ಪಟಾಕಿ ಚೀಲದ ಮೇಲೆ ಮಗನನ್ನು ಕೂರಿಸಿ ಹೊರಟ ಅಪ್ಪ | ಪಟಾಕಿ ಸ್ಫೋಟಗೊಂಡು ಬೆಳಕಿನ ಹಬ್ಬದಂದೆ ಬಲಿಯಾಯಿತು ಇರಡು ಜೀವ

Share the Article

ದೀಪಾವಳಿಯನ್ನು ದೇಶದೆಲ್ಲೆಡೆ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಪೂಜೆ-ಪುನಸ್ಕಾರ, ದೀಪ ಹಚ್ಚಿ ಪಟಾಕಿ ಸಿಡಿಸುತ್ತಾ ಸಂಭ್ರಮದಲ್ಲಿ ಮುಳುಗಿಹೋಗಿದ್ದಾರೆ ದೇಶದ ಜನತೆ.

ಅದಲ್ಲದೆ ಕೊನೆಯ ದಿನವಾದ ಇಂದು ಪಟಾಕಿ ಹೊಡೆಯುವವರ ಸಂಖ್ಯೆ ಅತ್ಯಧಿಕವಾಗಿರುತ್ತದೆ. ಅದಕ್ಕಾಗಿ ನಿನ್ನೆಯಿಂದಲೇ ಪಟಾಕಿ ಖರೀದಿ ಜೋರಾಗಿದ್ದು, ಹಾಗೆ ಖರೀದಿಸಿದ ಪಟಾಕಿಯನ್ನು ಸಾಗಿಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಇಲ್ಲೊಂದು ಕಡೆ ಅಂಥ ಪಟಾಕಿ ಮೂಟೆ ಅಪ್ಪ-ಮಗ ಇಬ್ಬರನ್ನೂ ಬಲಿ ಪಡೆದಿದೆ.

ಪುದುಚೇರಿಯ ಅರಿಯನ್‌ಕುಪ್ಪಮ್ ನಗರದ ನಿವಾಸಿ ಕಲೈನೇಶನ್ (32) ಮತ್ತು ಅತನ ಪುತ್ರ ಪ್ರದೀಶ್ (7) ಪಟಾಕಿ ಮೂಟೆಯ ಸ್ಫೋಟಕ್ಕೆ ಬಲಿಯಾದವರು. ಪಟಾಕಿ ಚೀಲದ ಮೇಲೆ ಮಗನನ್ನು ಕೂರಿಸಿಕೊಂಡು ಹೋಗುತ್ತಿದ್ದಾಗ ವಿಲ್ಲುಪುರಂ ಜಿಲ್ಲೆಯ ಕೊಟ್ಟಕುಪ್ಪಂ ಬಳಿ ಈ ದುರಂತ ಸಂಭವಿಸಿದೆ.

ಕೊಟ್ಟಕುಪ್ಪಂ ಬಳಿ ಪಟಾಕಿ ಚೀಲದಲ್ಲಿದ್ದ ಸುಡುಮದ್ದು ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಅಪ್ಪ-ಮಗ ಇಬ್ಬರೂ ಸ್ಥಳದಲ್ಲೇ ಸಾವಿಗೀಡಾಗಿದ್ದಲ್ಲದೆ, ಹತ್ತಿರದಲ್ಲಿ ಮತ್ತೊಂದು ಬೈಕ್‌ನಲ್ಲಿ ಸಾಗುತ್ತಿದ್ದ ಇನ್ನಿಬ್ಬರು ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ.

Leave A Reply