ಕಡಬ : ಹಾವನ್ನೇ ಹಿಡಿದು ಎಳೆದೊಯ್ದ ಇಲಿ

Share the Article

ಕಡಬ : ಸಾಮಾನ್ಯವಾಗಿ ಹಾವುಗಳು ಇಲಿ ಹಿಡಿಯುವುದು ನೋಡಿದ್ದೇವೆ.ಆದರೆ ಇಲ್ಲಿ ಮಾತ್ರ ವಿರುದ್ಧ ಘಟನೆ ನಡೆದು ಇಲಿಯೊಂದು ಹಾವನ್ನೇ ಹಿಡಿದಿದೆ.

ಕಡಬ ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಕಳಾರ ಎಂಬಲ್ಲಿ ಪುಟ್ಟ ಇಲಿಯೊಂದು ಹಾವಿನೊಂದಿಗೆ ಕಾದಾಡಿ ಕೊನೆಗೆ ಹಾವನ್ನೇ ಹಿಡಿದುಕೊಂಡು ಪೊದೆಯೊಳಗೆ ಹೋಗಿದೆ.

ಕಳಾರದ ಗಣೇಶ್ ಎಂಬವರ ದಿನಸಿ ಅಂಗಡಿಯ ಮುಂದೆ ಸೋಮವಾರ ಸಂಜೆ ಸಣ್ಣ ಕೇರೆ ಹಾವಿನ ಮರಿಯೊಂದಿಗೆ ಇಲಿಯೊಂದು ಕಾದಾಡಿ ಕೊನೆಗೆ ಇಲಿಯು ಹಾವನ್ನೇ ಹಿಡಿದುಕೊಂಡು ಪೊದೆಯೊಳಗಡೆ ಮರೆಯಾಗಿದೆ.ಗಣೇಶ್ ಅವರ ಅಂಗಡಿಯಲ್ಲಿದ್ದ ಗ್ರಾಹಕರೋರ್ವರು ಈ ದೃಶ್ಯವನ್ನು ತನ್ನ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

Leave A Reply