ದಾವೂದ್‌ನ ಯಾವುದೇ ಆಸ್ತಿಯನ್ನು ಸನಾತನ ಸಂಸ್ಥೆ ಖರೀದಿಸಿಲ್ಲ – ಸನಾತನ ಸಂಸ್ಥೆ
ಮುಂಬಯಿನಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಅತ್ಯಂತ ಕೀಳ್ಮಟ್ಟದ ರಾಜಕೀಯ ನಡೆಯುತ್ತಿದೆ. ಈ ನಡುವೆ ಇಂದು ನವಾಬ್ ಮಲಿಕ್ ತಮ್ಮ ಮೇಲಿನ ಆರೋಪಗಳನ್ನು ಅಲ್ಲಗಳೆಯಲು ಸತ್ಯಾಂಶವನ್ನು ತಿಳಿಯದೆ ಸನಾತನ ಸಂಸ್ಥೆಯ ಹೆಸರನ್ನು ವಿನಾಕಾರಣ ಬಳಸಿಕೊಂಡಿದ್ದಾರೆ. ಸನಾತನ ಸಂಸ್ಥೆಯು ದಾವೂದ್‌ನ ಯಾವುದೇ ಆಸ್ತಿಯನ್ನು ಖರೀದಿಸಿಲ್ಲ. ವಾಸ್ತವದಲ್ಲಿ ಮಹಾರಾಷ್ಟ್ರದ ರತ್ನಾಗಿರಿಯ ದಿನಪತ್ರಿಕೆಯಲ್ಲಿ ಪ್ರಕಟವಾದ ವಾರ್ತೆಗನುಸಾರ ಆ ಆಸ್ತಿಯನ್ನು ದೆಹಲಿಯ ನ್ಯಾಯವಾದಿ ಅಜಯ ಶ್ರೀವಾಸ್ತವ ಇವರು ಖರೀದಿಸಿದ್ದಾರೆ ಮತ್ತು ಆ ಜಾಗದಲ್ಲಿ ಮಕ್ಕಳಿಗೆ ಸಂಸ್ಕಾರ ನೀಡಲು ‘ಸನಾತನ ಧರ್ಮ ಪಾಠಶಾಲೆ’ ಹೆಸರಿನ ಗುರುಕುಲ ಆರಂಭಿಸುವುದಾಗಿ ಅವರು ಘೋಷಿಸಿದ್ದಾರೆ. ಸನಾತನ ಸಂಸ್ಥೆಗೂ ನ್ಯಾಯವಾದಿ ಅಜಯ ಶ್ರೀವಾಸ್ತವಗೂ ಯಾವುದೇ ಸಂಬಂಧವಿಲ್ಲ.
ಆದ್ದರಿಂದ ಸರಿಯಾದ ಮಾಹಿತಿ ಪಡೆಯದೇ ಸನಾತನ ಸಂಸ್ಥೆಯ ಮೇಲೆ ಈ ರೀತಿಯ ಸುಳ್ಳು ಆರೋಪವನ್ನು ಹೊರಿಸಿ ನವಾಬ್ ಮಲಿಕ್ ನಗೆಪಾಟಲಿಗೀಡಾಗಿದ್ದೀರಿ. ಇದು ಸನಾತನ ಸಂಸ್ಥೆ ಮತ್ತು ದಾವೂದ್ ಬಗ್ಗೆ ಒಟ್ಟಾಗಿ ಚರ್ಚಿಸುವ ಮೂಲಕ ಸಮಾಜದಲ್ಲಿ ಹಿಂದೂ ಸಂಸ್ಥೆಗಳ ಬಗ್ಗೆ ಅಪಪ್ರಚಾರ ಮಾಡುವ ಸಂಚಾಗಿದೆ. ಈ ಪ್ರಕರಣದಲ್ಲಿ ನವಾಬ್ ಮಲಿಕ್‌ಗೆ ಮಹಾರಾಷ್ಟ್ರ ಸರಕಾರ ತಿಳುವಳಿಕೆ ನೀಡಬೇಕು, ಎಂದು ನಿರೀಕ್ಷಿಸುತ್ತೇವೆ.
ನವಾಬ್ ಮಲಿಕ್ ಸನಾತನ ಸಂಸ್ಥೆಯ ಹೆಸರನ್ನು ಉಚ್ಚರಿಸಿ ಮಹಾರಾಷ್ಟ್ರದ ಪ್ರತಿಪಕ್ಷದ ನಾಯಕ ಮಾನ್ಯ ದೇವೇಂದ್ರ ಫಡಣವಿಸ್ ಇವರ ಆರೋಪವನ್ನು ತಳ್ಳಿಹಾಕಲು ಪ್ರಯತ್ನಿಸಿದರು. ವಾಸ್ತವದಲ್ಲಿ, ನವಾಬ್ ಮಲಿಕ್ ಅವರ ಮೇಲೆ ಭಯೋತ್ಪಾದಕರಿಂದ ನೇರವಾಗಿ ಭೂಮಿಯನ್ನು ತೆಗೆದುಕೊಂಡಿರುವ ಆರೋಪವಿದೆ. ಆದರೆ ನವಾಬ್ ಮಲಿಕ್ ಇವರು ಉಲ್ಲೇಖಿಸಿದ ದಾವೂದ್‌ಗೆ ಸೇರಿದ ಭೂಮಿಯನ್ನು ಕೇಂದ್ರ ಸರಕಾರವು ವಶಪಡಿಸಿಕೊಂಡು ಹರಾಜು ಮಾಡಿದೆ. ಆದ್ದರಿಂದ ನ್ಯಾಯವಾದಿ ಶ್ರೀವಾಸ್ತವ ಕೂಡ ಅದು ದಾವೂದ್‌ನಿಂದ ಖರೀದಿಸದೆ ಸರಕಾರಿ ಹರಾಜಿನ ಮೂಲಕ ಖರೀದಿಸಿದ್ದಾರೆ. ಎಂಬುದನ್ನು ಅವರು ಗಮನದಲ್ಲಿಡಬೇಕು. ಆದ್ದರಿಂದ ಸುಳ್ಳು ಮಾಹಿತಿಯ ಆಧಾರದಲ್ಲಿ ‘ಕಳ್ಳನಿಗೊಂದು ಪಿಳ್ಳೆ ನೆವ’ ಎಂಬ ತಮ್ಮ ಪ್ರಯತ್ನವು ಬಯಲಾಗಿದೆ. ಈ ಕುರಿತು ಸನಾತನ ಸಂಸ್ಥೆಯ ಬಗ್ಗೆ ಸುಳ್ಳು ಮಾಹಿತಿ ಹರಡಲು ಪ್ರಯತ್ನಿಸಿದರೆ ಬೇರೆ ಪರ್ಯಾಯವಿಲ್ಲದೇ ನಮಗೆ ಕಾನೂನು ಕ್ರಮ ಜರುಗಿಸಬೇಕಾಗಬಹುದು, ಎಂದು ಈ ಪತ್ರಿಕಾ ಪ್ರಕಟಣೆಯ ಮೂಲಕ ನಾವು ಎಚ್ಚರಿಸುತ್ತಿದ್ದೇವೆ ಎಂದು ಶ್ರೀ. ಚೇತನ ರಾಜಹಂಸ,
ವಕ್ತಾರರು, ಸನಾತನ ಸಂಸ್ಥೆ,
(ಸಂಪರ್ಕ ಸಂಖ್ಯೆ : 77758 58387) ತಿಳಿಸಿದ್ದಾರೆ.