ಮೀನುಗಾರಿಕೆಯ ಬೋಟ್ ನಲ್ಲಿ ಬೆಂಕಿ | ಮೀನುಗಾರರ ರಕ್ಷಣೆ

Share the Article

ಭಟ್ಕಳ :ಮೀನುಗಾರಿಕೆ ಮಾಡುತ್ತಿದ್ದ ಬೋಟ್ ನಲ್ಲಿ ಶಾರ್ಟ್ ಸರ್ಕಿಟ್ ನಿಂದ ಬೆಂಕಿ ಉಂಟಾಗಿ ಹೊತ್ತಿ ಉರಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅರಬ್ಬಿ ಸಮುದ್ರದಲ್ಲಿ ನಡೆದಿದೆ.

ಬೋಟ್‌ನಲ್ಲಿದ್ದ ಏಳು ಮಂದಿ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

‘ವರದಾ’ ಹೆಸರಿನ ಮೀನುಗಾರಿಕೆ ಬೋಟ್ ನಲ್ಲಿ ತಾಂತ್ರಿಕ ದೋಷದಿಂದ ಬೆಂಕಿ ಕಾಣಿಸಿದ್ದು,ಏಳು ಮಂದಿ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ ಎಂದು ಕರಾವಳಿ ಕಾವಲು ಪಡೆಯವರು ತಿಳಿಸಿದ್ದಾರೆ.

Leave A Reply