ ಹೆಣ್ಣುಮಕ್ಕಳ ಮೊಗ ಅರಳುತ್ತದೆ, ಕಣ್ಣುಗಳು ಮಿನುಗುತ್ತವೆ. ಚಿನ್ನಕ್ಕೆ ದರ ಹೆಚ್ಚಾದರೂ ಚಿನ್ನದ ಮೇಲಿನ ಪ್ರೀತಿ, ಒಲವು ಸ್ವಲ್ಪವೂ ಕಡಿಮೆಯಾಗಿಲ್ಲ. ಸ್ತ್ರೀಯರು ವರ್ಷಕ್ಕೊಮ್ಮೆಯಾದರೂ ಒಡವೆಗಳನ್ನು ಖರೀದಿ ಮಾಡುತ್ತಲೇ ಇರುತ್ತಾರೆ. ಹೀಗಿರುವಾಗ ಪುರಾತನ ಚಿನ್ನಕ್ಕೆ ಇದೀಗ ಒಮ್ಮೆಲೆ ಭಾರಿ ಬೇಡಿಕೆ ಬಂದ ಘಟನೆಯೊಂದು ವರದಿಯಾಗಿದೆ.

ಸುಮಾರು 45 ವರ್ಷಗಳ ಹಿಂದೆ ಖರೀದಿಸಲಾದ ಚಿನ್ನದ ನೆಕ್ಲೆಸ್‌ ಒಂದಕ್ಕೆ ಇದ್ದಕ್ಕಿದ್ದಂತೆ ಮಹತ್ವ ಸೃಷ್ಟಿಯಾಗಿ ಅದೇ ವಿನ್ಯಾಸದ ನೆಕ್ಲೆಸ್‌ಗೆ ಬೇಡಿಕೆ ಉಂಟಾದ ಅಪೂರ್ವ ವಿದ್ಯಮಾನ ಪುತ್ತೂರಿನಲ್ಲಿ ನಡೆದಿದೆ.

ಕನ್ನಡ ಭಾವಗೀತಾಭಿನಯದ ವಿಡಿಯೋಗಳನ್ನು ಯೂಟ್ಯೂಬ್‌ ಮೂಲಕ ಬಿತ್ತರಿಸಿ ಪ್ರಸಿದ್ಧಿ ಸಂಪಾದಿಸಿರುವ, ಉಡುಪಿಯ ಕೊಡವೂರು ನೃತ್ಯನಿಕೇತನ ಸಂಸ್ಥೆಯ ಮಾನಸಿ ಸುಧೀರ್‌ ಅವರು ಧರಿಸಿದ 45 ವರ್ಷ ಹಳೆಯ ನೆಕ್ಲೆಸ್‌ ಇದಾಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಈ ನೆಕ್ಲೆಸ್‌ ಬಗ್ಗೆ ಮಾನಸಿ ಅವರು ಸಂಭ್ರಮ ಹಂಚಿಕೊಂಡ ಬೆನ್ನಲ್ಲೇ ಈ ಬೆಳವಣಿಗೆ ಸೃಷ್ಟಿಯಾಗಿದೆ.

ಬುಧವಾರ ಪುತ್ತೂರು ಮುಳಿಯ ಜುವೆಲ್ಲರ್ಸ್‌ನಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಏರ್ಪಡಿಸಲಾದ ‘ಕನ್ನಡ – ಬದುಕು- ಬಂಗಾರ’ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾನಸಿ ಸುಧೀರ್‌ ಚಿನ್ನಾಭರಣದ ಬಗ್ಗೆ ಮಾತನಾಡುತ್ತಾ, ನನ್ನ ತಾಯಿ 45 ವರ್ಷಗಳ ಹಿಂದೆ ಮುಳಿಯ ಸಂಸ್ಥೆಯಿಂದ ಈ ನೆಕ್ಲೆಸ್‌ ಖರೀದಿಸಿದ್ದರು. ಅದನ್ನವರು ಬಳಿಕ ನನಗೆ ಕೊಟ್ಟಿದ್ದು, ಈಗಲೂ ನಾನು ಧರಿಸುತ್ತೇನೆ. ಈ ಮಾಹಿತಿಯನ್ನು ಚಿತ್ರ ಸಮೇತ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದೆ. ಅನೇಕರು ಇದರ ಬಗ್ಗೆ ವಿಚಾರಿಸಿದ್ದಾರೆ ಎಂದರಲ್ಲದೆ, ಕಾರ‍್ಯಕ್ರಮದಲ್ಲಿ ಆ ನೆಕ್ಲೆಸ್‌ ಪ್ರದರ್ಶಿಸಿದರು.

ಇದಾದ ಕೆಲವೇ ಹೊತ್ತಿನಲ್ಲಿ ಮಾತನಾಡಿದ ಮುಳಿಯ ಸಂಸ್ಥೆಯ ಅಧ್ಯಕ್ಷರು, ಆಡಳಿತ ನಿರ್ದೇಶಕರಾದ ಮುಳಿಯ ಕೇಶವ ಪ್ರಸಾದ್‌, ಈ ಮಾದರಿಯ ನೆಕ್ಲೆಸ್‌ ಈಗ ಸಿಗುತ್ತಾ ಎಂದು ಇನ್‌ಸ್ಟಾಗ್ರಾಂ ಮೂಲಕ ಹುಬ್ಬಳ್ಳಿ ಮತ್ತು ಚೆನ್ನೈನ ಗ್ರಾಹಕರು ಇವತ್ತೇ ಪ್ರಶ್ನಿಸಿದ್ದಾರೆ ಎಂದರು. ಮಾನಸಿ ನೆಕ್ಲೆಸ್‌ ಪ್ರದರ್ಶನ ಮಾಡುವ ಸಂದರ್ಭದಲ್ಲೇ ಈ ಆನ್‌ಲೈನ್‌ ಬೇಡಿಕೆಯೂ ಬಂದಿದೆ ಎಂದು ಹೇಳಿದ ಅವರು, ಈ ನೆಕ್ಲೆಸ್‌ನ ಹೆಸರು ನಮಗೆ ತಿಳಿದಿಲ್ಲ ಎಂದರು.

ಆದರೂ ಒಮ್ಮೆಲೆ ನೆಕ್ಲೆಸ್ ಗೆ ಬೇಡಿಕೆ ಬಂದದ್ದು ಮುಳಿಯ ಮಾಲೀಕರಿಗೆ ಅಚ್ಚರಿಯನ್ನುಂಟು ಮಾಡಿದೆ. ಓಲ್ಡ್ ಫ್ಯಾಶನ್ ಎಂದು ಮೂದಲಿಸುವವರ ನಡುವೆ ಈ ಹಳೆಯ ಒಡವೆಗೂ ಬೇಡಿಕೆ ಬಂದಿರುವುದು ಬಹಳ ಅಪರೂಪವೇ ಸರಿ.